Headlines

ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ ಯಾರ ಕಾಲದ್ದು ಗೊತ್ತಾ? ಇದರ ಬೆಲೆ ಕೇಳಿದ್ರೆ ಶಾಕ್​​​ ಆಗುವುದು ಗ್ಯಾರಂಟಿ!

ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ ಯಾರ ಕಾಲದ್ದು ಗೊತ್ತಾ? ಇದರ ಬೆಲೆ ಕೇಳಿದ್ರೆ  ಶಾಕ್​​​ ಆಗುವುದು ಗ್ಯಾರಂಟಿ!


ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ ಯಾರ ಕಾಲದ್ದು ಗೊತ್ತಾ? ಇದರ ಬೆಲೆ ಕೇಳಿದ್ರೆ ಶಾಕ್ ಆಗುವುದು ಗ್ಯಾರಂಟಿ!

ಗದಗ, ಮಾ.11: ಲಕ್ಕುಂಡಿಯಲ್ಲಿ (ಲಕ್ಕುಂಡಿ ಚಿನ್ನದ ನಿಧಿ) ಈ ವರ್ಷ (2026) ಜನವರಿ 10 ರಂದು ಇದ್ದ ಚಿನ್ನದ ನಿಧಿಯ ಕುರಿತು ಕುತೂಹಲಕಾರಿ ವಿಷಯಗಳು ಹೊರಬಂದಿವೆ. ರಿತ್ತಿ ಮನೆಯ ಪಾಯ ತೊಡುವಾಗ ಸಿಕ್ಕಿದ್ದ ಈ ಆಭರಣಗಳು ಕೇವಲ ಬಂಗಾರವಲ್ಲ, ಅವು ಇತಿಹಾಸದ ಅಮೂಲ್ಯ ದಾಖಲೆ. ಗದಗ ಭವನದಲ್ಲಿ ಡಿಸಿ ನೇತೃತ್ವದಲ್ಲಿ ನಡೆದ ಪರಿಶೀಲನೆಯಲ್ಲಿ ಪುರಾತತ್ವ ನಿಯಂತ್ರಣ ಸಮಿತಿ ಈ ಆಭರಣಗಳು ಯಾವ ಕಾಲದ್ದು, ಯಾರಿಗೆ ಸೇರಬೇಕಿರುವುದು, ಅದರ ಮೌಲ್ಯಗಳು ಎಷ್ಟು ಎಂಬ ಬಗ್ಗೆ ಮಾಹಿತಿ ಇದೆ.

ಈ ಆಭರಣಗಳು ಸುಮಾರು 500 ರಿಂದ 600 ವರ್ಷಗಳಷ್ಟು ಹಳೆಯವು. ಇವು ಕಲ್ಯಾಣ ಚಾಲುಕ್ಯರು ಮತ್ತು ವಿಜಯನಗರ ಅರಸರ ಕಾಲದ ಕಲೆ ಮತ್ತು ಸಂಸ್ಕೃತಿಯನ್ನು ಸಾರಿ ಹೇಳುತ್ತಿವೆ. ಇವು ಸಾಮಾನ್ಯ ಮಹಿಳೆಯರು ಧರಿಸುವ ಒಡವೆಗಳಲ್ಲ, ಬದಲಿಗೆ ಹೆಣ್ಣು ದೇವರಿಗೆ ಅಥವಾ ಉತ್ಸವ ಮೂರ್ತಿಗಳಿಗೆ ಅಲಂಕರಿಸುವ ಅಪರೂಪದ ಆಭರಣಗಳು. ಇದರಲ್ಲಿ ಹೆಣ್ಣು ದೇವರ ಮೂರ್ತಿಯೂ ಇದೆ.ಚಿನ್ನದ ಜೊತೆಗೆ ಈ ಆಭರಣಗಳಲ್ಲಿ ಅತ್ಯಂತ ಅಪರೂಪದ ನೀಲಮಣಿ, ಸ್ಪಟಿಕ, ಹವಳ ಸೇರಿದಂತೆ ರತ್ನಗಳನ್ನು ಬಳಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೂ ತಟ್ಟಿದ ಯುದ್ಧದ ಬಿಸಿ: ಭಕ್ತರ ಗಮನಕ್ಕೆ ಇಂದಿನಿಂದ ಈ ಸೇವೆ ಸ್ಥಗಿತಗೊಂಡಿದೆ

ಕೇವಲ ಚಿನ್ನದ ತೂಕದ (465 ಗ್ರಾಂ) ಲೆಕ್ಕಾಚಾರ ಹಾಕಿದರೆ ಇಂದಿನ ಮಾರುಕಟ್ಟೆ ದರದಲ್ಲಿ ಸುಮಾರು 35-40 ಲಕ್ಷ ರೂ. ಆಗಬಹುದು. ಆದರೆ ಇವುಗಳ ‘ಆಯಂಟಿಕ್’ (ಪ್ರಾಚೀನ) ಮೌಲ್ಯ ಅಂದಾಜು 8 ಕೋಟಿ ರೂಪಾಯಿ! ಈಗಿನ ದರಕ್ಕಿಂತ ಹತ್ತು ಪಟ್ಟು ಹೆಚ್ಚು. ಸಮಿತಿ ಅಧ್ಯಕ್ಷ ಎಂ.ಎಸ್. ಕೃಷ್ಣಮೂರ್ತಿ ನೇತೃತ್ವದಲ್ಲಿ ಕಲಾ ಇತಿಹಾಸಕಾರರಾದ ರಾಘವೇಂದ್ರ ಕುಲಕರ್ಣಿ, ಪ್ರೊ. ಚೂಡಾಮಣಿ ನಂದಗೋಪಾಲ, ಶಾಸನ ತಜ್ಞ ಹನುಮಾಪಕ್ಷಿ ಗೋಗಿ, ರತ್ನ ತಡೆ ಪ್ರಭು ಕಮ್ಮಾರ ಮತ್ತು ಡಾ. ಶೇಜೇಶ್ವರ ಅವರ ತಂಡ ನಾಲ್ಕೈದು ಗಂಟೆಗಳ ಕಾಲ ಒಂದೊಂದು ಆಭರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *