ಬಿಹಾರ: ಭಾರತದ ಪ್ರತಿಭಾನ್ವಿತ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಇತ್ತೀಚೆಗೆ ಹಲವು ವಿಚಾರಗಳಲ್ಲಿ ಸುದ್ದಿಯಲ್ಲಿದ್ದರು. ಆದರೆ ಇದೀಗ ವೈಭವ್ ಸೂರ್ಯವಂಶಿ ಸೋದರ ಮಾವ ಐಪಿಎಸ್ ಎಕ್ಸಾಂ ಪಾಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಕೆಲ ತಿಂಗಳ ಹಿಂದಷ್ಟೇ ನಡೆದ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಬಿಹಾರ ಮೂಲದ 14 ವರ್ಷದ ವೈಭವ್ ಸೂರ್ಯವಂಶಿ, ಟೂರ್ನಿಯುದ್ದಕ್ಕೂ ಅದ್ಬುತ ಪ್ರದರ್ಶನ ತೋರಿ ಗಮನ ಸೆಳೆದಿದ್ದರು.

ಅದರಲ್ಲೂ ಅಂಡರ್-19 ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ಎದುರು ವೈಭವ್ ಸೂರ್ಯವಂಶಿ ವಿಸ್ಪೋಟಕ 175 ರನ್ ಸಿಡಿಸುವ ಮೂಲಕ ಭಾರತ ಯುವ ಪಡೆ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇದಾದ ಬಳಿಕ ಫೆಬ್ರವರಿ 17ರಿಂದ ನಿಗದಿಯಾಗಿದ್ದ ಸಿಬಿಎಸ್ಇ 10ನೇ ತರಗತಿ ಬೋರ್ಡ್ ಎಕ್ಸಾಂ ಬರೆಯಲು ವೈಭವ್ ಸೂರ್ಯವಂಶಿ ರೆಡಿಯಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ವೈಭವ್ ಕೊನೆಯ ಕ್ಷಣದಲ್ಲಿ 10ನೇ ತರಗತಿ ಎಕ್ಸಾಂಗೆ ಚಕ್ಕರ್ ಹೊಡೆದಿದ್ದರು.

ಈ ವಿಚಾರ ಮಾಸುವ ಮುನ್ನವೇ ವೈಭವ್ ಸೂರ್ಯವಂಶಿ ಅವರ ಸೋದರ ಮಾವ ಅಭಿಷೇಕ್ ಚೌಹ್ಹಾಣ್ ಎನ್ನುವವರು 2025ರ ಯುಪಿಎಸ್ಸಿ ನಾಗರೀಕ ಸೇವಾ ಎಕ್ಸಾಂ ಪಾಸ್ ಮಾಡುವ ಮೂಲಕ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವೈಭವ್ ಸೂರ್ಯವಂಶಿಯವರ ತಾಯಿಯ ಸಹೋದರ ಅಭಿಷೇಕ್ ಚೌಹ್ಹಾಣ್, ಐಪಿಎಸ್ನಲ್ಲಿ ಆಲ್ ಇಂಡಿಯಾ 102ನೇ ಶ್ರೇಯಾಂಕ ಪಡೆಯುವ ಮೂಲಕ ಇಡೀ ಕುಟುಂಬ ಹಾಗೂ ಬಿಹಾರದ ಜನತೆ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ.

ಇನ್ನು ವೈಭವ್ ಸೂರ್ಯವಂಶಿ ವಿಚಾರಕ್ಕೆ ಬರುವುದಾದರೇ 10ನೇ ತರಗತಿ ಎಕ್ಸಾಂಗೆ ಚಕ್ಕರ್ ಹಾಕಿ ಕ್ರಿಕೆಟ್ನತ್ತ ಹೆಚ್ಚು ಗಮನ ಹರಿಸಿದ್ದಾರೆ. ಇದೇ ತಿಂಗಳು 28ರಿಂದ ಆರಂಭವಾಗಲಿರುವ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವೈಭವ್ ರಾಜಸ್ಥಾನ ರಾಯಲ್ಸ್ ಪರ ಕಣಕ್ಕಿಳಿಯಲು ರೆಡಿಯಾಗಿದ್ದಾರೆ.

Source link
10ನೇ ಕ್ಲಾಸ್ ಎಕ್ಸಾಂಗೆ ಚಕ್ಕರ್ ಹೊಡೆದ ವೈಭವ್ ಸೂರ್ಯವಂಶಿ; ಆದ್ರೆ IPS ಎಕ್ಸಾಂ ಪಾಸ್ ಮಾಡಿದ ಸೋದರ ಮಾವ!