Headlines

ಅಸ್ಸಾಂನಲ್ಲಿ ಎಲೆಕ್ಷನ್‌ ಮೊದಲೇ ಬಂಪರ್‌: 40 ಲಕ್ಷ ಮಹಿಳೆಯರಿಗೆ ₹9,000 ರು. ಗ್ಯಾರಂಟಿ! | Assam Orunodoi scheme | Assam Government Rs 9000 Guarantee For 40 Lakhwomen Rav

ಚುನಾವಣೆ ಹೊಸ್ತಿಲಲ್ಲಿರುವ ಅಸ್ಸಾಂನಲ್ಲಿ, ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಸರ್ಕಾರವು ‘ಒರುನೋಡೈ’ ಯೋಜನೆಯಡಿ 40 ಲಕ್ಷ ಮಹಿಳೆಯರ ಖಾತೆಗಳಿಗೆ ತಲಾ 9,000 ರೂ. ಜಮಾ ಮಾಡಿದೆ. ಈ ಮೊತ್ತವು ನಾಲ್ಕು ತಿಂಗಳ ಯೋಜನೆ ಹಣ ಮತ್ತು ಬೊಹಾಂಗ್ ಬಿಹು ಹಬ್ಬದ ಕೊಡುಗೆಯನ್ನು ಒಳಗೊಂಡಿದೆ.

ಗುವಾಹಟಿ: ಚುನಾವಣಾ ಹೊಸ್ತಿಲಿನಲ್ಲಿರುವ ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮಹಿಳೆಯರ ಮನ ಗೆಲ್ಲಲು ಮುಂದಾಗಿದ್ದಾರೆ. ರಾಜ್ಯದ 40 ಲಕ್ಷ ಕುಟುಂಬಗಳ ಮಹಿಳಾ ಮುಖ್ಯಸ್ಥರ ಬ್ಯಾಂಕ್‌ ಖಾತೆಗಳಿಗೆ ಸರ್ಕಾರದ ಗ್ಯಾರಂಟಿ ರೀತಿಯ ಯೋಜನೆಯೊಂದರ ಅಡಿ ಮಂಗಳವಾರ ತಲಾ 9,000 ರು. ಜಮಾ ಮಾಡಿದ್ದಾರೆ.

ಅಸ್ಸಾಂ ಸರ್ಕಾರವು ‘ಒರುನೋಡೈ’ ಎನ್ನುವ ಯೋಜನೆಯಡಿ ಅರ್ಹ ಮಹಿಳೆಯರ ಖಾತೆಗಳಿಗೆ 9,000 ರು. ವರ್ಗಾಯಿಸಿದೆ. ಒರುನೋಡೈ ಎಂಬುದು ಬಿಜೆಪಿ ಸರ್ಕಾರ 2020ರಲ್ಲಿ ಜಾರಿಗೆ ತಂದ ಯೋಜನೆ. ಇದರ ಅಡಿಯಲ್ಲಿ ಪ್ರತಿ ಕುಟುಂಬದ ಒಬ್ಬ ಅರ್ಹ ಮಹಿಳಾ ಫಲಾನುಭವಿಗೆ ತಿಂಗಳಿಗೆ 1,250 ರು.ಗಳನ್ನು ನೀಡಲಾಗುತ್ತದೆ. ಇದೀಗ 4 ತಿಂಗಳ ಹಣವಾದ ಒಟ್ಟು 5000 ರು.ಗಳನ್ನು ಒಟ್ಟಿಗೆ (ಜನವರಿಯಿಂದ ಏಪ್ರಿಲ್‌ವರೆಗೆ) ಜಮೆ ಮಾಡಲಾಗಿದೆ. ಸದ್ಯದ್ಲೇ ಬೊಹಾಂಗ್‌ ಬಿಹು ಎಂಬ ಹಬ್ಬ ಕೂಡ ಬರುತ್ತಿದ್ದು, ಹಬ್ಬದ ಕೊಡುಗೆಯಾಗಿ 4000 ರು. ಹಾಕಲಾಗಿದೆ. ಹೀಗಾಗಿ 9000 ರು. ಜಮೆ ಮಾಡಲಾಗಿದೆ.

ಆದರೆ ಶರ್ಮಾ ತಮ್ಮ ಎಕ್ಸ್‌ ಖಾತೆಯಲ್ಲಿ ಸ್ಪಷ್ಟನೆ ನೀಡಿ ‘ಇದು ಚುನಾವಣೆಗೆ ಸಂಬಂಧಿಸಿದ್ದಲ್ಲ’ ಎಂದು ಸಮರ್ಥಿಸಿಕೊಂಡಿದ್ದಾರೆ.

ಇತ್ತೀಚೆಗೆ ಬಿಹಾರದಲ್ಲಿ 10 ಸಾವಿರ ರು.ಗಳನ್ನು ಎಲ್ಲ ಮಹಿಳೆಯರ ಖಾತೆಗೆ ಜೆಡಿಯು-ಬಿಜೆಪಿ ಸರ್ಕಾರ ಚುನಾವಣೆಗೂ ಮುನ್ನ ಜಮೆ ಮಾಡಿದ್ದವು. ಇದು ಮೈತ್ರಿಕೂಟವನ್ನು ಅಧಿಕಾರಕ್ಕೆ ತರಲು ಕಾರಣವಾಗಿತ್ತು. ಪೊಂಗಲ್ ವೇಳೆ ತಮಿಳುನಾಡು ಸಿಎಂ, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್‌ ಕೂಡ ಇದೇ ರೀತಿ ಮಹಿಳೆಯರ ಖಾತೆಗೆ ಹಣ ಜಮೆ ಮಾಡಿದ್ದರು.

Source link

Leave a Reply

Your email address will not be published. Required fields are marked *