ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದ 62 ಜನರು ಪ್ರಯಾಣಿಸುತ್ತಿದ್ದ ಕೆಕೆಆರ್‌ಟಿಸಿ ಬಸ್

ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದ 62 ಜನರು ಪ್ರಯಾಣಿಸುತ್ತಿದ್ದ ಕೆಕೆಆರ್‌ಟಿಸಿ ಬಸ್

ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದ 62 ಜನರು ಪ್ರಯಾಣಿಸುತ್ತಿದ್ದ ಕೆಕೆಆರ್‌ಟಿಸಿ ಬಸ್

ಕೂಡ್ಲಿಗಿ ಹೊರವಲಯದಲ್ಲಿ, ಬೈಕ್‌ಗೆ ದಾರಿ ಬಿಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಕೆಕೆಆರ್‌ಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಚಾಲಕ, ನಿರ್ವಾಹಕ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್‌ನಲ್ಲಿ ಒಟ್ಟು 62 ಮಂದಿ ಪ್ರಯಾಣಿಸುತ್ತಿದ್ದರು.

ಕೆಕೆಆರ್‌ಟಿಸಿ ಬಸ್ ಮರಕ್ಕೆ ಡಿಕ್ಕಿಯಾಗಿ ಚಾಲಕ, ನಿರ್ವಾಹಕ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹೊರವಲಯದಲ್ಲಿ ಅಪಘಾತ ಸಂಭವಿಸಿದೆ. ಅಪಘಾತಕ್ಕೊಳಗಾದ ಬಸ್‌ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 62 ಜನರು ಪ್ರಯಾಣಿಸುತ್ತಿದ್ದರು.

ಕೂಡ್ಲಿಗಿ ಘಟಕಕ್ಕೆ ಸೇರಿದ ಬಸ್ ಇಂದು ಬೆಳಗ್ಗೆ ಕಸಾಪುರಕ್ಕೆ ಹೋಗಿ ಮರಳಿ ನಗರಕ್ಕೆ ಬರುತ್ತಿತ್ತು. ಪಟ್ಟಣದ ಗುಡೇಕೋಟೆ ರಸ್ತೆಯಲ್ಲಿನ ಸಾಗರ ಡಾಬಾ ಬಳಿ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಎದುರಿಗೆ ಬರುತ್ತಿದ್ದ ಬೈಕ್‌ಗೆ ತಪ್ಪಿಸಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ ಬಲ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.

ಬಸ್ ಚಾಲಕ ಶಶಿಧರ್ ಅವರ ಬಲಗಾಲಿಗೆ ಗಾಯವಾಗಿದ್ದು, ಮೂಳೆ ಮುರಿತವಾಗಿರುವ ಸಾಧ್ಯತೆಗಳಿವೆ. ನಿರ್ವಾಹಕ ಪಾಟೀಲ್ ಅವರ ಮುಖಕ್ಕೆ ಪೆಟ್ಟು ಬಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ. ಪ್ರಯಾಣಿಕರಲ್ಲಿ ಕೆಲವರಿಗೆ ಸಣ್ಣ ಪ್ರಮಾಣದ ಗಾಯಳಾಗಿವೆ. ಗಾಯಾಳುಗಳನ್ನು ಕೂಡ್ಲಿಗೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ

ವಿದ್ಯಾರ್ಥಿಗಳು ಸೇರಿದಂತೆ ಬಸ್ಸಿನಲ್ಲಿ 62 ಜನರಿದ್ದರು. ಬೆಳಗ್ಗೆಯ ಸಮಯವಾಗಿದ್ದರಿಂದ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ವಿಷಯ ತಿಳಿದ ಕೂಡ್ಲಿಗಿ ಠಾಣೆಯ ಸಿಪಿಐ ಪ್ರಲ್ಹಾದ್ ಆರ್ ಚನ್ನಗಿರಿ, ಪಿಎಸೈ ಸಿ. ಪ್ರಕಾಶ ಸ್ಥಳಕ್ಕೆ ಭೇಟಿ ನೀಡಿ ಗಾಯಳಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ.

ಇದನ್ನೂ ಓದಿ: ಮಗಳ ಮದುವೆ ಮಾಡಿಸಲು ಸಾಧ್ಯವಾಗದೇ ತಂದೆ ಸಾವು, ಅಪ್ಪನ ಕಳ್ಕೊಂಡ ನೋವಿನಲ್ಲಿ ಪುತ್ರಿ ದುರಂತ ಅಂತ್ಯ

ಕಂಟೈನರನ್ನು ಚಾಲಕ ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನಲ್ಲಿದ್ದ 8 ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ ಅರಗಾ ಗ್ರಾಮದ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ. ಕಾರಿನ ಚಾಲಕ ಸೇರಿ ನಾಲ್ವರು ಪ್ರಯಾಣಿಕರಿಗೆ ಗಾಯಗಳಾಗಿವೆ. ಕಂಟೈನರ್ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕೃತ್ಯ ಎಸಗಿದ ಬಳಿಕ ಪರಾರಿಯಾಗಲು ಯತ್ನಿಸಿದ ಕಂಟೈನರ್ ಚಾಲಕನನ್ನು ಪೊಲೀಸರು ವಶ ಪಡೆದಿದ್ದಾರೆ

ಇದನ್ನೂ ಓದಿ: ಸರ್, ಪ್ಲೀಸ್ ನಮ್ಮಪ್ಪನ 7ನೇ ಮದುವೆ ನಿಲ್ಲಿಸಿ; ಪೊಲೀಸ್ ಠಾಣೆ ಮೆಟ್ಟಿಲೇರಿದ 3ನೇ ಹೆಂಡ್ತಿ ಮಗ

Source link

Leave a Reply

Your email address will not be published. Required fields are marked *