Home Loan: 50 ಲಕ್ಷದ ಗೃಹಸಾಲ ಬೇಗ ತೀರಿಸಿ, 30 ಲಕ್ಷ ಉಳಿಸುವುದು ಹೇಗೆ? ಇಲ್ಲಿದೆ ಸೂಪರ್ ಐಡಿಯಾ!

Home Loan: 50 ಲಕ್ಷದ ಗೃಹಸಾಲ ಬೇಗ ತೀರಿಸಿ, 30 ಲಕ್ಷ ಉಳಿಸುವುದು ಹೇಗೆ? ಇಲ್ಲಿದೆ ಸೂಪರ್ ಐಡಿಯಾ!



Home Loan: 50 ಲಕ್ಷದ ಗೃಹಸಾಲ ಬೇಗ ತೀರಿಸಿ, 30 ಲಕ್ಷ ಉಳಿಸುವುದು ಹೇಗೆ? ಇಲ್ಲಿದೆ ಸೂಪರ್ ಐಡಿಯಾ!
<p>How to pay off home loan early with mutual funds ಸ್ವಂತ ಮನೆ ಪ್ರತಿಯೊಬ್ಬರ ಕನಸು. ಆದರೆ ಹೋಮ್ ಲೋನ್ ಭಾರವಿಲ್ಲದೆ, ಕಡಿಮೆ ಸಮಯದಲ್ಲಿ ಸಾಲ ತೀರಿಸುವುದು ಹೇಗೆ? ಮ್ಯೂಚುವಲ್ ಫಂಡ್ ಬಳಸಿ ಲಕ್ಷಾಂತರ ರೂಪಾಯಿ ಬಡ್ಡಿ ಉಳಿಸುವ ಉಪಾಯ ಇಲ್ಲಿದೆ.</p><img>ಸ್ವಂತ ಮನೆ ಖರೀದಿಸುವುದು ಪ್ರತಿಯೊಬ್ಬರ ಕನಸು. ಇದಕ್ಕಾಗಿ ಹೆಚ್ಚಿನವರು 15ರಿಂದ 20 ವರ್ಷಗಳ ಕಾಲ ಇಎಂಐ ಕಟ್ಟುತ್ತಾರೆ. ಆದರೆ, ಸರಿಯಾದ ಆರ್ಥಿಕ ಯೋಜನೆ ರೂಪಿಸಿದರೆ, ಹೋಮ್ ಲೋನ್‌ ಬೇಗ ತೀರಿಸಿ ಹೆಚ್ಚುವರಿ ಲಾಭವನ್ನೂ ಗಳಿಸಬಹುದು ಎನ್ನುತ್ತಾರೆ ತಜ್ಞರು.<img>ಸಾಲ ತೆಗೆದುಕೊಳ್ಳುವ ಮುನ್ನ ನಿಮ್ಮ ಉದ್ಯೋಗ ಭದ್ರತೆ ಬಗ್ಗೆ ಯೋಚಿಸುವುದು ಮುಖ್ಯ. ಯಾವುದೇ ಕ್ಷಣದಲ್ಲಿ ಉದ್ಯೋಗ ಹೋಗುವ ಸಾಧ್ಯತೆ ಇರುವುದರಿಂದ, ತುರ್ತು ನಿಧಿ ಅಥವಾ ಮ್ಯೂಚುವಲ್ ಫಂಡ್ ಪೋರ್ಟ್‌ಫೋಲಿಯೋ ಸಿದ್ಧಪಡಿಸಿಕೊಳ್ಳುವುದು ಉತ್ತಮ. ಉದಾಹರಣೆಗೆ, 70 ಲಕ್ಷದ ಮನೆಗೆ 1 ಕೋಟಿ ಮೌಲ್ಯದ ಮ್ಯೂಚುವಲ್ ಫಂಡ್ ಇದ್ದರೆ, ಉದ್ಯೋಗ ಹೋದರೂ ಚಿಂತೆ ಇರಲ್ಲ.<img>ಕಡಿಮೆ ಬಡ್ಡಿ ಎಂದು ಹಲವರು 15 ವರ್ಷಗಳ ಸಾಲ ಪಡೆಯುತ್ತಾರೆ. ಆದರೆ, 20-25 ವರ್ಷಗಳ ದೀರ್ಘಾವಧಿ ಸಾಲ ಪಡೆಯುವುದು ಉತ್ತಮ. ಯಾಕೆಂದರೆ, ಹೋಮ್ ಲೋನ್ ಬಡ್ಡಿ ದರ 8.5% ರಿಂದ 9% ಇದ್ದು, ಇದು ಬೇರೆಲ್ಲಾ ಸಾಲಗಳಿಗಿಂತ ಕಡಿಮೆ. ಕಡಿಮೆ ಮತ್ತು ಹೆಚ್ಚಿನ ಅವಧಿಯ ಇಎಂಐ ನಡುವಿನ ವ್ಯತ್ಯಾಸದ ಹಣವನ್ನು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬೇಕು.<img>ಉದಾಹರಣೆಗೆ, 50 ಲಕ್ಷ ರೂ. ಸಾಲಕ್ಕೆ 15 ವರ್ಷದ ಇಎಂಐ (₹49,000) ಮತ್ತು 20 ವರ್ಷದ ಇಎಂಐ (₹43,000) ನಡುವೆ ₹5,800 ವ್ಯತ್ಯಾಸವಿದೆ. ಈ ಹಣವನ್ನು 12% ರಿಟರ್ನ್ಸ್ ನೀಡುವ ನಿಫ್ಟಿ ಇಂಡೆಕ್ಸ್ ಫಂಡ್‌ನಲ್ಲಿ 15 ವರ್ಷ ಹೂಡಿದರೆ, ನಿಮಗೆ ಸುಮಾರು 32 ಲಕ್ಷ ರೂ. ಸಿಗುತ್ತದೆ. ಆಗ ಉಳಿದ ಸಾಲ ತೀರಿಸಿದರೂ ನಿಮ್ಮ ಬಳಿ 11 ಲಕ್ಷ ರೂ. ಉಳಿಯುತ್ತದೆ.<img>ಕೈಯಲ್ಲಿ ಹೆಚ್ಚುವರಿ ಹಣವಿದ್ದಾಗ ಸಾಲವನ್ನು ಮುಂಚಿತವಾಗಿ ತೀರಿಸುವ ಬದಲು, ಅದನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಆದಾಯ ಬರುತ್ತದೆ. ನಿವೃತ್ತಿಗಾಗಿ ಇಟ್ಟ ಹಣವನ್ನು ಭಾವನಾತ್ಮಕವಾಗಿ ಮನೆ ಖರೀದಿಸಲು ಬಳಸಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ.



Source link

Leave a Reply

Your email address will not be published. Required fields are marked *