ಗುಡ್ ನ್ಯೂಸ್: ಬಿಎಂಟಿಸಿ,ಮೆಟ್ರೋ ಪ್ರಯಾಣಕ್ಕೆ ಒಂದೇ ಸ್ಮಾರ್ಟ್ ಕಾರ್ಡ್ ಸಾಕು

ಗುಡ್ ನ್ಯೂಸ್: ಬಿಎಂಟಿಸಿ,ಮೆಟ್ರೋ ಪ್ರಯಾಣಕ್ಕೆ ಒಂದೇ ಸ್ಮಾರ್ಟ್ ಕಾರ್ಡ್ ಸಾಕು


ಗುಡ್ ನ್ಯೂಸ್: ಬಿಎಂಟಿಸಿ,ಮೆಟ್ರೋ ಪ್ರಯಾಣಕ್ಕೆ ಒಂದೇ ಸ್ಮಾರ್ಟ್ ಕಾರ್ಡ್ ಸಾಕು

ಬೆಂಗಳೂರು, (ಮಾರ್ಚ್ 10): ಪ್ರಯಾಣಿಕರಿಗೆ ಬಿಎಂಟಿಸಿ (ಬಿಎಂಟಿಸಿ) ಸಿಹಿಸುದ್ದಿ ಹೊತ್ತು ತಂದಿದೆ. ಇನ್ಮುಂದೆ ಟಿಕೆಟ್ ತೆಗೆದುಕೊಳ್ಳುವ ಟೆನ್ಷನ್ ಇರಲ್ಲ. ಆ ಕಾರ್ಡ್, ಈ ಕಾರ್ಡ್ ಅಂತ ಬ್ಯಾಗ್ ತಡಕುವ ಪ್ರಮೇಯವೇ ಬೇಡ, ಜಸ್ಟ್ ‘ನಮ್ಮ ಮೆಟ್ರೋ’ ಕಾರ್ಡ್ (ನಮ್ಮ ಮೆಟ್ರೋ ಕಾರ್ಡ್) ತೋರಿಸಿ ಪ್ರಯಾಣ ಮಾಡಬಹುದು. ಹೌದು.. ಮುಂದಿನ ದಿನಗಳಲ್ಲಿ ನೀವು ಡೆಬಿಟ್ ಕಾರ್ಡ್ (ಡೆಬಿಟ್ ಕಾರ್ಡ್) ಮತ್ತು ಕ್ರೆಡಿಟ್ ಕಾರ್ಡ್‌ಗಳು (ಕ್ರೆಡಿಟ್ ಕಾರ್ಡ್), ಮೋಟ್ರೋ ಕಾರ್ಡ್ ಸಹ ಕಂಡಕ್ಟರ್‌ಗೆ (ನಿರ್ವಾಹಕ) ತೋರಿಸಿ ಬಿಎಂಟಿಸಿ (ಬಿಎಂಟಿಸಿ) ಬಸ್‌ನಲ್ಲಿ ಹೋಗಬಹುದು. ಹೌದು..ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗದು ರಹಿತ ಟಿಕೆಟ್ ವ್ಯವಸ್ಥೆಗೆ ಮಹತ್ವದ ಹೆಜ್ಜೆ ಇಟ್ಟಿದ್ದು, ಸುಮಾರು 10 ಸಾವಿರ ಅತ್ಯಾಧುನಿಕ ಸ್ಮಾರ್ಟ್ ಟಿಕೆಟ್ ಯಂತ್ರಗಳನ್ನು (ಇಟಿಎಂ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರ) ಅಳವಡಿಸಲು ಮುಂದಾಗಿದೆ.

ಈ ಹೊಸ ಐಟಿಎಂ ಮೆಷಿನ್ ನಲ್ಲಿ ಎನ್ಸಿಎಂಸಿ ಕಾರ್ಡ್ ಬಳಸಿ ಅಂದರೆ ಬಿಎಂಟಿಸಿ ಮತ್ತು ನಮ್ಮ ಮೆಟ್ರೋ ರೈಲಿನಲ್ಲೂ ಸಂಚಾರ ಮಾಡಲು ಅವಕಾಶ ನೀಡುತ್ತದೆ. ಬರೋಬ್ಬರಿ 40 ಕೋಟಿ ರೂಪಾಯಿ ವೆಚ್ಚದಲ್ಲಿ ಮುಂಬೈ ಮೂಲದ ಚಲೋ ಅನ್ನೋ ಕಂಪನಿಗೆ ಟೆಂಡರ್ ನೀಡುತ್ತದೆ. ಐದು ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ 11 ಸಾವಿರ ಇಟಿಎಂ ಮಷಿನ್ ಪಡೆಯಲು ಮುಂದಾಗಿದೆ. ಸ್ವೀಕರಿಸಲು ಚಲೋ ಕಂಪನಿಗೆ 11 ಸಾವಿರ ಮಷಿನ್ ಸಪ್ಲೈ ಮಾಡಲು ಟೆಂಡರ್ ನೀಡಲಾಗುತ್ತದೆ. ಇದಕ್ಕೆ ಪ್ರಯಾಣಿಕರು ಕಂಡಕ್ಟರ್ ಕಳ್ಳಾಟಕ್ಕೆ ಬ್ರೇಕ್ ಬೀಳಲಿದೆ.

ಇದನ್ನೂ ಓದಿ: ಆಟೋ ಪ್ರಯಾಣಿಕರಿಗೆ ಬಿಗ್ ಶಾಕ್: ಹೋಟೆಲ್ ಬಂದ್ ಬೆನ್ನಲ್ಲೇ ಬೆಂಗಳೂರಿಗರಿಗೆ ಮತ್ತೊಂದು ಹೊಡೆತ

ಇನ್ನು ಈ ತಿಂಗಳಿನಲ್ಲಿ ಎಲ್ಲಾ ಬಿಎಂಟಿಸಿ ಬಸ್ಸುಗಳಲ್ಲಿ ಹೊಸ ಮೆಷಿನ್ ಗಳು ಬರುವ ಸಾಧ್ಯತೆಯಿದೆ. ಈ ಮಷಿನ್‌ಗಳಲ್ಲಿ ಎಟಿಎಂ ಕಾರ್ಡ್, ಕ್ರೆಡಿಟ್ ಕಾರ್ಡ್, ಫೋನ್ ಪೇ, ಗೂಗಲ್ ಪೇ ಸೇರಿದಂತೆ ಪೇಟಿಯಂ ಯೂಸ್ ಮಾಡಿ ಪ್ರಯಾಣಿಕರು ಹಣ ಪಾವತಿ ಮಾಡಿ ಸಂಚಾರ ಮಾಡಬಹುದು. ಈ ಮಷಿನ್ ನಲ್ಲಿ ಡೈನಾಮಿಕ್ ಕ್ಯೂ ಆರ್ ಕೋಡ್ ಗಳನ್ನು ಅಳವಡಿಸಿದ್ದು, ಇದು ಕಂಡಕ್ಟರ್, ಪ್ರಯಾಣಿಕರಿಗೆ ಮತ್ತು ಬಿಎಂಟಿಸಿ ನಿಗಮಕ್ಕೆ ವಂಚನೆ ಮಾಡಲು ಸಾಧ್ಯವಿಲ್ಲ. ಎಲ್ಲಿಂದ ಎಲ್ಲಿಗೆ?ಎಷ್ಟು ಟಿಕೆಟ್ ದರ ಎಂಬ ಸಂಪೂರ್ಣ ಮಾಹಿತಿಯನ್ನು ಅಪ್ಲೋಡ್ ಮಾಡಲಾಗಿದೆ.

ಐಟಿಎಂ ಯಂತ್ರಗಳಲ್ಲಿ ಹೊಸ ತಂತ್ರಜ್ಞಾನ

ಬಿಎಂಟಿಸಿಯಲ್ಲಿ ಸ್ಟಾಕ್ ಕ್ಯೂ ಕೋಡ್ ಸ್ಕ್ಯಾನ್ ಮಾಡಿಟಿಕ್ ಟಿಕೆಟ್ ಪ್ರಯಾಣಿಸುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಯಾವುದೇ ಕೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಬಳಸಿ ಟಿಕೆಟ್ ನೀಡುವ ವ್ಯವಸ್ಥೆ ಇಲ್ಲ. ಆದರೆ, ಇದೀಗ ಇದೇ ಮೊದಲ ಬಾರಿಗೆ ಬಿಎಂಟಿಸಿ ಆಯಂಡ್ರಾಯ್ಡ್ ಸೌಲಭ್ಯದ ವಿದ್ಯುನ್ಮಾನ ಟಿಕೆಟ್ ಯಂತ್ರ (ಇಟಿಎಂ)ಗಳನ್ನು ನೀಡಲಾಗುತ್ತಿದೆ. ಐಟಿಎಂ ಯಂತ್ರಗಳು ಹೊಸ ತಂತ್ರಜ್ಞಾನವನ್ನು ಹೊಂದಿದ್ದು, ನಗದು ಪಾವತಿಗೆ ಅನುಕೂಲವಾಗಿದೆ. ಇದರಿಂದ ಪ್ರಯಾಣಿಕರ ಡಿಜಿಟಲ್ ಪಾವತಿಗಳನ್ನು (UPI, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮುಂತಾದವು) ಬಳಸುವ ಸಾಧ್ಯತೆಯಿದೆ. ಇದರೊಂದಿಗೆ ಟಿಕೆಟ್ ನೀಡುವ ಪ್ರಕ್ರಿಯೆ ಪಾಸ್ಟ್ ಆಗುತ್ತದೆ.

ಈ ಐಟಿಎಂ ಯಂತ್ರಗಳಲ್ಲಿ ಗೂಗಲ್ ಪೇ, ಫೋನ್ ಪೇ, ಭೀಮ್ ಯುಪಿಐ ಆಧಾರಿತ ಡೈನಮಿಕ್ ಕ್ಯೂಆರ್ ಕೋಡ್‌ಗಳ ಜೊತೆಗೆ, ಮೆಟ್ರೋ ಕಾರ್ಡ್, ಡೆಬಿಟ್, ಕ್ರೆಡಿಟ್, ವೀಸಾ ಕಾರ್ಡ್‌ಗಳು ಮತ್ತು ಕಾಮನ್ ಮೊಬಿಲಿಟಿ ಕಾರ್ಡ್ (NCMC) ಬಳಸಿ ಪಾವತಿ ಮಾಡುವ ಅವಕಾಶವನ್ನು ನೀಡಲಾಗುತ್ತದೆ. ಈ ಯಂತ್ರದ ವಿಶೇಷವಾದ ಟಿಕೆಟ್ ವೇಗವಾಗಿ ಮುದ್ರಣವಾಗುತ್ತದೆ. ಟಚ್ ಸ್ಟೀನ್ ಮತ್ತು ವೇಗದ ಪ್ರಕ್ರಿಯೆ ವ್ಯವಸ್ಥೆಗಳನ್ನು ಈ ಸ್ಮಾರ್ಟ್ ಇಟಿಎಂ ಹೊಂದಿರಲಿದೆ, ಡೈನಮಿಕ್ ಕ್ಯೂ ಆರ್ ಕೋಡ್ ಆಧಾರಿತ ಪಾವತಿ ಸುಲಭವಾಗಿ ಟಿಕೆಟ್ ನೀಡುವುದಕ್ಕೆ ಅನುಕೂಲ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸ್ಟಾಟಿಕ್ ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಟಿಕೆಟ್ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ತಂದಿದೆ. ಈ ವ್ಯವಸ್ಥೆಯಲ್ಲಿ ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ನಿಂದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಮೊತ್ತವನ್ನು ಪಡೆಯಬಹುದು. ಆದರೆ ಇದುವರೆಗೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಟಿಕೆಟ್ ಪಡೆಯುವ ಅವಕಾಶವಿಲ್ಲ. ಆದರೆ ಇದೇ ಮೊದಲ ಬಾರಿ ಬಿಎಂಟಿಸಿ ಆಯಂಡ್ರಾಯ್ಡ್ ಆಧಾರಿತ ವಿದ್ಯುನ್ಮಾನ ಟಿಕೆಟ್ ಯಂತ್ರಗಳನ್ನು (ETM) ಪರಿಚಯಿಸುತ್ತಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *