Headlines

‘ನನಗೆ ವಿಚ್ಛೆದನ ಬಗ್ಗೆ ನಂಬಿಕೆ ಇಲ್ಲ, ಮದುವೆಗೂ ಮೊದಲು ನೂರು ಬಾರಿ ಯೋಚಿಸುವೆ’; ತ್ರಿಷಾ

‘ನನಗೆ ವಿಚ್ಛೆದನ ಬಗ್ಗೆ ನಂಬಿಕೆ ಇಲ್ಲ, ಮದುವೆಗೂ ಮೊದಲು ನೂರು ಬಾರಿ ಯೋಚಿಸುವೆ’; ತ್ರಿಷಾ


'ನನಗೆ ವಿಚ್ಛೇದನದ ಬಗ್ಗೆ ನಂಬಿಕೆ ಇಲ್ಲ, ಮದುವೆಗೂ ಮೊದಲು ನೂರು ಬಾರಿ ಯೋಚಿಸುವೆ'; ತ್ರಿಷಾ

ನಟಿ ತ್ರಿಷಾ ಕೃಷ್ಣನ್ (ತ್ರಿಷಾ) ಅವರು ಇನ್ನೂ ಅವಿವಾಹಿತ. ದಳಪತಿ ವಿಜಯ್ ಜೊತೆ ಅವರು ಕಾಣಿಸಿಕೊಂಡಿರುವ ಮಧ್ಯೆ ಇಬ್ಬರಿಗೂ ಸಂಬಂಧ ಕಲ್ಪಿಸಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬ ಪ್ರಶ್ನೆಗೆ ವಿಜಯ್ ಅಥವಾ ತ್ರಿಷಾ ಅವರೇ ಸ್ಪಷ್ಟನೆ ಕೊಡಬೇಕಿದೆ. ಈ ಮಧ್ಯೆ ವಿಜಯ್ ಅವರಿಗೆ ವಿಚ್ಛೇದನ ಕೊಡಲು ಪತ್ನಿ ಸಂಗೀತಾ ರೆಡಿ ಆಗಿದ್ದಾರೆ. ಹೀಗಿರುವಾಗ, ತ್ರಿಷಾ ಅವರ ಹಳೆಯ ಹೇಳಿಕೆ ವೈರಲ್ ಆಗಿದೆ.

ವಿಜಯ್ ವಿರುದ್ಧ ಸಂಗೀತ ಗಂಭೀರ ಆರೋಪ ಮಾಡಿದ್ದಾರೆ. ಪತಿ ವಿಜಯ್‌ಗೆ ಅಕ್ರಮ ಸಂಬಂಧವಿದೆ ಎಂದು ಅವರು ಆರೋಪಿಸಿದ್ದಾರೆ. ವಿಜಯ್ ಅಕ್ರಮ ಸಂಬಂಧ ಹೊಂದಿರೋದು ತ್ರಿಷಾ ಜೊತೆ ಎಂದು ಎಲ್ಲರೂ ಕಲ್ಪಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ತ್ರಿಷಾ ಅವರು ಈ ಮೊದಲು ವಿವಾಹದ ಬಗ್ಗೆ ಮಾತನಾಡಿದ್ದರು.
ತ್ರಿಷಾಗೆ ಈ ಮೊದಲು ನಿಶ್ಚಿತಾರ್ಥವಾಗಿದೆ. ಅದನ್ನು ಅವರು ಮುರಿದುಕೊಂಡರು. ಇದಕ್ಕೆ ಕಾರಣವನ್ನೂ ಅವರು ನೀಡಿದ್ದರು. ತ್ರಿಷಾಗೆ ಆ ವ್ಯಕ್ತಿ ಸಾಕಷ್ಟು ಷರತ್ತುಗಳನ್ನು ಹಾಕುತ್ತಿದ್ದರಂತೆ. ಈ ಕಾರಣದಿಂದ ಅವರು ಸಂಬಂಧವನ್ನು ಮುಂದುವರಿಸಲೇ ಇಲ್ಲ.

