Love Jihad ಆತಿಫ್‌ಗಾಗಿ ಮತಾಂತರಗೊಂಡ ಮಿಸ್ ಇಂಡಿಯಾ ವಿನ್ನರ್ ಸಯಾಲಿ ಕಿರುಕುಳ ತಡೆಯಲಾರದೆ ಘರ್ ವಾಪ್ಸಿ | Miss India Earth 2019 Winner Sayali Surve Ghar Vapsi After Muslim Husband Harassment

Love Jihad ಆತಿಫ್‌ಗಾಗಿ ಮತಾಂತರಗೊಂಡ ಮಿಸ್ ಇಂಡಿಯಾ ವಿನ್ನರ್ ಸಯಾಲಿ ಕಿರುಕುಳ ತಡೆಯಲಾರದೆ ಘರ್ ವಾಪ್ಸಿ | Miss India Earth 2019 Winner Sayali Surve Ghar Vapsi After Muslim Husband Harassment



Love Jihad ಆತಿಫ್‌ಗಾಗಿ ಮತಾಂತರಗೊಂಡ ಮಿಸ್ ಇಂಡಿಯಾ ವಿನ್ನರ್ ಸಯಾಲಿ ಕಿರುಕುಳ ತಡೆಯಲಾರದೆ ಘರ್ ವಾಪ್ಸಿ | Miss India Earth 2019 Winner Sayali Surve Ghar Vapsi After Muslim Husband Harassment

ಆತಿಫ್‌ಗಾಗಿ ಮತಾಂತರಗೊಂಡ ಮಿಸ್ ಇಂಡಿಯಾ ವಿನ್ನರ್ ಸಯಾಲಿ ಕಿರುಕುಳ ತಡೆಯಲಾರದೆ ಘರ್ ವಾಪ್ಸಿ, ಪೋಷಕರ ಇಚ್ಚೆಗೆ ವಿರದ್ಧವಾಗಿ ಮದುವೆಯಾದ ಸಯಾಲಿ ಸರ್ವೆಗೆ ಪತ್ನಿ ಆಸೀಫ್ ಇನ್ನಿಲ್ಲದ ಕಿರುಕುಳ ನೀಡಿದ್ದಾನೆ. 

ಪುಣೆ (ಮಾ.10) ಸಾಯಲಿ ಸರ್ವೆ 2019 ರಿಂದ ಭಾರಿ ಸುದ್ದಿಯಾಗಿದ್ದಾರೆ. ತನ್ನ ಸೌಂದರ್ಯ, ಫಿಟ್ನೆಸ್ ಮೂಲಕ 2019ರಲ್ಲಿ ಮಿಸ್ ಇಂಡಿಯಾ ಅರ್ಥ್ ಕಿರೀಟ ಗೆದ್ದ ಸಯಾಲಿ ಸರ್ವೆ ಬಳಿಕ ಆತಿಫ್ ತಾಸೆ ಜೊತೆ ಪ್ರೀತಿ ಶುರುವಾಗಿದೆ. ಪ್ರೀತಿ ಕಣ್ಣೆ ಇಲ್ಲ ಅಂದ ಮೇಲೆ ಜಾತಿ ಧರ್ಮದ ಮಾತೆಲ್ಲಿ. ಇತ್ತ ಪೋಷಕರು ಇದು ಬೇಡ ಎಂದು ಎಚ್ಚರಿಕೆ ನೀಡಿದ್ದರು. ಈ ವೇಳೆ ನನ್ನ ಅತೀಫ್ ಎಲ್ಲರಂತೆ ಅಲ್ಲ ಎಂದು ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಹೇಳಿಕೆಕೊಟ್ಟು ಪೋಷಕರ ವಿರೋಧದ ನಡುವೆ ಮದುವೆಯಾಗಿದ್ದರು. ಮದುವೆಯಾಗಿ ಕೆಲವೇ ವರ್ಷಗಳ ಸಂಸಾರದಲ್ಲಿ ಆತೀಫ್ ನಿಜ ಸ್ವರೂಪ ಬಯಲಾಗಿದೆ. ಇಸ್ಲಾಂಗೆ ಮತಾಂತರಗೊಳ್ಳಲು ಕಿರುಕುಳ ನೀಡಿದ್ದ. ಕೊನೆಗೆ ಇಸ್ಲಾಂಗೆ ಮತಾಂತರಗೊಂಡರೂ ಸಯಾಲಿಗೆ ಕಿರುಕುಳ ತಪ್ಪಲಿಲ್ಲ. ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಹಿಂದೂ ಸಂಘಟನೆಗಳ ನೆರವಿನಿಂದ ಸಯಾಲಿ ಇದೀಗ ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಇಷ್ಟೇ ಅಲ್ಲ ತನ್ನ ಗಂಡ ಆತಿಫ್‌ನಿಂದ ದೂರವಾಗಿದ್ದಾಳೆ.

