
ಮನೆಯ ಮುಖ್ಯ ದ್ವಾರಕ್ಕೆ ಅರಿಶಿನ ನೀರು ಚಿಮುಕಿಸಿ. ಹೀಗೆ ಮಾಡುವುದರಿಂದ ನಕಾರಾತ್ಮಕವಾದ ದೃಷ್ಟಿ ದೋಷಗಳು ಪರಿಹಾರ ಆಗಲಿವೆ. ಕುಟುಂಬದ ಸದಸ್ಯರ ಮಧ್ಯೆ ಇರುವಂಥ ಭಿನ್ನಾಭಿಪ್ರಾಯಗಳು ದೂರವಾಗಲಿವೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಬೇಗ ಆಸಕ್ತಿ ಕಳೆದುಕೊಳ್ಳುವಂತೆ ಆಗಲಿದೆ. ಮನಸ್ಸಿಟ್ಟು, ಶ್ರಮಪಟ್ಟು ಮಾಡಿದ ಕೆಲಸ ಎಲ್ಲದರಲ್ಲೂ ಯಶಸ್ಸು ಸಿಗುತ್ತದೆ ಎಂಬ ಖಾತ್ರಿ ಇರುವುದಿಲ್ಲ. ಮುಖ್ಯವಾಗಿ ನಿಮಗಿರುವ ಆಸಕ್ತಿ ಹಾಗೂ ಅಗತ್ಯವೇ ಎಲ್ಲರಿಗೂ ಇರುತ್ತದೆ ಎಂದು ಭಾವಿಸುವುದಕ್ಕೆ ಹೋಗಬೇಡಿ. ಮೇಲುನೋಟಕ್ಕೆ ಕಾಣುವಂತೆಯೇ ನೀವು ಈ ಕೆಲಸ ಮಾಡಿದ್ದು ಸಾಕು ಎಂಬಂತೆ ನಡೆದುಕೊಳ್ಳುವುದಕ್ಕೆ ಶುರುವಾಗಲಿದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಈ ಯಾವಾಗಲೋ ನಿಮ್ಮಿಂದ ಆಗಿದ್ದ ನಷ್ಟವೊಂದಕ್ಕೆ ಪರಿಹಾರ ಕಟ್ಟಿಕೊಡುವಂತೆ ಕೆಲವರು ಬೆನ್ನು ಬೀಳಲಿದ್ದಾರೆ. ಈ ರೀತಿ ನೀವು ಮಾತು ಹೇಳಿದ್ದಿರಿ, ಅದಕ್ಕೆ ನಾವೇ ಸಾಕ್ಷಿ ಎಂದು ಹೇಳಿಕೊಂಡು ಕೆಲವು ಜನ ಅವರ ಬೆಂಬಲಕ್ಕೂ ನಿಲ್ಲಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ಏನು ಹೇಳಬೇಕು ಎಂದು ತಿಳಿಯದೆ ನೀವು ಗೊಂದಲಕ್ಕೆ ಈಡಾಗುವ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನೀವು ಈ ಹಿಂದೆ ಯಾವುದನ್ನು ಬಯಸಿದ್ದಿರೋ ಅದರಂತೆ. ಧಾರ್ಮಿಕ ಕಾರ್ಯಕ್ರಮಗಳು,- ಸಮಾರಂಭಗಳನ್ನು ನಡೆಸುವಂಥ ಸಭೆಗಳು ನಿಮಗೆ ವಹಿಸುವಂಥ ಸಾಧ್ಯತೆಗಳಿವೆ. ಅಷ್ಟೇ ಅಲ್ಲ, ಹಣಕಾಸು ಹೊಂದಿಸಬೇಕಾದ ಹೆಚ್ಚುವರಿ ಹೊಣೆ ಕೂಡ ನಿಮ್ಮ ಮೇಲೆ ಬೀಳಬಹುದು. ಇದೇ ವಿಚಾರಕ್ಕೆ ನಿಮ್ಮ ಸ್ನೇಹಿತರು- ಆಪ್ತರ ಅಭಿಪ್ರಾಯಗಳು ವಿಭಜನೆ ಆಗಲಿವೆ.
ಲೇಖನ- ಸ್ವಾತಿ ಎನ್.ಕೆ.