ಸುವಾಸನೆ ಜೊತೆ ಮನೆ – ಮನ ಫ್ರೆಶ್ ಆಗಿರ್ಬೇಕು ಅಂದ್ರೆ ಬಾಲ್ಕನಿಯಲ್ಲಿ ಈ ಗಿಡ ಬೆಳೆಸಿ

ಸುವಾಸನೆ ಜೊತೆ ಮನೆ – ಮನ ಫ್ರೆಶ್ ಆಗಿರ್ಬೇಕು ಅಂದ್ರೆ ಬಾಲ್ಕನಿಯಲ್ಲಿ ಈ ಗಿಡ ಬೆಳೆಸಿ

ಸುವಾಸನೆ ಜೊತೆ ಮನೆ – ಮನ ಫ್ರೆಶ್ ಆಗಿರ್ಬೇಕು ಅಂದ್ರೆ ಬಾಲ್ಕನಿಯಲ್ಲಿ ಈ ಗಿಡ ಬೆಳೆಸಿ

ಮನೆ ಸುವಾಸನೆಯಿಂದ ಕೂಡಿದ್ರೆ ಮನಸ್ಸು ಫ್ರೆಶ್ ಆಗಿರುತ್ತೆ. ಇದೇ ಕಾರಣಕ್ಕೆ ಕೆಲವರು ರೂಮ್ ಫ್ರೆಶ್ನರ್, ಸ್ಪ್ರೇ ಬಳಕೆ ಮಾಡ್ತಾರೆ. ಆದ್ರೆ ಇದ್ರ ಅಗತ್ಯ ಇಲ್ಲ. ನಿಮ್ಮ ಮನೆ ಬಾಲ್ಕನಿಯಲ್ಲಿ ಕೆಲ ಗಿಡ ಬೆಳೆಸಿದ್ರೆ ಅದ್ರ ಹೂವಿನ ಸುವಾಸನೆ ನಿಮ್ಮನ್ನು ಮಾತ್ರವಲ್ಲ ನಿಮ್ಮ ಮನೆಯನ್ನೂ ಫ್ರೆಶ್ ಆಗಿಡುತ್ತೆ.

ಪ್ರತಿಯೊಬ್ಬರೂ ಹಸಿರು, ಉಲ್ಲಾಸಕರ, ನೈಸರ್ಗಿಕ ಸುಗಂಧವನ್ನು ಇಷ್ಟಪಡ್ತಾರೆ. ಇದು ಮನಸ್ಸನ್ನು ಮುದಗೊಳಿಸುವ ಜೊತೆಗೆ ರಿಲ್ಯಾಕ್ಸ್ ಮಾಡುತ್ತೆ. ಕೆಲವು ಸಸ್ಯಗಳು ಸಂಜೆ ಆಗ್ತಿದ್ದಂತೆ ನಿಮ್ಮ ಮನೆ ವಾತಾವರಣವನ್ನೇ ಬದಲಿಸುತ್ತೆ. ಮನೆ ತುಂಬ ಸುಗಂಧವನ್ನು ಹರಡುತ್ತೆ. ಈ ಗಿಡಗಳನ್ನು ಬೆಳೆಸಲು ನಿಮಗೆ ದೊಡ್ಡ ಗಾರ್ಡನ್ ಅಗತ್ಯವಿಲ್ಲ. ಬಾಲ್ಕನಿಯಲ್ಲೇ ಈ ಗಿಡಗಳನ್ನು ಬೆಳೆಸಬಹುದು.

ಮಲ್ಲಿಗೆ ಪರಿಮಳಕ್ಕೆ ಮಾರು ಹೋಗದವರಿಲ್ಲ. ಪರಿಮಳಯುಕ್ತ ಸಸ್ಯದ ಪಟ್ಟಿಯಲ್ಲಿ ಇದು ಮುಂದಿದೆ. ಮಲ್ಲಿಗೆಯಲ್ಲಿ ನಾನಾ ವಿಧಗಳಿವೆ. ರಾತ್ರಿ ಮಲ್ಲಿಗೆ ಹೂವಿನ ಪರಿಮಳ ಗಾಢವಾಗುತ್ತೆ. ಮಲ್ಲಿಗೆಯನ್ನು ನೀವು ಆರಾಮವಾಗಿ ಪಾಟ್ ನಲ್ಲಿ ಬೆಳೆಸಬಹುದು. ಹೆಚ್ಚಿನ ಜಾಗ ಕೂಡ ಇದಕ್ಕೆ ಅಗತ್ಯವಿರೋದಿಲ್ಲ. ಸೂರ್ಯನ ಬೆಳಕು ಬರೋ ಜಾಗದಲ್ಲಿ ಇದನ್ನು ಬೆಳೆಸಿ. ಆಗಾಗ ಪೋಷಕಾಂಶದ ಮಣ್ಣು ನೀಡ್ತಿರಿ.

ಆಯುರ್ವೇದದಲ್ಲಿ ಇದು ಶುದ್ಧತೆ ಮತ್ತು ಸುಗಂಧದ ಸಂಕೇತವಾಗಿದೆ. ಇದು ಬಿಳಿ ಬಣ್ಣದ ಹೂವಾಗಿದೆ. ಈ ಹೂವು ಅರಳಿದ ತಕ್ಷಣ, ಸುತ್ತಮುತ್ತಲಿನ ಪ್ರದೇಶ ಸುವಾಸನೆಯಿಂದ ತುಂಬಿರುತ್ತವೆ. ಇದನ್ನು ಪಾಟ್ ನಲ್ಲಿ ಸುಲಭವಾಗಿ ಬೆಳೆಸಬಹುದು. ಇದಕ್ಕೆ ಗಾರ್ಡೇನಿಯಾ ಸಸ್ಯ ಅಂತ ಇನ್ನೊಂದು ಹೆಸರಿದೆ. ವರ್ಷಕ್ಕೆ ಸುಮಾರು 200 ದಿನಗಳವರೆಗೆ ಇದು ಅರಳುತ್ತದೆ. ವರ್ಷದ ಅರ್ಧದಷ್ಟು ದಿನ ನಿಮ್ಮ ಮನೆಯಲ್ಲಿ ಗಂಧರಾಜನ ಸುಗಂಧವಿರುತ್ತದೆ.

ಹೆಸರಿನಲ್ಲಿಯೇ ಇದು ರಾತ್ರಿ ಅರಳುವ ಹೂ ಅನ್ನೋದು ತಿಳಿಯುತ್ತೆ. ರಾತ್ರಿ ಅರಳುವ ಈ ಹೂ ಸುತ್ತಮುತ್ತಲೂ ಸುಗಂಧ ಹರಡುತ್ತೆ. ಮುಸ್ಸಂಜೆಯಾಗ್ತಿದ್ದಂತೆ ಅದರ ಸುವಾಸನೆ ನಿಧಾನವಾಗಿ ಹರಡಲು ಶುರುವಾಗುತ್ತದೆ. ರಾತ್ರಿ ರಾಣಿಗೆ ಹೆಚ್ಚಿನ ಸೂರ್ಯನ ಬೆಳಕು ಅಗತ್ಯವಿಲ್ಲ. ನೀವು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕೂಡ ಹಾಕಬೇಕಾಗಿಲ್ಲ. ಮಣ್ಣು ತೇವವಾಗಿದ್ದರೆ ರಾತ್ರಿ ರಾಣಿ ಆರಾಮವಾಗಿ ಬೆಳೆಯುತ್ತದೆ. ತಿಂಗಳಿಗೊಮ್ಮೆ ಸಾವಯವ ಗೊಬ್ಬರ ಹಾಕಬೇಕು. ನಿಮ್ಮ ಮನೆ ಬಾಲ್ಕನಿಯಲ್ಲಿ ಈ ಗಿಡವನ್ನು ನೀವು ಬೆಳೆಸಬಹುದು.

ಮಲ್ಲಿಗೆಯಲ್ಲಿ ನಾನಾ ವಿಧಗಳಿವೆ. ಅದರಲ್ಲಿ ದುಂಡು ಮಲ್ಲಿಗೆ ಕೂಡ ಒಂದು. ನೀವು ಬಾಲ್ಕನಿಯಲ್ಲಿ ಈ ದುಂಡು ಮಲ್ಲಿಗೆಯನ್ನು ಬೆಳೆಬಹುದು. ರಾತ್ರಿಯಾಗ್ತಿದಂತೆ ಅದರ ಸುವಾಸನೆ ಇಡೀ ಮನೆಯನ್ನು ಆವರಿಸುತ್ತದೆ. ಈ ಮಲ್ಲಿಗೆ ಗಿಡಕ್ಕೆ ಹೆಚ್ಚಿನ ನೀರು ಅಗತ್ಯವಿಲ್ಲ. ಮಣ್ಣು ಒಣಗಿದಾಗ ಮಾತ್ರ ನೀರು ಹಾಕಿದ್ರೆ ಸಾಕು.ಬೇಸಿಗೆಯಲ್ಲಿ ಪ್ರತಿ 2-3 ದಿನಗಳಿಗೊಮ್ಮೆ ಮತ್ತು ಚಳಿಗಾಲದಲ್ಲಿ ಪ್ರತಿ 4-5 ದಿನಗಳಿಗೊಮ್ಮೆ ನೀರು ಹಾಕಿ.

ಉದ್ದವಾದ ಕಾಂಡಗಳ ಮೇಲೆ ಅರಳುವ ಸುಗಂಧರಾಜದ ಬಣ್ಣ ಕೂಡ ಬಿಳಿ. ಅತ್ಯಂತ ಹೆಚ್ಚು ಸುಗಂಧವುಳ್ಳ ಈ ಸುಗಂಧರಾಜದ ಗಡ್ಡೆಯನ್ನು ನೀವು ಪಾಟ್ ನಲ್ಲಿ ನೆಡಬೇಕು. ಸರಿಯಾದ ಕಾಳಜಿ ಮಾಡಿದ್ರೆ ಬಾಲ್ಕನಿಯಲ್ಲೂ ಈ ಗಿಡ ಬೆಳೆಯುತ್ತದೆ. ಅನೇಕ ದಿನಗಳ ಕಾಲ ತನ್ನ ಸುಹಾಸನೆ ಬೀರುತ್ತಿರುತ್ತದೆ. ಇದಕ್ಕೆ ಮರಳು ಮಿಶ್ರಿತ ಜೇಡಿಮಣ್ಣಿನ ಅಗತ್ಯವಿದೆ. ನೀವು ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣನ್ನು ಕೂಡ ಬಳಸಬಹುದು.

Source link

Leave a Reply

Your email address will not be published. Required fields are marked *