ಲವ್ ಜಿಹಾದ್ ಎಂದ ಸಯಾಲಿ

ಮಿಸ್ ಇಂಡಿಯಾ ಅರ್ಥ ಪ್ರಶಸ್ತಿ ಗೆದ್ದ ಬಳಿಕ ಸಯಾಲಿ ಜನಪ್ರಿಯೆತೆ ಉತ್ತುಂಗಕ್ಕೆ ಏರಿತ್ತು. ಇದೇ ವೇಳೆ ಉದ್ಯಮಿ ಆತಿಫ್ ತಾಸೆ ಪರಿಚಯವಾಗಿದ್ದ. ಬೇಕಾದಷ್ಟು ದುಡ್ಡು, ಜೊತೆಗೆ ಆತಿಫ್‌ನ ನಿಷ್ಕಲ್ಮಶ ಪ್ರೀತಿಗೆ ಸಯಾಲಿ ಮೋಡಿಯಾಗಿದ್ದಳು. ಆದರೆ ಇದು ಲವ್ ಜಿಹಾದ್ ಅನ್ನೋದು ಈಗ ಅರ್ಥವಾಗಿದೆ. ಅಷ್ಟರೊಳಗೆ ಕಾಲ ಮಿಂಚಿತ್ತು.

ಅತೀಝಾ ತಾಸೆಯಾಗಿ ಬದಲಾಗಿದ್ದ ಸಯಾಲಿ

ಮಿಸ್ ಇಂಡಿಯಾ ಅರ್ಥ್ ಕಿರೀಟ ಗೆದ್ದ ಬಳಿಕ ಆತಿಫ್ ಪ್ರೀತಿಯಲ್ಲಿ ಬಂಧಿಯಾದ ಸಯಾಲಿ 2019ರ ಅಂತ್ಯದಲ್ಲಿ ಆತಿಫ್ ಜೊತೆ ಮದುವೆಯಾಗಿದ್ದರು. ಪೋಷಕರು, ಕುಟುಂಬಸ್ಥರು ಎಲ್ಲರೂ ವಿರೋಧಿಸಿದ್ದರು. ಅತ್ತ ಅತೀಫ್ ಕುಟುಂಬ ಭಾರಿ ಸಂತೋಷವಾಗಿತ್ತು. ಯಾರ ಮಾತು ಕೇಳದ ಸಯಾಲಿ ಸರ್ವೆ ಅತೀಫ್‌ನ ಮದುವೆಯಾಗಿದ್ದರು. ಮದುವೆಯಾದ ಬೆನ್ನಲ್ಲೇ ಅತೀಫ್ ನಿಜ ಸ್ವರೂಪ ಬಯಲಾಗಿತ್ತು.ಇಸ್ಲಾಂಗೆ ಮತಾಂತರವಾಗಲು ಒತ್ತಾಯ ಮಾಡಿದ್ದ. ಕಿರುಕುಳ ಆರಂಭಗೊಂಡಿತ್ತು. ಹೀಗಾಗಿ ಸಯಾಲಿ ಸರ್ವೆ ಇಸ್ಲಾಂಗೆ ಮತಾಂತರಗೊಂಡಿದ್ದರು. ಸಯಾಲಿ ಸರ್ವೆ ಅತೀಝಾ ತಾಸೆಯಾಗಿ ಬದಲಾಗಿದ್ದಳು.

ಒಂದೆಡೆ ಮನೆಯರ ವಿರೋಧದಿಂದ ಮದುವೆಯಾಗಿದ್ದ ಕಾರಣ ಬಿಟ್ಟು ಬರುವಂತಿಲ್ಲ. ಹೀಗಾಗಿ ಎಲ್ಲವನ್ನು ಸಹಿಸಿಕೊಂಡು ಅತೀಝಾ ಅಳಿಯಾಸ್ ಸಯಾಲಿ ಸಂಸಾರ ನಡೆಸಿದ್ದಳು. ಆದರೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ನನ್ನ ಅತೀಫ್ ಎಲ್ಲರಂತೆ ಅನ್ನೋದು ಅರಿವಾಗಿದೆ. ಪೊಲೀಸರ ನೆರವು ಕೇಳಿದರೆ ಅತೀಫ್ ಅತೀ ದೊಡ್ಡ ಉದ್ಯಮಿ. ಹೀಗಾಗಿ ಪೊಲೀಸರಿಂದ ನೆರವು ಸಿಗಲಿಲ್ಲ. ಕೊನೆಗೆ ಹಿಂದೂ ಸಂಘಟನೆಗಳ ನೆರವು ಕೇಳಿದ್ದಾಳೆ. ಆತೀಫ್‌ ಮನೆಯಿಂದ ಹೊರನಡೆದ ಸಯಾಲಿ ಹಿಂದೂ ಸಂಘಟನೆಗಳ ನೆರವಿನಿಂದ ಹಿಂದೂ ಧರ್ಮಕ್ಕೆ ಮರಳಿ ಬಂದಿದ್ದಾರೆ. ಇದೀಗ ಆದ್ಯ ಸರ್ವೆ ಎಂದು ಹೆಸರು ಬದಲಾಯಿಸಿದ್ದಾರೆ.

ಈ ವೇಳೆ ಮಾತನಾಡಿರುವ ಸಯಾಲಿ, ನಾನು ಅತೀಫ್ ಪ್ರೀತಿಯಲ್ಲಿ ಕಳೆದುಹೋಗಿದ್ದೆ. ಪೋಷಕರು ಎಚ್ಚರಿಸಿದ್ದರು. ಆದರೆ ಕೇಳಲಿಲ್ಲ. ಅತೀಫ್ ಪ್ರೀತಿಸಿ ಮದುವೆಯಾಗಿರುವುದೇ ಅತೀ ದೊಡ್ಡ ತಪ್ಪು ಎಂದು ಸಯಾಲಿ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *