
ರಶ್ಮಿಕಾ ಮಂದಣ್ಣ (ರಶ್ಮಿಕಾ ಮಂದಣ್ಣ) ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಅವರ ವಿವಾಹದ ಫೋಟೋಗಳು ವೈರಲ್ ಆಗಿವೆ. ವಿವಾಹ ಪೂರ್ವ ಕಾರ್ಯಕ್ರಮ, ವಿವಾಹ ಶಾಸ್ತ್ರಗಳು ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ನಡೆದವು. ಹೀಗಿರುವಾಗಲೇ ರಶ್ಮಿಕಾ ಮಂದಣ್ಣ ಹಾಗೂ ಅವರ ಸಹೋದರಿಯ ಕ್ಯೂಟ್ ಫೋಟೋಗಳು ವೈರಲ್ ಆಗಿವೆ. ಅಂದು ಹೇಗಿದ್ದರು ಹಾಗೂ ಈಗ ಹೇಗಿದ್ದಾರೆ ಎಂಬ ಕೊಲ್ಯಾಜ್ ಗಮನ ಸೆಳೆಯುವ ರೀತಿಯಲ್ಲಿ ಇದೆ.
ರಶ್ಮಿಕಾ ಮಂದಣ್ಣ ಸಹೋದರಿ ಹೆಸರು ಶಿಮನ್. ಇಬ್ಬರ ನಡುವೆ ಸುಮಾರು 16 ವರ್ಷಗಳ ವಯಸ್ಸಿನ ಅಂತರವಿದೆ. ರಶ್ಮಿಕಾ ಜನಿಸಿದ್ದು, 1996ರ ಏಪ್ರಿಲ್ 5 ರಂದು. ಅವರಿಗೆ ಈ ಏಪ್ರಿಲ್ 30 ವರ್ಷ ತುಂಬಲಿದೆ. ಶಿಮನ್‌ಗೆ ಈಗ 14 ವರ್ಷ. ಅವಳು ಅಕ್ಕನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ್ದಾಳೆ.
ಈ ದೊಡ್ಡ ವಯಸ್ಸಿನ ಅಂತರದಿಂದಾಗಿ,ರಶ್ಮಿಕಾ ಶಿಮನ್ ಮಗಳಂತೆ ಭಾಸವಾಗುತ್ತಾರಂತೆ. ಅವರ ಬಿಡುವಿಲ್ಲದ ವೃತ್ತಿಜೀವನದಿಂದಾಗಿ ಶಿಮನ್ ಬೆಳೆಯುವುದನ್ನು ನೋಡುವ ಅವಕಾಶವನ್ನು ಕಳೆದುಕೊಳ್ಳುತ್ತಿರುವುದಕ್ಕೆ ರಶ್ಮಿಕಾಗೆ ಬೇಸರವಾಗಿದೆ.
ರಶ್ಮಿಕಾ ಅವರು ತಂಗಿಯ ಜೊತೆ ಫೋಟೋ ಹಂಚಿಕೊಂಡಿದ್ದು ಕಡಿಮೆ. ಅವಳ ಖಾಸಗಿತನಕ್ಕೆ ದಕ್ಕೆ ಬರಬಾರದು ಎಂಬ ಕಾರಣಕ್ಕೆ ತಂಗಿ ರಶ್ಮಿಕಾ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರಲಿಲ್ಲ. ಆದರೆ, ಮದುವೆಯ ಸಂದರ್ಭದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ರಶ್ಮಿಕಾ ಹಂಚಿಕೊಳ್ಳಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: ಮದುವೆಯ ಹೊಸ ಫೋಟೋ ಶೇರ್ ಮಾಡಿದ ರಶ್ಮಿಕಾ-ವಿಜಯ್; ಸಖತ್ ಕಲರ್ ಫುಲ್
ಮೊದಲ ಫೋಟೋ 2020ರಲ್ಲಿ ತೆಗೆದಿದ್ದು ಅಗತ್ಯ. ಅಂದರೆ, ಆಗ ಶಿಮನ್‌ಗೆ 8 ವರ್ಷ. ಈಗ ಆಕೆಗೆ 14 ವರ್ಷ. ಈ ಎರಡೂ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಸದ್ಯ ಸಿನಿಮಾಗಳಿಂದ ಬ್ರೇಕ್ ಪಡೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.