ಸೀರಿಯಲ್‌ಗಳು ಮನೆ ಹಾಳು ಮಾಡುತ್ತವೆ ಮತ್ತು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂಬ ಸಾಮಾನ್ಯ ಆರೋಪಗಳಿಗೆ ನಟಿ ಅಮೃತಾ ರಾಮಮೂರ್ತಿ ಪ್ರತಿಕ್ರಿಯಿಸಿದ್ದಾರೆ. ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದಾದರೆ ಅವರ ಮುಂದೆ ಯಾಕೆ ನೋಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಸೀರಿಯಲ್‌ಗಳು ಮನೆಹಾಳು ಕೆಲ್ಸ ಮಾಡ್ತಿವೆ. ಸೀರಿಯಲ್ಗಳಿಂದ ಮಕ್ಕಳು ಹಾಳಾಗ್ತಿದ್ದಾರೆ. ಮಹಿಳೆಯರು ಕೆಟ್ಟ ಬುದ್ಧಿ ಕಲಿಯುತ್ತಿದ್ದಾರೆ. ಸೀರಿಯಲ್ ನೋಡುತ್ತಾ ಕೂತರೆ ಕಳ್ಳ ಬಂದು ಮನೆದೋಚಿ ಹೋದರೂ ಗೊತ್ತಾಗಲ್ಲ. ಹೆಚ್ಚಿನ ಸೀರಿಯಲ್ಗಳಲ್ಲಿ ಬರಿ ಅಕ್ರಮ ಸಂಬಂಧ, ಗಂಡ-ಹೆಂಡ್ತಿ ನಡುವೆ ಸಂಬಂಧವೇ ಇಲ್ದೇ ಇರೋದು, ಸೊಸೆಯನ್ನು ಸಾಯಿಸಲು ಏನೆಲ್ಲಾ ಪ್ಲ್ಯಾನ್ ಮಾಡಬಹುದು ಎನ್ನೋದನ್ನು ತೋರಿಸೋದು, ಗರ್ಭಿಣಿಯಾಗಿದ್ರೆ ಮಗುವನ್ನು ಸಾಯಿಸಲು ಅತ್ತೆಯಾದವಳಿಗೆ ಟಿಪ್ಸ್ ಕೊಡುವುದು… ಹೀಗೆ ಸೀರಿಯಲ್‌ಗಳು ಕೆಟ್ಟದ್ದನ್ನೇ ಹೇಳಿಕೊಡುತ್ತವೆ ಎನ್ನುವ ಮಾತು ಇಂದು ನಿನ್ನಯದ್ದಲ್ಲ.

ಅದರಲ್ಲಿಯೂ ಅದೆಷ್ಟೋ ಮಹಿಳೆಯರಿಗೆ ಇಂದು ಸೀರಿಯಲ್ಗಳೇ ಬಂಡವಾಳ. ಪ್ರತಿದಿನವೂ ಧಾರಾವಾಹಿಗಳನ್ನು ಬೈಯುತ್ತಲೇ ಒಂದು ದಿನವೂ ಮಿಸ್ ಮಾಡದೇ ನೋಡುತ್ತಾರೆ. ಕೆಲವು ಮಹಿಳೆಯರು ಸೀರಿಯಲ್ ಇರುವ ಪಾತ್ರಗಳನ್ನು ಮೈಮೇಲೆ ಆಹ್ವಾನಿಸಿಕೊಂಡು ಆಸ್ವಾದಿಸುವುದೂ ಇದೆ. ಯಾವುದೇ ಇತರ ಹವ್ಯಾಸ ಇಲ್ಲದವರಿಗೆ ಸೀರಿಯಲ್ಗಳೇ ಜೀವಾಳವೂ ಆಗಿಬಿಟ್ಟಿದೆ ಎನ್ನುವುದೂ ನಿಜ.

ಇವುಗಳ ನಡುವೆಯೇ, ಕೆಲ ತಿಂಗಳ ಹಿಂದೆ ಹಾವೇರಿ ಜಿಲ್ಲೆಯ ಎಸ್‌ಪಿ ಯಶೋಧಾ ವಂಟಗೋಡಿ ಅವರು ಸೀರಿಯಲ್ಗಳಿಂದ ಇಂದು ಮನೆಗಳಲ್ಲಿ ಆಗುತ್ತಿರುವ ವಾಸ್ತವಿಕತೆಯನ್ನು ತೆರೆದಿಟ್ಟಿದ್ದರು. ಸೀರಿಯಲ್ನವರು ನನ್ನನ್ನು ಚೆನ್ನಾಗಿ ಬೈಯುತ್ತೀರಾ ಎನ್ನುವುದು ಗೊತ್ತಿದೆ ಎಂದೇ ಭಾಷಣ ಆರಂಭಿಸಿದ್ದ ಅವರು, ಹೆಚ್ಚಿನ ಮಹಿಳೆಯರು ಹೇಗೆ ಸೀರಿಯಲ್ನಲ್ಲಿ ಮುಳುಗಿ ವಾಸ್ತವದಿಂದ ದೂರವಾಗುತ್ತಿದ್ದಾರೆ ಎನ್ನುವ ಬಗ್ಗೆ ವಿವರಣೆ ನೀಡಿದ್ದರು.