‘ನಾನು ವಿಚ್ಛೇದನದಲ್ಲಿ ನಂಬಿಕೆ ಇಟ್ಟಿಲ್ಲ. ಹೀಗಾಗಿ, ನಾನು ಜೀವನ ಮಾಡಬೇಕಾದ ವ್ಯಕ್ತಿ ಇವರೇ ಎಂದು ಫೀಲ್ ಆಗಬೇಕು. ನಾನು ಮದುವೆಯಾದ ಬಳಿಕ ವಿಚ್ಛೇದನ ಪಡೆಯಲು ಬಯಸುವುದಿಲ್ಲ. ಅದೂ ನಾನಿಷ್ಟ ಪಟ್ಟ ವ್ಯಕ್ತಿಯಿಂದ ದೂರ ಆಗಲ್ಲ’ ಎಂದು ಅವರು ಹೇಳಿದರು.

‘ನನಗೆ ವಿಚ್ಛೇದನದಲ್ಲಿ ನಂಬಿಕೆ ಇಲ್ಲ. ಮದುವೆಗೂ ಮುನ್ನ 100 ಬಾರಿ ಯೋಚಿಸುತ್ತೇನೆ. ಬೇರೆಯವರಿಗೆ ನೋವುಂಟು ಮಾಡಲು ಅಥವಾ ಅತೃಪ್ತ ಜೀವನ ನಡೆಸಲು ನಾನು ಬಯಸುವುದಿಲ್ಲ’ ತ್ರಿಷಾ ಈ ಮೊದಲು ಹೇಳಿದ್ದರು.

‘ನನ್ನ ಸುತ್ತಲಿರೋ ಅನೇಕರು ತಪ್ಪು ಕಾರಣಗಳಿಗಾಗಿ ಮದುವೆಯಾಗುತ್ತಿದ್ದಾರೆ ಎಂದು ನನಗೆ ಅನಿಸುತ್ತದೆ. ಅವರು ತುಂಬಾ ಅತೃಪ್ತರು. ನಾನು ಅಂತಹ ದಾಂಪತ್ಯದಲ್ಲಿರಲು ಬಯಸುವುದಿಲ್ಲ. ನಾನು ಪ್ರೀತಿಯಲ್ಲಿ ಬೀಳಲು ಬಯಸುತ್ತೇನೆ. ನಾನು ಅದರ ಬಗ್ಗೆ ತುಂಬಾ ನಿರ್ದಿಷ್ಟವಾಗಿದ್ದೇನೆ. ಹೀಗಾಗಿ, ಮದುವೆಗೂ ಮೊದಲು ನಾನು ಯೋಚಿಸುತ್ತೇನೆ’ ಎನ್ನುತ್ತಾರೆ ತ್ರಿಷಾ.

ಇದನ್ನೂ ಓದಿ: ತ್ರಿಷಾಗೆ ನಡೆದಿತ್ತು ನಿಶ್ಚಿತಾರ್ಥ; ಹುಡುಗ ಯಾರು? ಬೇಡ ಎಂದಿದ್ದು ಏಕೆ?

‘ಈ ಕಾರಣದಿಂದ ನನ್ನ ಮದುವೆ ರದ್ದಾಯಿತು. ನಟನೆ ತೊರೆಯುವಂತೆ ಹೇಳಿದರು. ಹೀಗಾಗಿ, ನಾನು ಆತನನ್ನೇ ಬಿಟ್ಟೆ. ನಾನು ಪ್ರೆಗ್ನೆಂಟ್ ಆಗಿದ್ದಾಗ ಮಾತ್ರ ನಟನೆಯಿಂದ ಬ್ರೇಕ್ ಪಡೆಯಬೇಕು ಎಂದುಕೊಂಡಿದ್ದೇನೆ. ನನ್ನ ಕೊನೆ ಉಸಿರು ಇರೋವರೆಗೂ ನಟಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *