
ದಾವಣಗೆರೆ, (ಮಾರ್ಚ್ 10): ತಮ್ಮ ಪ್ರೀತಿಗೆ (ಪ್ರೀತಿ) ವಿರೋಧ ವ್ಯಕ್ತವಾದ ಹಿಂದೂ ಮುಸ್ಲಿಂ (ಹಿಂದೂ ಮುಸ್ಲಿಂ) ಜೋಡಿಯೊಂದು ತುಂಗಾಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆ (ದಾವಣಗೆರೆ) ಜಿಲ್ಲೆಯ ಹೊನ್ನಾಳಿ ಪಟ್ಟಣದ ತುಂಗಭದ್ರ ಸೇತುವೆ ಬಳಿ ನಡೆದಿದೆ. ಅದೃಷ್ಟವಶಾತ್ ನದಿಯಲ್ಲಿ ನೀರು ಕಡಿಮೆ ಇದ್ದರಿಂದ ಪ್ರೇಮಿಗಳು ಬದುಕುಳಿದಿದ್ದಾರೆ. ಸಾಯಲು ಯತ್ನಿಸಿದವರನ್ನು ದಾವಣಗೆರೆ ನಗರದ ಬಾಡಾ ಕ್ರಾಸ್ ಬಳಿ ಇರುವ ಆಂಜನೇಯ ಕಾಟಲ್ ಮಿಲ್ ನಿವಾಸಿಗಳಾದ ಸಿಂಚನ ಹಾಗೂ ಸಮೀರ್ ಎಂದು ಗುರುತಿಸಲಾಗಿದೆ. ಇನ್ನು ಈ ಜೋಡಿ ಈಜಿ ನದಿಯ ಮಧ್ಯ ದ್ವೀಪದಂತಿದ್ದ ನಡುಗಡ್ಡೆಯಲ್ಲಿ ಆಶ್ರಯ ಪಡೆದು ಗಮನ ಸೆಳೆದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಇಬ್ಬರನ್ನು ರಕ್ಷಿಸಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ಸೇರಿದ ಸಮೀರ್ ಹಾಗೂ ಹಿಂದೂ ಧರ್ಮದ ಸಿಂಚನ ಪರಸ್ಪರ ಪ್ರೀತಿಸುತ್ತಿದ್ದರು, ಮದುವೆ ಮಾಡಿಕೊಳ್ಳಲು ತೀರ್ಮಾನಿಸಿದ್ದರು. ಆದರೆ, ಇಬ್ಬರು ಪರಸ್ಪರ ಬೇರೆ ಬೇರೆ ಸಮುದಾಯಕ್ಕೆ ಸೇರಿದವರು ಇವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕೆಳಗಿನ ಜೋಡಿ ಸಾಯುವುದಕ್ಕೆ ಮುಂದಾಗಿದ್ದರು.
ಇದನ್ನೂ ಓದಿ: ಸ್ನೇಹಿತೆಯ ಲವ್ನಲ್ಲಿ ಮಧ್ಯಸ್ಥಿಕೆ: ಗಂಡ ಹೆಂಡ್ತಿ ಗಲಾಟೆ ಸಾವಿನಲ್ಲಿ ಅಂತ್ಯ
ಇದಕ್ಕೂ ಮೊದಲು ಈ ಜೋಡಿ ಮನೆ ಬಿಟ್ ಹೋಗಿದ್ದು, ಮೈಸೂರು, ಶಿವಮೊಗ್ಗ ಸುತ್ತಾಡಿ ಬಳಿಕ ಹೊನ್ನಾಳಿಗೆ ಬಂದಿದ್ದು, ಬಳಿಕ ತುಂಗಭದ್ರ ಸೇತುವೆ ಮೇಲಿಂದ ನದಿಗೆ ಹಾರಿದೆ. ಆದರೆ, ಅದೃಷ್ಟವಶಾತ್ ನದಿಯಲ್ಲಿ ನೀರು ಕಡಿಮೆ ಇದ್ದರಿಂದ ಈಜಿ ಹೋಗಿ ನಡುಗಡ್ಡೆಯಲ್ಲಿ ಆಶ್ರಯವಿದೆ. ಇನ್ನು ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಪ್ರೇಮಿಗಳನ್ನು ರಕ್ಷಿಸಿ ನಡುಗಡ್ಡೆಯಿಂದ ದಡಕ್ಕೆ ಕರೆತಂದಿದ್ದಾರೆ.