ಮಕ್ಕಳಿಗೆ ಓದ್ರಿ ಓದ್ರಿ ಎಂದು ಬೈಯೋದು, ಅಪ್ಪ-ಅಮ್ಮ ಸೀರಿಯಲ್ ನೋಡ್ತಾ ಕುಳಿತುಕೊಳ್ಳೋದು. ಹೀಗೆ ಮಾಡಿದ್ರೆ ಆ ಮಕ್ಕಳಿಗೆ ಕಾನ್ಸನ್ಟ್ರೇಷನ್ ಬರೋದಾದರೂ ಹೇಗೆ ಎಂದು ಪ್ರಶ್ನಿಸಿದ್ದರು. ನೀವು ಪಾಠ ಹೇಳಿಕೊಡುವುದಲ್ಲ, ಯಾವುದೇ ಒಂದು ಕಾದಂಬರಿಯನ್ನೋ ಇನ್ನು ಯಾವುದೋ ಒಳ್ಳೆಯ ಪುಸ್ತಕವನ್ನು ಹಿಡಿದುಕೊಂಡು ಕುಳಿತುಕೊಳ್ಳಿ. ಆಗ ಮಕ್ಕಳು ಯಾಕೆ ಓದುವುದಿಲ್ಲ ಎಂದು ನೋಡಿ ಎಂದು ಮೂರು ಹೊತ್ತೂ ಸೀರಿಯಲ್ ಸೀರಿಯಲ್ ಎನ್ನುವವರಿಗೆ ಕಿವಿಮಾತು ಹೇಳಿದ್ದರು ಅವರು.

ಇವೆಲ್ಲವುಗಳ ಬಗ್ಗೆ ಇದೀಗ ನಟಿ ಅಮೃತಾ ರಾಮಮೂರ್ತಿ ಮಾತನಾಡಿದ್ದಾರೆ. ಸೀರಿಯಲ್ಗಳಿಂದಲೇ ಮನೆ ಹಾಳಾಗುತ್ತದ ಎನ್ನೋದನ್ನು ನಾನು ಒಪ್ಪುವುದಿಲ್ಲ. ರಿಯಾಲಿಟಿ ಏನು ನಡೆಯುತ್ತಾ ಇದೆಯೋ ಅದನ್ನೇ ಸೀರಿಯಲ್ಗಳಲ್ಲಿ ತೋರಿಸ್ತೇವೆ. ಅದನ್ನೂ ಪೂರ್ಣವಾಗಿ ಅಲ್ಲ. ಹತ್ತೋ, ಇಪ್ಪತ್ತೋ ಪರ್ಸೆಂಟ್ ಅಷ್ಟೇ ತೋರಿಸೋದು ಎಂದಿದ್ದಾರೆ ನಟಿ.

ನಾನು ಮಾಡುವ ಸೀರಿಯಲ್ ಬಗ್ಗೆ ತುಂಬಾ ಜನ ಇಷ್ಟಪಟ್ಟಿದ್ದು ಇದೆ. ಅವರು ಅಲ್ಲಿಯ ಪಾತ್ರಕ್ಕೆ ತಮ್ಮನ್ನು ಕನೆಕ್ಟ್ ಮಾಡಿಕೊಂಡಿದ್ರು. ನಮ್ಮ ಮನೆಯಲ್ಲಿಯೂ ಹೀಗೆಯೇ ಎಂದಿದ್ದರು. ಅಷ್ಟಕ್ಕೂ ನಾವು ಕೆಟ್ಟ ಉದ್ದೇಶವನ್ನು ಇಟ್ಟುಕೊಂಡು ಸೀರಿಯಲ್ ಮಾಡ್ತೇವೆ ಎನ್ನೋದು ಸುಳ್ಳು ಎಂದಿದ್ದಾರೆ. ಕೊನೆಯದಾಗಿ ಸೀರಿಯಲ್ ನೋಡುವುದಿಂದ ಮಕ್ಕಳು ಹಾಳಾಗ್ತಾರೆ ಎನ್ನುವುದು ತುಂಬಾ ಆರೋಪ ಇದೆ. ಹಾಗಿದ್ಮೇಲೆ ಮಕ್ಕಳ ಎದುರು ಸೀರಿಯಲ್ ಯಾಕೆ ನೋಡ್ತೀರಾ, ನೋಡಬೇಡಿ ಎಂದು ಗರಂ ಆಗಿದ್ದಾರೆ ನಟಿ.

Source link
ಅಷ್ಟಿದ್ಮೇಲೆ ನೀವು ಮಕ್ಕಳ ಎದುರು ಯಾಕೆ ಸೀರಿಯಲ್ ನೋಡ್ತೀರಾ? ನಟಿ ಅಮೃತಾ ರಾಮಮೂರ್ತಿ ಗರಂ