T20 World Cup 2026: ಟ್ರೋಫಿ ಗೆದ್ದು ಪತ್ನಿ ದೇವಿಶಾ ಜತೆ ಐಕಾನಿಕ ಪೋಸ್ ಕೊಟ್ಟ ಸೂರ್ಯಕುಮಾರ್

T20 World Cup 2026: ಟ್ರೋಫಿ ಗೆದ್ದು ಪತ್ನಿ ದೇವಿಶಾ ಜತೆ ಐಕಾನಿಕ ಪೋಸ್ ಕೊಟ್ಟ ಸೂರ್ಯಕುಮಾರ್

T20 World Cup 2026: ಟ್ರೋಫಿ ಗೆದ್ದು ಪತ್ನಿ ದೇವಿಶಾ ಜತೆ ಐಕಾನಿಕ ಪೋಸ್ ಕೊಟ್ಟ ಸೂರ್ಯಕುಮಾರ್

ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಪತ್ನಿ ದೇವಿಶಾ ಜತೆ ಸೂರ್ಯಕುಮಾರ್ ಯಾದವ್ ಐಕಾನಿಕ್ ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ.

ಭಾರತದ ಈ ಐತಿಹಾಸಿಕ ಗೆಲುವಿನ ನಂತರ ಇಡೀ ದೇಶದಲ್ಲಿ ಸಂಭ್ರಮ ಮನೆಮಾಡಿದೆ. ಭಾರತ ಮಾತ್ರವಲ್ಲದೆ, ವಿದೇಶಗಳಲ್ಲಿರುವ ಕ್ರಿಕೆಟ್ ಅಭಿಮಾನಿಗಳು ಕೂಡ ಟೀಮ್ ಇಂಡಿಯಾಗೆ ನಿರಂತರವಾಗಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಟೀಮ್ ಇಂಡಿಯಾದ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಅವರು, ‘ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು!’ ಎಂದು ಬರೆದುಕೊಂಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಭರ್ಜರಿ ಗೆಲುವಿನ ನಂತರ, ಹಾರ್ದಿಕ್ ಪಾಂಡ್ಯ ತ್ರಿವರ್ಣ ಧ್ವಜದೊಂದಿಗೆ ಇಶಾನ್ ಕಿಶನ್‌ರನ್ನು ಹೀಗೆ ಅಪ್ಪಿಕೊಂಡರು. ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿದ ನಂತರ, ಹಾರ್ದಿಕ್ ಪಾಂಡ್ಯ ಜೊತೆ ತಂಡದ ಹಲವು ಆಟಗಾರರು ತ್ರಿವರ್ಣ ಧ್ವಜವನ್ನು ಹಿಡಿದು ಕ್ರೀಡಾಂಗಣಕ್ಕೆ ಸುತ್ತು ಹೊಡೆದರು.

2024ರಲ್ಲಿ ಭಾರತ ತಂಡವು ಟಿ20 ವಿಶ್ವಕಪ್ ಗೆದ್ದಾಗ ಪತ್ನಿ ದೇವಿಶಾ ಜತೆ ಸೂರ್ಯಕುಮಾರ್ ಯಾದವ್ ಬೆಡ್ ಮೇಲೆ ಟ್ರೋಫಿ ಇಟ್ಟು ಫೋಟೋಗೆ ಫೋಸ್ ಕೊಟ್ಟಿದ್ದರು. ಇದೀಗ ನಾಯಕನಾಗಿ 2026ರ ಐಸಿಸಿ ಟಿ20 ಟ್ರೋಫಿ ಇಟ್ಟು ಮತ್ತೆ ಐಕಾನಿಕ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಿಶ್ವ ಚಾಂಪಿಯನ್ ಪಟ್ಟವನ್ನು ಗೆದ್ದ ನಂತರ, ನಾಯಕ ಸೂರ್ಯ ಕುಮಾರ್ ಯಾದವ್ ಅಹಮದಾಬಾದ್ ಕ್ರೀಡಾಂಗಣದಲ್ಲಿ ತ್ರಿವರ್ಣ ಧ್ವಜವನ್ನು ಹೀಗೆ ಹಾರಿಸಿದರು. ಬ್ಯಾಟರ್ ಆಗಿ ಸೂರ್ಯ ಯಶಸ್ವಿಯಾಗದಿದ್ದರೂ, ನಾಯಕನಾಗಿ ಭಾರತ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ವಿಶ್ವ ಚಾಂಪಿಯನ್ ಆದ ನಂತರ ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಮತ್ತು ಅಕ್ಷರ್ ಪಟೇಲ್ ಒಟ್ಟಿಗೆ ಕ್ಯಾಮರಾಗೆ ಪೋಸ್ ನೀಡಿದರು.2026ರ ಟಿ20 ವಿಶ್ವಕಪ್ ಗೆದ್ದ ನಂತರ ಟೀಮ್ ಇಂಡಿಯಾದ ಆಟಗಾರರು ಟ್ರೋಫಿ ಜೊತೆ ಗ್ರೂಪ್ ಫೋಟೋ ತೆಗೆಸಿಕೊಂಡರು.

Source link

Leave a Reply

Your email address will not be published. Required fields are marked *