ಟಾಕ್ಸಿಕ್ ಪೋಸ್ಟ್​​ಪೋನ್‌​ಗೆ ಕಾರಣ ಬ್ಯಾರೇನೆ ಐತಿ..! ಫಸ್ಟ್ ಕಾಪಿ ನೋಡಿ ಅಪ್ಸೆಟ್ ಆದ್ರಾ ರಾಕಿಂಗ್ ಸ್ಟಾರ್..? | Yash Toxic Postponed Not War Or Dhurandhar 2 Here Is The Real Reason Kvn

ಟಾಕ್ಸಿಕ್ ಪೋಸ್ಟ್​​ಪೋನ್‌​ಗೆ ಕಾರಣ ಬ್ಯಾರೇನೆ ಐತಿ..! ಫಸ್ಟ್ ಕಾಪಿ ನೋಡಿ ಅಪ್ಸೆಟ್ ಆದ್ರಾ ರಾಕಿಂಗ್ ಸ್ಟಾರ್..? | Yash Toxic Postponed Not War Or Dhurandhar 2 Here Is The Real Reason Kvn


ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಮುಂದೂಡಲ್ಪಟ್ಟಿದೆ. ಯುದ್ಧ ಅಥವಾ ‘ಧುರಂಧರ್-2’ ಜೊತೆಗಿನ ಸ್ಪರ್ಧೆ ಕಾರಣವಲ್ಲ, ಬದಲಾಗಿ ಸಿನಿಮಾದ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲು ಯಶ್ ಕೆಲವು ದೃಶ್ಯಗಳನ್ನು ರೀ-ಶೂಟ್ ಮಾಡಲು ನಿರ್ಧರಿಸಿದ್ದೇ ನಿಜವಾದ ಕಾರಣ ಎಂದು ಈ ಲೇಖನ ವಿವರಿಸುತ್ತದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಪೋಸ್ಟ್ ಪೋನ್ ಆಗಿದ್ದು, ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ನಿರಾಸೆ ತಂದಿತ್ತು. ಮಧ್ಯಪ್ರಾಚ್ಯದಲ್ಲಿ ನಡೀತಾ ಇರೋ ಯುದ್ಧವೇ ಟಾಕ್ಸಿಕ್ ಸಿನಿಮಾ ಮುಂದೂಡಲಿಕ್ಕೆ ಕಾರಣ ಅಂತ ತಂಡ ಹೇಳಿಕೊಂಡಿದೆ. ಬಾಲಿವುಡ್ ಮಂದಿ ಟಾಕ್ಸಿಕ್ ಪೋಸ್ಟ್ ಪೋನ್ ಆಗಲಿಕ್ಕೆ ಧುರಂಧರ್ -2 ಕಾರಣ ಅಂತಿದ್ದಾರೆ. ಆದ್ರೆ ಯುದ್ಧನೂ ಅಲ್ಲ, ಧುರಂಧರ್ ಭಯನೂ ಅಲ್ಲ. ಟಾಕ್ಸಿಕ್ ಪೋಸ್ಟ್ ಪೋನ್ ಹಿಂದಿನ ಅಸಲಿ ಕಾರಣ ನಾವ್ ಹೇಳ್ತಿವಿ ಕೇಳಿ.

ಯುದ್ಧ ಕಾರಣವಲ್ಲ, ಧುರಂಧರ್‌ಗೂ ಹೆದರಿಲ್ಲ!

ಯೆಸ್ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷೆಯ ಸಿನಿಮಾ ಟಾಕ್ಸಿಕ್ ಮಾರ್ಚ್ 19ಕ್ಕೆ ತೆರೆಗೆ ಬರಬೇಕಿತ್ತು. ಇನ್ನೇನು ರಿಲೀಸ್‌ಗೆ ಎರಡು ವಾರ ಇರೋವಾಗ ಚಿತ್ರತಂಡ ಬಿಡುಗಡೆಯನ್ನ ಮುಂದಕ್ಕೆ ಹಾಕ್ತು. ಮಧ್ಯಪ್ರಾಚ್ಯದಲ್ಲಿ ನಡೀತಾ ಇರೋ ಯುದ್ಧದ ಕಾರಣದಿಂದ ಸಿನಿಮಾ ಮುಂದಕ್ಕೆ ಹಾಕಿದ್ದೀವಿ ಅಂತ ಅನೌನ್ಸ್ ಮಾಡ್ತು. ಇದು ಯಶ್ ಫ್ಯಾನ್ಸ್‌ಗಂತೂ ಸಿಕ್ಕಾಪಟ್ಟೆ ಬೇಸರ ತಂದಿದೆ. ಕೆಜಿಎಫ್ 2 ನಂತರ ಯಶ್‌ನ ಬಿಗ್ ಸ್ಕ್ರೀನ್ ಮೇಲೆ ನೋಡೋದಕ್ಕೆ ಬರೊಬ್ಬರಿ 4 ವರ್ಷ ಕಾದಿರೋ ಫ್ಯಾನ್ಸ್‌ಗೆ ಸಹಜವಾಗೆ ನಿರಾಸೆ ಆಗಿಯೇ ಆಗಿರುತ್ತೆ.

ಧುರಂಧರ್-2 ಕ್ರೇಜ್ ನೋಡಿ ಹಿಂದೆ ಸರಿದರಾ ಯಶ್?

ಹೌದು, ಮಾರ್ಚ್ 19ಕ್ಕೆ ರಣವೀರ್ ಸಿಂಗ್ ನಟನೆಯ ಧುರಂಧರ್2 ರಿಲೀಸ್ ಆಗ್ತಾ ಇದೆ. ಮೊದಲ ಭಾಗ ದೊಡ್ಡ ಯಶಸ್ಸು ಕಂಡಿದ್ದು ಧುರಂಧರ್-2 ಬಗ್ಗೆ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿಯಾಗಿದೆ. ಟಾಕ್ಸಿಕ್ ಧುರಂಧರ್-2 ಮುಖಾಮುಖಿ ಆದ್ರೆ ಅದು ಸಿನಿ ಇತಿಹಾಸದ ಅತಿದೊಡ್ಡ ಬಾಕ್ಸಾಫೀಸ್ ಕ್ಲಾಶ್ ಆಗುತ್ತೆ ಅಂತ ಸಿನಿ ಪಂಡಿತರು ಭವಿಷ್ಯ ನುಡಿದಿದ್ರು.

ಉತ್ತರ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಟಾಕ್ಸಿಕ್​ಗಿಂತ ಧುರಂಧರ್-2 ಕ್ರೇಜ್ ಜಾಸ್ತಿ ಇದ್ದಿದ್ದು ನಿಜವೇ. ಒಂದು ವೇಳೆ ಕ್ಲಾಶ್ ಆಗಿದ್ರೆ ಎರಡೂ ತಂಡಗಳಿಗೆ ಸಾಕಷ್ಟು ಲಾಸ್ ಆಗ್ತಾ ಇತ್ತು. ಹಾಗಂತ ಧುರಂಧರ್​ ಕ್ರೇಜ್‌​ಗೆ ಯಶ್ ಬೆದರಿದ್ದಾರೆ ಅನ್ನೋದು ಕೂಡ ನಿಜವಲ್ಲ.

ಟಾಕ್ಸಿಕ್ ಫಸ್ಟ್ ಕಾಪಿ ನೋಡಿ ಅಪ್ಸೆಟ್ ಆದ್ರಾ ಯಶ್?

ಟಾಕ್ಸಿಕ್ ಸಿನಿಮಾ ಜೂನ್ 4ಕ್ಕೆ ಬಿಡುಗಡೆ ಆಗಲಿದೆ. ಈ ನಡುವೆ ಸಿನಿಮಾದ ರೀ ಶೂಟ್‌ಗೆ ತಯಾರಿ ನಡೆಯಲಿದೆ ಅನ್ನೋ ಸುದ್ದಿ ಹರಿದಾಡ್ತಾ ಇವೆ. ಹೌದು ಕೆಲ ಸನ್ನಿವೇಶಗಳನ್ನ ರೀ ಶೂಟ್ ಮಾಡೋದಕ್ಕೆ ಟಾಕ್ಸಿಕ್ ಟೀಂ ಸಜ್ಜಾಗಿದೆಯಂತೆ. ಹಾಗಾದ್ರೆ ಯಶ್ ಅಂದುಕೊಂಡಂತೆ ಸಿನಿಮಾ ಮೂಡಿಬಂದಿಲ್ವಾ. ಫಸ್ಟ್ ಕಾಪಿ ನೋಡಿ ಯಶ್ ಅಪ್ಸೆಟ್ ಆದ್ರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿವೆ. ನಿಜ ಏನಂದ್ರೆ ಈ ಸಿನಿಮಾ ವಿಚಾರವಾಗಿ ಯಶ್ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ಕೆಜಿಎಫ್ -2 ನಂತರ ಇದಕ್ಕಾಗಿ 4 ವರ್ಷಗಳನ್ನ ವ್ಯಯಿಸಿದ್ದಾರೆ.

ಪರ್ಫೆಕ್ಷನ್ ಬೇಡುವ ಫಿಲ್ಮ್ ಮೇಕರ್ಸ್​​ ಗೆ ಇನ್ನೂ ಬೆಟರ್ ಮಾಡಬೇಕು ಅನ್ನೋ ತುಡಿತ ಇದ್ದೇ ಇರುತ್ತೆ. ಯಶ್​ ಕೂಡ ಅದೇ ರೀತಿ ರಿಲೀಸ್ ಪೋಸ್ಟ್ ಪೋನ್ ಆಗಿರೋದ್ರಿಂದ ಸಿನಿಮಾವನ್ನ ಇನ್ನಷ್ಟು ಬೆಟರ್ ಮಾಡೋಣ ಅಂತ ರೀ ಶೂಟ್ ಮಾಡ್ತಾ ಇದ್ದಾರೆ.

ಯಶ್ ಈ ಸಿನಿಮಾಗೆ ಸಹ ಬರಹಗಾರ ಮತ್ತು ಸಹ ನಿರ್ಮಾಪಕ ಕೂಡ . ಭಾರತೀಯ ಭಾಷೆಗಳ ಜೊತೆಗೆ ಇಂಗ್ಲೀಶ್‌ನಲ್ಲೂ ಸಿನಿಮಾ ಸಿದ್ದವಾಗಿದೆ. ಸೋ ರಿಲೀಸ್ ಕೊನೆತನಕ ಸಣ್ಣ ಪುಟ್ಟ ಬದಲಾವಣೆ ಕರೆಕ್ಷನ್ಸ್ ಇದ್ದೇ ಇರುತ್ವೆ. ರೀ ಶೂಟ್ ಅಂದಕೂಡಲೇ ಫ್ಯಾನ್ಸ್ ಹೆದರೋ ಅಗತ್ಯ ಏನಿಲ್ಲ. ಸಿನಿಮಾ ಇನ್ನಷ್ಟು ಚೆನ್ನಾಗಿ ಸಿದ್ದವಾಗ್ತಾ ಇದೆ ಅಂದುಕೊಳ್ಳಬಹುದು. ಎನಿ ವೇ ಜೂನ್ 4ರಂದು ಟಾಕ್ಸಿಕ್ ನೋಡ್ಲಿಕ್ಕೆ ಕಾಯೋಣ.!

ಅಮೀತ್ ದೇಸಾಯಿ, ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.



Source link

Leave a Reply

Your email address will not be published. Required fields are marked *