ಗಡಿರಾಷ್ಟ್ರಗಳಿಗೆ ಇದ್ದ ಎಫ್​ಡಿಐ ಬಿಗಿನಿಯಮ ಸಡಿಲಿಸಿದ ಭಾರತ; ಇನ್ಮುಂದೆ ಚೀನೀ ಹೂಡಿಕೆ ಒಳಹರಿವು ಸರಾಗ

ಗಡಿರಾಷ್ಟ್ರಗಳಿಗೆ ಇದ್ದ ಎಫ್​ಡಿಐ ಬಿಗಿನಿಯಮ ಸಡಿಲಿಸಿದ ಭಾರತ; ಇನ್ಮುಂದೆ ಚೀನೀ ಹೂಡಿಕೆ ಒಳಹರಿವು ಸರಾಗ


ಗಡಿರಾಷ್ಟ್ರಗಳಿಗೆ ಇದ್ದ ಎಫ್‌ಡಿಐ ಬಿಗಿನಿಯಮ ಸಡಿಲಿಸಿದ ಭಾರತ; ಇನ್ಮುಂದೆ ಚೀನೀ ಹೂಡಿಕೆ ಒಳಹರಿವು ಸರಾಗ

ಜನವರಿ, ಮಾರ್ಚ್ 10: ದೇಶದೊಂದಿಗೆ ಗಡಿ ಹಂಚಿಕೊಂಡಿರುವ ದೇಶಗಳಿಗೆ (ಗಡಿ ದೇಶಗಳು) ಇದ್ದ ಎಫ್ಡಿಐ ನಿರ್ಬಂಧವನ್ನು ಭಾರತಕ್ಕೆ ಹೊಂದಿದೆ. ಎಫ್ಡಿಐ ನಿಯಮಗಳನ್ನು ಸಡಿಲಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 2020ರಲ್ಲಿ ಗಾಲ್ವನ್‌ನಲ್ಲಿ ಚೀನಾ ಜೊತೆ ಜಟಾಪಟಿ ನಡೆದ ಭಾರತವು ಗಡಿ ದೇಶಗಳ ಹೂಡಿಕೆಗಳ ಮೇಲೆ ನಿರ್ಬಂಧ ಹಾಕಿತ್ತು.

2020ರ ಪ್ರೆಸ್ ನೋಟ್-3 ನಿಯಮಗಳ ಪ್ರಕಾರ ಗಡಿ ದೇಶಗಳ ಸಂಸ್ಥೆಗಳಿಂದ ಭಾರತದಲ್ಲಿ ಹೂಡಿಕೆ ಮಾಡಲು ಸರ್ಕಾರದ ಅನುಮತಿ ಅಗತ್ಯವಿದೆ. ಚೀನಾ ವಿರುದ್ಧ ಪ್ರತಿಕ್ರಮದ ಭಾಗವಾಗಿ ಭಾರತ ಈ ನಿಯಮ ರೂಪಿಸಿತ್ತು. ಈಗ ಆರು ವರ್ಷದ ಬಳಿಕ ನಿರ್ಬಂಧವನ್ನು ಭಾರತ ಸಡಿಲಗೊಳಿಸಿದೆ. ಪ್ರೆಸ್ ನೋಟ್-3 ನಿಯಮಗಳನ್ನು ತಿದ್ದುಪಡಿ ಮಾಡಿದೆ.

ಇದನ್ನೂ ಓದಿ: ಇಂಡಿಗೋ ಸಿಐಒ ಪೀಟರ್ ಎಲ್ಬರ್ಸ್ ರಾಜೀನಾಮೆ; ರಾಹುಲ್ ಭಾಟಿಯಾ ಹಂಗಾಮಿ ಮುಖ್ಯಸ್ಥರು

ಹೊಸ ನಿಯಮಗಳ ಪ್ರಕಾರ ನೆರೆಯ ಗಡಿ ದೇಶಗಳ ಕಂಪನಿಗಳು ಭಾರತದಲ್ಲಿ ಶೇ. 10ವರೆಗೆ ಹೂಡಿಕೆ ಮಾಡಲು ಸರ್ಕಾರದಿಂದ ಕಡ್ಡಾಯ ಅನುಮೋದನೆ ಪಡೆಯುವ ಅಗತ್ಯವಿಲ್ಲ. ನಿರ್ದಿಷ್ಟ ಪ್ರಸ್ತಾವಗಳನ್ನು 60 ದಿನದೊಳಗಾಗಿ ನಿರ್ಧರಿಸಲಾಗಿದೆ. ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಅಫ್ಗಾನಿಸ್ತಾನ, ಭೂತಾನ್ ಮತ್ತು ಮಾಯನ್ಮಾರ್ ದೇಶಗಳು ಭಾರತದ ಜೊತೆ ಗಡಿ ಹಂಚಿಕೊಂಡಿವೆ. ಈ ಹೊಸ ನಿಯಮ ಸಡಿಲಿಕೆಯು ಚೀನಾದಿಂದ ಹೂಡಿಕೆ ಹರಿದುಬರಲು ಎಡೆ ಮಾಡಿಕೊಡುವ ನಿರೀಕ್ಷೆಯಿದೆ.

ಭಾರತದಲ್ಲಿ ಕಳೆದ ಐದು ವರ್ಷ ಕಡಿಮೆಗೊಂಡ ಚೀನಾದ ಎಫ್‌ಡಿಐ

2000ರ ಏಪ್ರಿಲ್‌ನಿಂದ 2025ರ ಡಿಸೆಂಬರ್‌ವರೆಗೆ ಭಾರತದ ಈಕ್ವಿಟಿಗಳಿಗೆ ಚೀನಾದಿಂದ ಬಂದ ಎಫ್‌ಡಿಐ 2.51 ಬಿಲಿಯನ್ ಡಾಲರ್ ಮಾತ್ರ. ಈ ಅವಧಿಯಲ್ಲಿ ಬಂದ ಒಟ್ಟು ವಿದೇಶೀ ನೇರ ಹೂಡಿಕೆಯಲ್ಲಿ ಚೀನಾದ ಪಾಲು ಶೇ. 0.32 ಮಾತ್ರ. ಅತಿಹೆಚ್ಚು ಹೂಡಿಕೆ ಮಾಡಿದ ದೇಶಗಳ ಪಟ್ಟಿಯಲ್ಲಿ ಚೀನಾ 23ನೇ ಸ್ಥಾನವನ್ನು ಪಡೆಯುತ್ತದೆ.

ಇದನ್ನೂ ಓದಿ: ನಾವ್ಯಾಕೆ ತೈಲ ಪದಾರ್ಥ? ಬಿಕ್ಕಟ್ಟಿಗೆ ಕಾರಣರಾದವರು ಜವಾಬ್ದಾರರು: ಐಇಎಗೆ ಭಾರತದ ಉತ್ತರ

ಭಾರತದಲ್ಲಿ ಚೀನಾದ ಎಫ್‌ಡಿಐ ಬಹಳ ಕಡಿಮೆಯಾದರೂ, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಬಹಳ ಹೆಚ್ಚಾಗಿದೆ. ಭಾರತಕ್ಕೆ ಚೀನಾದ ರಫ್ತುಗಳು ಕೂಡ ಗಣನೀಯವಾಗಿ ಹೆಚ್ಚಿವೆ. 2024-25ರಲ್ಲಿ ಒಂದೇ ವರ್ಷದಲ್ಲಿ ಚೀನಾದ 113.45 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಭಾರತ ಆಮದು ಮಾಡಿಕೊಂಡಿತು. ಆದರೆ, ಭಾರತದಿಂದ ಚೀನಾಗೆ ರಫ್ತಾಗುತ್ತಿರುವುದು ಮಾತ್ರ ನಗಣ್ಯ. ಹೀಗಾಗಿ, ಎರಡು ದೇಶಗಳ ಮಧ್ಯೆ ಟ್ರೇಡ್ ಡೆಫಿಸಿಟ್ ಬರೋಬ್ಬರಿ 99.2 ಬಿಲಿಯನ್ ಡಾಲರ್ ನಷ್ಟಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *