ಕೆಲವು ಜೀವಿಗಳು ಹುಟ್ಟಿದ ಕೆಲವೇ ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ತಮ್ಮ ಜೀವನವನ್ನು ಕೊನೆಗೊಳಿಸುತ್ತವೆ. ಮೇಫ್ಲೈ, ಲೂನಾ ಮಾತ್, ಮತ್ತು ಸೊಳ್ಳೆಗಳಂತಹ ಜೀವಿಗಳು ಅತ್ಯಂತ ಕಡಿಮೆ ಆಯಸ್ಸನ್ನು ಹೊಂದಿದ್ದು, ಸಂತಾನೋತ್ಪತ್ತಿಗಾಗಿಯೇ ತಮ್ಮ ಅಲ್ಪಾವಧಿಯ ಜೀವನವನ್ನು ಮುಡಿಪಾಗಿಡುತ್ತವೆ.
ನಿಸರ್ಗದಲ್ಲಿ ಪ್ರತಿಯೊಂದು ಜೀವಿಯೂ ತನ್ನದೇ ಆದ ಪಾತ್ರವನ್ನು ಹೊಂದಿದೆ. ತಮ್ಮ ಪಾಲಿನ ಕರ್ತವ್ಯವನ್ನು ಮುಗಿಸಿ ಈ ಜಗತ್ತಿನಿಂದ ಬೇಗನೆ ನಿರ್ಗಮಿಸುವ ಕೆಲವು ಜೀವಿಗಳಿವೆ. ಇವುಗಳಲ್ಲಿ ಕೆಲವು ಜೀವಿಗಳ ಆಯಸ್ಸು ಕೇವಲ ಒಂದು ದಿನವಾದರೆ, ಇನ್ನು ಕೆಲವು ಜೀವಿಗಳು ಕೇವಲ ಒಂದು ವಾರ ಬದುಕುತ್ತವೆ. ಹುಟ್ಟಿದ ತಕ್ಷಣವೇ ಜೀವನದ ಅಂತ್ಯ ಕಾಣುವ ಅಂತಹ 5 ಜೀವಿಗಳ ಬಗ್ಗೆ ಇಲ್ಲಿದೆ ಮಾಹಿತಿ..

ಈ ಜೀವಿಯು ಅತಿ ಕಡಿಮೆ ಅವಧಿಯ ಜೀವನ ನಡೆಸುವ ‘ವರ್ಲ್ಡ್ ರೆಕಾರ್ಡ್ ಹೋಲ್ಡರ್’. ವಯಸ್ಕವಾದ ನಂತರ ಮೇಫ್ಲೈಗಳಿಗೆ ಕೇವಲ 24 ಗಂಟೆಗಳು ಅಥವಾ ಅದಕ್ಕಿಂತ ಕಡಿಮೆ ಸಮಯ ಮಾತ್ರ ಬದುಕುವ ಅವಕಾಶವಿರುತ್ತದೆ. ಕೆಲವು ಮಾಹಿತಿಗಳ ಪ್ರಕಾರ ಹೆಣ್ಣು ಮೇಫ್ಲೈಗಳು ಕೇವಲ 5 ನಿಮಿಷ ಬದುಕಿದರೆ, ಗಂಡು ಮೇಫ್ಲೈಗಳು ಅಂದಾಜು 2 ದಿನ ಬದುಕಬಹುದು. ಇವುಗಳ ಸಂಪೂರ್ಣ ಗಮನ ಕೇವಲ ಸಂತಾನೋತ್ಪತ್ತಿಯ ಮೇಲಿರುತ್ತದೆ. ಆಶ್ಚರ್ಯವೆಂದರೆ, ಇವುಗಳಿಗೆ ಆಹಾರ ತಿನ್ನಲು ಬಾಯಿ ಕೂಡ ಇರುವುದಿಲ್ಲ! ಏಕೆಂದರೆ ಇವುಗಳ ಬಳಿ ತಿನ್ನಲು ಸಮಯವೇ ಇರುವುದಿಲ್ಲ.

ನೀರಿನಲ್ಲಿ ವಾಸಿಸುವ ಈ ಜೀವಿಯು ಎಷ್ಟು ಚಿಕ್ಕದಾಗಿರುತ್ತದೆ ಎಂದರೆ ಬರಿಗಣ್ಣಿಗೆ ಸರಿಯಾಗಿ ಕಾಣುವುದೂ ಇಲ್ಲ. ಇದರ ಆಯಸ್ಸು ಕೇವಲ ಮೂರರಿಂದ ನಾಲ್ಕು ದಿನಗಳಲ್ಲಿ ಮುಕ್ತಾಯವಾಗುತ್ತದೆ. ಇಷ್ಟು ಕಡಿಮೆ ಅವಧಿಯಲ್ಲೇ ಇವು ಬೆಳೆಯುತ್ತವೆ, ಮರಿಗಳಿಗೆ ಜನ್ಮ ನೀಡುತ್ತವೆ ಮತ್ತು ಸಾವನ್ನಪ್ಪುತ್ತವೆ.

ಅತ್ಯಂತ ಸುಂದರವಾಗಿ ಕಾಣುವ ಈ ಪತಂಗದ ಆಯಸ್ಸು ಕೇವಲ 7 ದಿನಗಳು ಮಾತ್ರ. ಆಶ್ಚರ್ಯದ ಸಂಗತಿಯೆಂದರೆ, ಇವು ವಯಸ್ಕವಾದ ನಂತರ ಏನನ್ನೂ ತಿನ್ನುವುದಿಲ್ಲ ಅಥವಾ ಕುಡಿಯುವುದಿಲ್ಲ. ಏಕೆಂದರೆ ಇವುಗಳಿಗೂ ಬಾಯಿ ಇರುವುದಿಲ್ಲ! ಇವುಗಳು ತಮ್ಮಲ್ಲಿರುವ ಅಲ್ಪಸ್ವಲ್ಪ ಶಕ್ತಿಯನ್ನು ತಮ್ಮ ಸಂಗಾತಿಯನ್ನು ಹುಡುಕಲು ಮಾತ್ರ ಬಳಸುತ್ತವೆ.

ಜಗತ್ತಿನಲ್ಲಿ ಸುಮಾರು 5,000 ಕ್ಕೂ ಹೆಚ್ಚು ಜಾತಿಯ ಡ್ರ್ಯಾಗನ್ ಫ್ಲೈಗಳಿವೆ. ಇವುಗಳ ಗರಿಷ್ಠ ಆಯಸ್ಸು ಕೇವಲ 4 ತಿಂಗಳುಗಳು. ಆದರೆ ಇವುಗಳ ಜೀವನದ ಬಹುಪಾಲು ಸಮಯವು ಲಾರ್ವಾ ಹಂತದಲ್ಲೇ ಕಳೆದುಹೋಗುತ್ತದೆ. ಒಮ್ಮೆ ರೆಕ್ಕೆಗಳು ಬಂದ ನಂತರ ಇವುಗಳು ತುಂಬಾ ಕಡಿಮೆ ದಿನಗಳು ಮಾತ್ರ ಬದುಕುತ್ತವೆ.

ಕಾಯಿಲೆಗಳನ್ನು ಹರಡುವ ಸೊಳ್ಳೆಗಳು ಕೂಡ ಅಲ್ಪಾಯುಷಿಗಳೇ. ಗಂಡು ಸೊಳ್ಳೆಗಳು ಕೇವಲ ಒಂದು ವಾರ ಮಾತ್ರ ಬದುಕುತ್ತವೆ. ಆದರೆ ಹೆಣ್ಣು ಸೊಳ್ಳೆಗಳು ಗಂಡು ಸೊಳ್ಳೆಗಳಿಗಿಂತ ಸ್ವಲ್ಪ ಹೆಚ್ಚು ದಿನಗಳ ಕಾಲ ಜೀವಿಸುತ್ತವೆ.

Source link
ಕೇವಲ ಕೆಲವೇ ಗಂಟೆಗಳ ಜೀವನ! ಜಗತ್ತಿನಲ್ಲಿ ಅತ್ಯಲ್ಪ ಆಯಸ್ಸು ಹೊಂದಿರುವ 5 ಜೀವಿಗಳು..!