ಸತತ ಎರಡನೇ ಟಿ20 ವಿಶ್ವಕಪ್ ಗೆದ್ದ ಭಾರತಕ್ಕೆ 131 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ! | Bcci Announces 131 Crore Rupees Reward For Team India After T20 World Cup Triumph Kvn

ಸತತ ಎರಡನೇ ಟಿ20 ವಿಶ್ವಕಪ್ ಗೆದ್ದ ಭಾರತಕ್ಕೆ 131 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ! | Bcci Announces 131 Crore Rupees Reward For Team India After T20 World Cup Triumph Kvn



ಸತತ ಎರಡನೇ ಟಿ20 ವಿಶ್ವಕಪ್ ಗೆದ್ದ ಭಾರತಕ್ಕೆ 131 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ! | Bcci Announces 131 Crore Rupees Reward For Team India After T20 World Cup Triumph Kvn

2026ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 131 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಸತತವಾಗಿ ಟ್ರೋಫಿ ಉಳಿಸಿಕೊಂಡ ಭಾರತ ತಂಡದ ಆಟಗಾರರು, ಸಹಾಯಕ ಸಿಬ್ಬಂದಿ ಈ ಮೊತ್ತವನ್ನು ಹಂಚಿಕೊಳ್ಳಲಿದ್ದಾರೆ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ 131 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿತ್ತು. ಈ ಮೂಲಕ ಭಾರತ ಮೂರನೇ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಆಗಿದ್ದು, ಸತತವಾಗಿ ಟ್ರೋಫಿ ಉಳಿಸಿಕೊಂಡ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಟೂರ್ನಿಯಲ್ಲಿ ಭಾರತ ತಂಡದ ಪಯಣ ಅಷ್ಟು ಸುಲಭವಾಗಿರಲಿಲ್ಲ. ಸೂಪರ್ 8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಕಂಡಿತ್ತು. ಆದರೆ, ಆ ಸೋಲಿನಿಂದ ಪುಟಿದೆದ್ದ ತಂಡ, ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದು ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು.

Scroll to load tweet…

ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಚಾಣಾಕ್ಷ ನಾಯಕತ್ವದಿಂದ ತಂಡವನ್ನು ಮುನ್ನಡೆಸಿದರು. ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ತಮ್ಮ ಆಲ್ರೌಂಡ್ ಪ್ರದರ್ಶನದಿಂದ ಮಿಡಲ್ ಆರ್ಡರ್ ಅನ್ನು ಬಲಪಡಿಸಿದರು ಮತ್ತು ಬೌಲಿಂಗ್‌ನಲ್ಲೂ ಪ್ರಮುಖ ವಿಕೆಟ್‌ಗಳನ್ನು ಪಡೆದರು. ಜಸ್ಪ್ರೀತ್ ಬುಮ್ರಾ ಬೌಲಿಂಗ್ ವಿಭಾಗದ ನೇತೃತ್ವ ವಹಿಸಿ, ಒತ್ತಡದ ಸಂದರ್ಭಗಳಲ್ಲಿ ವಿಕೆಟ್ ಪಡೆದು ಮಿಂಚಿದರು.

ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಕ್ಲಿಷ್ಟಕರ ಪಂದ್ಯಗಳಲ್ಲಿ ಮ್ಯಾಚ್-ವಿನ್ನಿಂಗ್ ಇನ್ನಿಂಗ್ಸ್ ಆಡಿದರು. ಯುವ ಪ್ರತಿಭೆ ಅಭಿಷೇಕ್ ಶರ್ಮಾ ಕೂಡ ತಮ್ಮ ನಿರ್ಭೀತ ಬ್ಯಾಟಿಂಗ್‌ನಿಂದ ತಂಡಕ್ಕೆ ಫೈನಲ್‌ನಲ್ಲಿ ಬಲ ತಂದುಕೊಟ್ಟರು. ಈ ಎಲ್ಲರ ಒಟ್ಟಾರೆ ಪ್ರದರ್ಶನವೇ ಭಾರತದ ಗೆಲುವಿಗೆ ಕಾರಣವಾಯಿತು.

ಬಹುಮಾನ ಹಂಚಿಕೆ ಹೇಗೆ?

ಈ 131 ಕೋಟಿ ರೂಪಾಯಿ ಬಹುಮಾನದ ಮೊತ್ತವನ್ನು ಆಟಗಾರರು, ಕೋಚ್‌ಗಳು ಮತ್ತು ಸಹಾಯಕ ಸಿಬ್ಬಂದಿ ನಡುವೆ ಹಂಚಲಾಗುತ್ತದೆ. ಈ ಬಹುಮಾನವು ಕೇವಲ ವೈಯಕ್ತಿಕ ಪ್ರದರ್ಶನಕ್ಕೆ ಮಾತ್ರವಲ್ಲ, ಇಡೀ ತಂಡದ ಸಾಮೂಹಿಕ ಪ್ರಯತ್ನ, ಸಿದ್ಧತೆ ಮತ್ತು ಹೋರಾಟದ ಮನೋಭಾವಕ್ಕೆ ಸಂದ ಗೌರವ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ. ತಂಡದ ಪ್ರತಿಯೊಬ್ಬ ಸದಸ್ಯನ ಕೊಡುಗೆಯೂ ಈ ಗೆಲುವಿನಲ್ಲಿ ಮಹತ್ವದ್ದಾಗಿದ್ದು, ಈ ಬಹುಮಾನವು ಎಲ್ಲರ ಯಶಸ್ಸಿನ ಸಂಕೇತವಾಗಿದೆ ಎಂದು ಬೋರ್ಡ್ ತಿಳಿಸಿದೆ.

ಐಸಿಸಿಯಿಂದಲೂ ಬಂಪರ್ ಬಹುಮಾನ

ಇನ್ನು ಸತತ ಎರಡನೇ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಟ್ರೋಫಿ ಜಯಿಸಿದ ಭಾರತ ತಂಡಕ್ಕೆ ಐಸಿಸಿಯಿಂದಲೂ ಬಂಪರ್ ಬಹುಮಾನ ಸಿಕ್ಕಿದೆ. ಕಿವೀಸ್ ಮಣಿಸಿದ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾಗೆ ಐಸಿಸಿ ಬರೋಬ್ಬರಿ 27.58 ಕೋಟಿ ರುಪಾಯಿ ನಗದು ಬಹುಮಾನ ನೀಡಿದೆ. ಇನ್ನು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿ ಫೈನಲ್‌ನಲ್ಲಿ ಮುಗ್ಗರಿಸಿದ ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಜಿಲೆಂಡ್ ತಂಡವು 14.70 ಕೋಟಿ ರುಪಾಯಿ ತಮ್ಮದಾಗಿಸಿಕೊಂಡಿದೆ.

ಭಾರತ ಈಗ ಐಸಿಸಿಯ 5 ಟೂರ್ನೀಲಿ ಹಾಲಿ ಚಾಂಪಿಯನ್‌!

ಭಾರತ ಈಗ ಏಕಕಾಲಕ್ಕೆ ಐಸಿಸಿಯ 5 ಟ್ರೋಫಿಗಳನ್ನು ತನ್ನಲ್ಲಿಟ್ಟುಕೊಂಡಿದೆ. ಸದ್ಯ ಭಾರತದ ಬಳಿ ಮಹಿಳಾ ಅಂಡರ್‌-19 ವಿಶ್ವಕಪ್‌, ಪುರುಷರ ಅಂಡರ್‌ -19 ವಿಶ್ವಕಪ್‌, ಮಹಿಳಾ ಏಕದಿನ ವಿಶ್ವಕಪ್‌, ಚಾಂಪಿಯನ್ಸ್‌ ಟ್ರೋಫಿ ಹಾಗೂ ಪುರುಷರ ಟಿ20 ವಿಶ್ವಕಪ್‌ ಟ್ರೋಫಿಗಳಿವೆ.

ಆವೃತ್ತಿಯೊಂದರಲ್ಲಿ 100+ ಸಿಕ್ಸರ್‌ ಸಿಡಿಸಿದ ಮೊದಲ ತಂಡ ಭಾರತ!

ಭಾರತ ತಂಡ ಈ ಬಾರಿ ಟೂರ್ನಿಯಲ್ಲಿ 106 ಸಿಕ್ಸರ್‌ ಸಿಡಿಸಿದ್ದು, ವಿಶ್ವಕಪ್‌ ಆವೃತ್ತಿಯೊಂದರಲ್ಲಿ ಈ ಸಾಧನೆ ಮಾಡಿದ ಮೊದಲ ತಂಡ ಎನಿಸಿಕೊಂಡಿತು. ವೆಸ್ಟ್‌ಇಂಡೀಸ್‌ ಈ ಬಾರಿ 76 ಸಿಕ್ಸರ್‌ ಬಾರಿಸಿದ್ದು, ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ತಂಡಗಳ ಪೈಕಿ 2ನ ಸ್ಥಾನದಲ್ಲಿದೆ.



Source link

Leave a Reply

Your email address will not be published. Required fields are marked *