ಕಂಗನಾ ರನೌತ್ ಮುಂದಿನ ಸಿನಿಮಾಕ್ಕೆ ಆ ಧಾರುಣ ಘಟನೆ ಸ್ಪೂರ್ತಿ

ಕಂಗನಾ ರನೌತ್ ಮುಂದಿನ ಸಿನಿಮಾಕ್ಕೆ ಆ ಧಾರುಣ ಘಟನೆ ಸ್ಪೂರ್ತಿ


ಕಂಗನಾ ರನೌತ್ ಮುಂದಿನ ಸಿನಿಮಾಕ್ಕೆ ಆ ಧಾರುಣ ಘಟನೆ ಸ್ಪೂರ್ತಿ

ಕಂಗನಾ ರನೌತ್ (ಕಂಗನಾ ರನೌತ್), ಬಾಲಿವುಡ್ ನ ಪ್ರತಿಭಾವಂತ ನಟಿ. ನಟನೆಗೆ ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ನಟಿ ಕಂಗನಾ ರನೌತ್. ಅತಿ ಹೆಚ್ಚು ರಾಷ್ಟ್ರಪ್ರಶಸ್ತಿ ಪಡೆದ ಭಾರತೀಯ ನಟಿಯರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಐದು ಪ್ರಶಸ್ತಿಗಳನ್ನು ಪಡೆದಿರುವ ಶಬಾನಾ ಆಜ್ಮಿ ಮೊದಲ ಸ್ಥಾನದಲ್ಲಿದ್ದಾರೆ. ಸಂಸದೆಯೂ ಆಗಿರುವ ನಟಿ ಕಂಗನಾ ರನೌತ್, ಕಳೆದ ಕೆಲವಾರು ವರ್ಷಗಳಿಂದಲೂ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಮಾತ್ರವೇ ನಟಿಸುತ್ತಿದ್ದಾರೆ. ಅದರಲ್ಲೂ ಐತಿಹಾಸಿಕ, ಸಾಮಾಜಿಕ ಕತೆಯುಳ್ಳ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಕಂಗನಾ ಹೊಸದೊಂದು ಸಿನಿಮಾದಲ್ಲಿ ನಟಿಸಲಿದ್ದಾರೆ, ಈ ಸಿನಿಮಾ ಮುಂಬೈನಲ್ಲಿ ನಡೆದ ಧಾರುಣ ಘಟನೆಯೊಂದರಿಂದ ಸ್ಪೂರ್ತಿ ಪಡೆದಿದೆ.

2008 ರ ಮುಂಬೈ ದಾಳಿಯ ಬಗೆಗಿನ ಕಥೆ ಹೊಂದಿರುವ ಸಿನಿಮಾದಲ್ಲಿ ಕಂಗನಾ ರನೌತ್ ನಟಿಸಲಿದ್ದಾರೆ. ಆ ಕರಾಳ ದಿನದಂದು ದುರುಳ ಭಯೋತ್ಪಾದಕರು ಆಸ್ಪತ್ರೆ ನಿಲ್ದಾಣ, ರೆಸ್ಟೊರೆಂಟ್, ಐಶಾರಾಮಿ ಹೋಟೆಲ್‌ಗಳ ಜೊತೆಗೆ ಆಸ್ಪತ್ರೆಯೊಂದರ ಮೇಲೂ ದಾಳಿ ನಡೆಸಲಾಯಿತು. ಆಸ್ಪತ್ರೆಯಲ್ಲಿ ಗುಂಡಿನ ಸುರಿಮಳೆಯನ್ನೇ ಸುರಿಸಿದ್ದರು. ಆಸ್ಪತ್ರೆಯ ಮೇಲಿನ ದಾಳಿಯ ಘಟನೆಯನ್ನು ಇದೀಗ ಸಿನಿಮಾ ಒಂದನ್ನು ನಿರ್ಮಿಸಲಾಗುತ್ತಿದ್ದು, ಸಿನಿಮಾದಲ್ಲಿ ಕಂಗನಾ ರನೌತ್ ನಾಯಕಿಯಾಗಿ ನಟಿಸಲಿದ್ದಾರೆ.

ಇದನ್ನೂ ಓದಿ:’ವಿರೋಧಿ’ಗಳೊಟ್ಟಿಗೆ ವೇದಿಕೆ ಏರಿ ಡ್ಯಾನ್ಸ್ ಮಾಡಿದ ಕಂಗನಾ ರನೌತ್

ಸಿನಿಮಾದಲ್ಲಿ ಕಂಗನಾ ರನೌತ್ ನರ್ಸ್ ಪಾತ್ರದಲ್ಲಿ ನಟಿಸಲಿದ್ದಾರೆ. ಅದೇ ಸಿನಿಮಾದಲ್ಲಿ ಮರಾಠಿಯ ಖ್ಯಾತ ನಟಿ ಗಿರಿಜಾ ಓಕ್ ಸಹ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಸಿನಿಮಾವನ್ನು ಮನೋಜ್ ತಪಾಡಿಯಾ ನಿರ್ದೇಶನ ಮಾಡಲಿದೆ, ಇದು ಅವರ ಮೊದಲ ನಿರ್ದೇಶನದ ಸಿನಿಮಾ ಆಗಲಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಪ್ರಸ್ತುತ ಚಾಲ್ತಿಯಲ್ಲಿದ್ದು, ಸಿನಿಮಾದ ಸಂಪೂರ್ಣ ಚಿತ್ರೀಕರಣ ಸೆಟ್ ನಲ್ಲಿಯೇ ಯಶಸ್ವಿಯಾಗಿದೆ. ಸಿನಿಮಾದ ಚಿತ್ರೀಕರಣ ಬೇಗ ಮುಗಿಸಿ ಇದೇ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡಕ್ಕೆ. ಸಿನಿಮಾಕ್ಕೆ ‘ಭಾರತ ಭಾಗ್ಯ ವಿಧಾತ’ ಎಂದು ಹೆಸರಿಡಲಾಗಿದೆ.

ಕಂಗನಾ ರನೌತ್, ಸಂಸದೆ ಆದ ಬಳಿಕ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ. ಸಂಸದೆ ಆಗುವ ಮುಂಚೆ ‘ಎಮರ್ಜೆನ್ಸಿ’ ಸಿನಿಮಾದಲ್ಲಿ ನಟಿಸಿ, ತಾವೇ ನಿರ್ದೇಶನವನ್ನೂ ಮಾಡಿದ್ದರು. ಆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಫೇಲ್ ಆಯ್ತು. ಇದೀಗ ಅವರು ತಮಿಳು ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ನಿರ್ಮಾಣವಾಗುತ್ತಿರುವ ಥ್ರಿಲ್ಲರ್ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಅದರ ಹೊರತಾಗಿ ‘ಭಾರತ ಭಾಗ್ಯ ವಿಧಾತ’ ಸಿನಿಮಾದಲ್ಲಿಯೂ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *