
ಬಾಲಿವುಡ್ ಅಮೀರ್ ಖಾನ್ (ಅಮೀರ್ ಖಾನ್) ಅವರು ಪರ್ಫೆಕ್ಷನಿಸ್ಟ್ ಎನಿಸಿಕೊಂಡಿದ್ದಾರೆ. ಅವರನ್ನು ಸಾಕಷ್ಟು ಗೌರವಿಸುತ್ತಾರೆ. ಈಗ ಅವರು ಸುಳ್ಳು ಹೇಳಿ ಸಿಕ್ಕಿ ಬಿದ್ದಿದ್ದಾರೆ. ‘ಸಿತಾರೆ ಜಮೀನ್ ಪರ್’ ಸಿನಿಮಾ ಈ ಮೊದಲು ಥಿಯೇಟರ್ ನಲ್ಲಿ ರಿಲೀಸ್ ಆಯಿತು. ಆ ಬಳಿಕ ಯೂಟ್ಯೂಬ್ ನಲ್ಲಿ ರಿಲೀಸ್ ಆಯಿತು. ಈ ವೇಳೆ ಅಮೀರ್ ಖಾನ್ ಹೇಳಿದ ಸುಳ್ಳು ಈಗ ಹೊರ ಬಿದ್ದಿದೆ. ಅವರಿಗೆ ಸಾಕಷ್ಟು ಟ್ರೋಲ್ ಮಾಡುತ್ತಾ ಇದ್ದಾರೆ.
ಅಮೀರ್ ಖಾನ್ ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾವನ್ನು ಒಟಿಟಿಗೆ ಮಾರಾಟ ಮಾಡಲಿಲ್ಲ. ಚಿತ್ರಮಂದಿರಗಳಲ್ಲಿ ಭಾರಿ ಹಿಟ್ ಆದ ಈ ಚಿತ್ರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಯೂಟ್ಯೂಬ್‌ನಲ್ಲಿ ಯಾರಿಗೆ ಬೇಕಾದರೂ ಕೇವಲ 100 ರೂಪಾಯಿ ನೀಡಿ ಸಿನಿಮಾ ನೋಡಬಹುದಿತ್ತು. ಒಮ್ಮೆ ಕಂಡರೆ 48 ಗಂಟೆಗಳವರೆಗೆ ಈ ಚಿತ್ರ ನೋಡುವ ಅವಕಾಶವಿತ್ತು. ಹೆಚ್ಚು ಜನರಿಗೆ ತಲುಪಬೇಕು ಎಂಬ ಕಾರಣಕ್ಕೆ ನಾವು ಈ ರೀತಿ ಮಾಡಿದ್ದೆವು ಎಂದು ಅವರು ಹೇಳಿದರು.
ಆ ಸಮಯದಲ್ಲಿ ಅಮೀರ್ ಖಾನ್ ಮಾತನಾಡಿದ್ದು ಕೇಳಿ, ಸಿನಿಮಾ ಒಟಿಟಿಗೆ ಬರೋದಿಲ್ಲ, ಅವರಿಗೆ ಜನರ ಬಗ್ಗೆ ಸಾಕಷ್ಟು ಪ್ರೀತಿ ಇದೆ ಎಂದೆಲ್ಲ ಜನರು ಅಂದುಕೊಂಡಿದ್ದರು. ಆದರೆ, ಇದು ಸುಳ್ಳು ಎಂಬುದು ಈಗ ಗೊತ್ತಾಗಿದೆ. ಏಕೆಂದರೆ, ಸೋನಿ ಲಿವ್ ಅಲ್ಲಿ ಈ ಸಿನಿಮಾ ಪ್ರಸಾರ ಕಾಣಲಿದೆ. ದಿನಾಂಕ ಇನ್ನೂ ಫೈನಲ್ ಆಗಿಲ್ಲ.
ಇದನ್ನೂ ಓದಿ: ‘ಧುರಂದರ್’ ಗೆಲುವಿನ ಬಗ್ಗೆ ಅಮೀರ್ ಖಾನ್ ಗೆ ಪೂರ್ಣ ಸಂತೋಷವಿಲ್ಲ
ಸದ್ಯ ಆಮಿರ್ ಖಾನ್ ಅವರನ್ನು ಎಲ್ಲರೂ ಟ್ರೋಲ್ ಮಾಡುತ್ತಿದ್ದಾರೆ. ಅವರು ನಡೆದುಕೊಂಡ ರೀತಿ ಸರಿ ಅಲ್ಲ ಎಂದು ಅನೇಕರು ಹೇಳಿದ್ದಾರೆ. ದುಡ್ಡಿಗಾಗಿ ಅವರು ಸುಳ್ಳು ಹೇಳಿದ್ದಾರೆ ಎಂದೆಲ್ಲ ಅವರು ಆರೋಪಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.