ಹೊಳಪು ಕಳೆದುಕೊಂಡ ಸೂರ್ಯ? ಕೈಕೊಟ್ಟ ಮತ್ತೊಬ್ಬ ಸ್ಟಾರ್ ನಿರ್ದೇಶಕ

ಹೊಳಪು ಕಳೆದುಕೊಂಡ ಸೂರ್ಯ? ಕೈಕೊಟ್ಟ ಮತ್ತೊಬ್ಬ ಸ್ಟಾರ್ ನಿರ್ದೇಶಕ


ಹೊಳಪು ಕಳೆದುಕೊಂಡ ಸೂರ್ಯ? ಕೈಕೊಟ್ಟ ಮತ್ತೊಬ್ಬ ಸ್ಟಾರ್ ನಿರ್ದೇಶಕ

ತಮಿಳಿನ ಸ್ಟಾರ್ ನಟರುಗಳಲ್ಲಿ ಸೂರ್ಯ (ಸೂರ್ಯ) ಸಹ ಒಬ್ಬರು. ದೊಡ್ಡ ಸಂಖ್ಯೆಯ ಅಭಿಮಾನಿಗಳು ಅವರಿಗಿದ್ದಾರೆ. ಆದರೆ ತಮಿಳಿನಿಂದ ಮೊದಲಿನಿಂದಲೂ ನಟನೆ, ಒಳ್ಳೆಯ ಕತೆಗಳ ಆಯ್ಕೆ ಮಾಡಿಕೊಳ್ಳುವ ನಟರಿಗಿಂತಲೂ ಮಾಸ್ ನಟರನ್ನು ಬೆಳೆಸುವುದೇ ಹೆಚ್ಚು. ಕಮಲ್ ಹಾಸನ್ ಸಹ ಹಲವು ಸೋಲು ತಮಿಳಿನಲ್ಲಿ ಕಂಡಿದ್ದಾರೆ. ಇದೀಗ ಸೂರ್ಯ ಸಹ ಇದೆ ಹಾದಿಯಲ್ಲಿದ್ದಾರೆ. ಸೂರ್ಯ ಅವರಿಗೆ ಸತತ ಹಿನ್ನಡೆಗಳು ಎದುರಾಗುತ್ತಿವೆ. ಒಟ್ಟು ಮೂರು ಮಂದಿ ಸ್ಟಾರ್ ನಿರ್ದೇಶಕರು ಸೂರ್ಯ ಜೊತೆ ಕೆಲಸ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ ಈಗ ಹಿಂದೆ ಸರಿದಿದ್ದಾರೆ.

ಚಾಲ್ತಿಯಲ್ಲಿರುವ ನಿರ್ದೇಶಕರಲ್ಲಿ ಒಬ್ಬರಾದ ಲೋಕೇಶ್ ಕನಕರಾಜ್ ಅವರು ಸೂರ್ಯ ಕೈಬಿಟ್ಟಿದ್ದಾರೆ. ಸೂರ್ಯ ಜೊತೆಗೆ ‘ವಡಕೈ’ ಹೆಸರಿನ ಸೂಪರ್ ಹೀರೋ ಸಿನಿಮಾವನ್ನು ಮಾಡುವುದಾಗಿ ಲೋಕೇಶ್ ಹೇಳಿದ್ದಾರೆ. ಆದರೆ ಅದೇ ಕಥೆಯನ್ನು ಈಗ ಹೀರೋ ಅಮೀರ್ ಖಾನ್ ಜೊತೆಗೆ ಮಾಡುತ್ತಿದ್ದಾರೆ ಲೋಕೇಶ್ ಕನಕರಾಜ್. ಸೂರ್ಯ ಅವರು ಈ ಬೆಳವಣಿಗೆಯ ಬಗ್ಗೆ ಹಿಂದೆ ಬೇಸರ ವ್ಯಕ್ತಪಡಿಸಿದರು.

ಅದಾದ ಬಳಿಕ ಭಾರತದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು ಎನಿಸಿಕೊಳ್ಳುವ ವೆಟ್ರಿಮಾರನ್ ಸಹ ಇದೀಗ ಸೂರ್ಯಗೆ ಕೈಕೊಟ್ಟಂತಿದ್ದಾರೆ. ಸೂರ್ಯ ಜೊತೆಗೆ ‘ವಡಿವಾಸಲ್’ ಹೆಸರಿನ ಸಿನಿಮಾವನ್ನು ವೆಟ್ರಿಮಾರನ್ ಘೋಷಿಸಿದ್ದರು. ಆ ಸಿನಿಮಾ ಇದೆ ವರ್ಷ ಸೆಟ್ಟೇರಲಿದೆ ಎನ್ನಬಹುದು. ಆದರೆ ಈಗ ಆಗಿರುವ ಬೆಳವಣಿಗೆ ನೋಡಿದರೆ ಆ ಸಿನಿಮಾ ನಿಂತೇ ಹೋಯ್ತು ಎನಿಸುತ್ತಿದೆ. ಏಕೆಂದರೆ ವೆಟ್ರಿಮಾರನ್ ಬೇರೆ ಸ್ಟಾರ್ ನಟರುಗಳೊಟ್ಟಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಸಲ್ಮಾನ್ ಖಾನ್ ಚಿತ್ರಕ್ಕೆ ಸಮಂತಾ ಎಂಟ್ರಿ? ರಾಜ್ ಮತ್ತು ಡಿಕೆ ಸಿನಿಮಾಗೆ ಹೆಚ್ಚಿದ ಹೈಪ್

ವೆಟ್ರಿಮಾರನ್ ಅವರು ಪ್ರಸ್ತುತ ‘ಅರಸನ್’ ಹೆಸರಿನ ಸಿನಿಮಾ ನಿರ್ದೇಶಿಸುತ್ತಿದ್ದರು, ಸಿನಿಮಾದಲ್ಲಿ ಸಿಂಭು ನಾಯಕ. ಆ ಸಿನಿಮಾದ ಬಳಿಕ ‘ವಡಿವಾಸಲ್’ ಸೆಟ್ಟೇರಲಿದೆ ಎನ್ನಬಹುದು. ಆದರೆ ಅದು ಸುಳ್ಳಾಗಿದ್ದರೆ, ‘ಅರಸನ್’ ಸಿನಿಮಾದ ಬಳಿಕ ‘ವಡ ಚೆನ್ನೈ 2’ ಮತ್ತು ಕಮಲ್ ಹಾಸನ್ ಅವರೊಟ್ಟಿಗೆ ಹೊಸ ಸಿನಿಮಾದಲ್ಲಿ ವೆಟ್ರಿಮಾರನ್ ತೊಡಗಿಸಿಕೊಂಡಿದ್ದಾರೆ.

ಸೂರ್ಯ ಅವರೊಟ್ಟಿಗೆ ನಿರ್ದೇಶಕ ಬಾಲ ಸಹ ಹೊಸ ಸಿನಿಮಾ ಪ್ರಕಟಿಸಿದ್ದರು. ಆದರೆ ಆ ಸಿನಿಮಾವನ್ನು ಸಹ ನಿಲ್ಲಿಸಬೇಕಾಯ್ತು. ಇನ್ನು ‘ಕಂಗುವ’ ಸಿನಿಮಾದ ಎರಡನೇ ಭಾಗ ಬರಲಿದೆ ಎನ್ನಲಾಗುತ್ತದೆ. ‘ಕಂಗುವ’ ಫ್ಲಾಪ್ ಆದ ಕಾರಣ ಅದು ಸಹ ನಿಂತು ಹೋಗಿದೆ. ಪ್ರಸ್ತುತ ಸೂರ್ಯ ಅವರು ‘ಕರುಪ್ಪು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ‘ವಿಶ್ವನಾಥ್ ಆಂಡ್ ಸಾನ್ಸ್’ ಸಿನಿಮಾದಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *