Headlines

ಹೊಸ ಉದ್ಯಮಕ್ಕೆ ಕೈ ಹಾಕಿದ ಅಲ್ಲು ಅರ್ಜುನ್, ಮಹೇಶ್ ಬಾಬುಗೆ ಠಕ್ಕರ್

ಹೊಸ ಉದ್ಯಮಕ್ಕೆ ಕೈ ಹಾಕಿದ ಅಲ್ಲು ಅರ್ಜುನ್, ಮಹೇಶ್ ಬಾಬುಗೆ ಠಕ್ಕರ್


ಹೊಸ ಉದ್ಯಮಕ್ಕೆ ಕೈ ಹಾಕಿದ ಅಲ್ಲು ಅರ್ಜುನ್, ಮಹೇಶ್ ಬಾಬುಗೆ ಠಕ್ಕರ್

ಅಲ್ಲು ಅರ್ಜುನ್ (Allu Arjun) ಸ್ಟಾರ್ ಪ್ಯಾನ್ ಇಂಡಿಯಾ ನಟ. ಅಲ್ಲು ಕುಟುಂಬ ಹಲವು ದಶಕಗಳಿಂದಲೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವುದು ಮಾತ್ರ ಚಿತ್ರರಂಗಕ್ಕೆ ಸಂಬಂಧಿಸಿದ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದೆ. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ತೆಲುಗು ಚಿತ್ರರಂಗದ ಯಶಸ್ವಿ ನಿರ್ಮಾಪಕ ಮತ್ತು ವಿತರಕ. ನಿರ್ಮಾಣ ಸಂಸ್ಥೆ, ಒಟಿಟಿ, ಸ್ಟುಡಿಯೋಗಳನ್ನು ಅಲ್ಲು ಕುಟುಂಬ ಹೊಂದಿದೆ. ಇದೀಗ ಹೊಸ ಉದ್ಯಮಕ್ಕೆ ಅಲ್ಲು ಅರ್ಜುನ್ ಕೈ ಹಾಕಿದ್ದಾರೆ.

ಅಲ್ಲು ಅರ್ಜುನ್ ಅವರು ಮಲ್ಟಿಪ್ಲೆಕ್ಸ್ ಒಂದನ್ನು ನಿರ್ಮಿಸಿದ್ದು, ಹೈದರಾಬಾದ್‌ನ ಈ ಮಲ್ಟಿಪ್ಲೆಕ್ಸ್‌ಗಳಲ್ಲಿಯೇ ಅತ್ಯಂತ ಗುಣಮಟ್ಟದ ಮಲ್ಟಿಪ್ಲೆಕ್ಸ್ ಇದೆ ಎನ್ನಲಾಗುತ್ತಿದೆ. ಹೈದರಾಬಾದ್‌ನ ಕೋಕಾಪೇಟೆಯಲ್ಲಿ ಇಎ ಮಲ್ಟಿಪ್ಲೆಕ್ಸ್ ನಿರ್ಮಾಣವಾಗಿದ್ದು, ನಾಳೆ (ಮಾರ್ಚ್ 12) ಇದರ ಉದ್ಘಾಟನಾ ಸಮಾರಂಭ ಆಯೋಜನೆಯಾಗಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಖುದ್ದು ಈ ಮಲ್ಟಿಪ್ಲೆಕ್ಸ್ ಗೆ ಲೋಕಾರ್ಪಣೆ ಮಾಡಲಿದ್ದಾರೆ. ಈ ಹಿಂದೆ ಏಷಿಯನ್ ಸಿನಿಮಾಗಳ ಜೊತೆಗೆ ಕೈ ಜೋಡಿಸಿ ಇಇಇ ಸಿನಿಮಾಸ್ ಹೆಸರಿನ ಮಲ್ಟಿಪ್ಲೆಕ್ಸ್ ನಿರ್ಮಿಸಿದ್ದರು. ಇದೀಗ ಪ್ರೀಮಿಯಂ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಲಾಗಿದೆ.

ಅಲ್ಲು ಅರ್ಜುನ್ ಮಾರ್ಕ್ಯೂ ಮಲ್ಟಿಪ್ಲೆಕ್ಸ್ ಅತ್ಯಾಧುನಿಕ ತಂತ್ರಜ್ಞಾನದ ಪ್ರದರ್ಶನಕ್ಕೆ ಅತ್ಯುನ್ನತ ಸಿನಿಮಾದ ಅನುಭವವನ್ನು ನೀಡಲಿದೆ. ಈಪ್ಲೆಕ್ಸ್‌ನಲ್ಲಿ ನಾಲ್ಕು ಮಲ್ಟಿಪ್ಲೆಕ್ಸ್‌ಗಳು ಇರುತ್ತವೆ, ಇವುಗಳಲ್ಲಿ ಮೂರು ಸಾಮಾನ್ಯ ಪರದೆಯಿದ್ದರೆ ಒಂದು ವಿಶೇಷ ಡಾಲ್ಬಿ ಸ್ಕ್ರೀನ್ ಆಗಿರುತ್ತದೆ. ಡಾಲ್ಬಿ ಸಿನಿಮಾಸ್ ತೆರೆಯಲ್ಲಿ ಸಾಕಷ್ಟು ವಿಶೇಷತೆಗಳಿವೆ. ಡ್ಯುಯಲ್ 4K ಲೇಸರ್ ಪ್ರೊಜೆಕ್ಷನ್, ಡಾಲ್ಬಿ ವಿಷನ್, ಡಾಲ್ಬಿ 3D ಸಾಮರ್ಥ್ಯ ಮತ್ತು ಇಮ್ಮರ್ಸಿವ್ ಡಾಲ್ಬಿ ಅಟ್ಮೋಸ್ ಸರೌಂಡ್ ಸೌಂಡ್ ಅನ್ನು ಹೊಂದಿರಲಿದೆ. ಕಪ್ಪು ಬಣ್ಣವೇ ಪ್ರಧಾನವಾಗಿರುವ ಒಳಾಂಗಣ ವಿನ್ಯಾಸವನ್ನು ಈ ಮಲ್ಟಿಪ್ಲೆಕ್ಸ್ ಹೊಂದಿದ್ದು, ಅತ್ಯುತ್ತಮ ಗುಣಮಟ್ಟದ ಪರದೆಗಳು ಮತ್ತು ಸೌಂಡ್ ಅನ್ನು ಒಳಗೊಂಡಿರಲಿ.

ಇದನ್ನೂ ಓದಿ:ಅಲ್ಲು ಅರ್ಜುನ್ ಫ್ಯಾನ್ಸ್ ರೆಡಿ ಆಗಿ; ಬರ್ತ್ತೇಗೆ ಸಿಗಲಿದೆ ದೊಡ್ಡ ಗಿಫ್ಟ್

ಹೈದರಾಬಾದ್‌ನಲ್ಲಿ ಮಹೇಶ್ ಬಾಬು ಒಡೆತನದ ಎಂಬಿ ಸಿನಿಮಾಗಳು ಮತ್ತು ವಿಜಯ್ ದೇವರಕೊಂಡ ಒಡೆತನದ ಎವಿಡಿ ಸಿನಿಮಾಗಳು ಇವೆ. ಇದೀಗ ಅಲ್ಲು ಅರ್ಜುನ್ ಸಹ ಮಲ್ಟಿಪ್ಲೆಕ್ಸ್ ಬ್ಯೂಸಿನೆಸ್ ಕೈಹಾಕಿದ್ದು ಈ ಇಬ್ಬರಿಗೂ ಕಠಿಣ ಸ್ಪರ್ಧೆಯನ್ನು ಒಡ್ಡಲಿದ್ದಾರೆ. ಅಲ್ಲು ಅರ್ಜುನ್ ಅವರ ಈ ಹೊಸ ಮಲ್ಟಿಪ್ಲೆಕ್ಸ್ ನಾಳೆ (ಮಾರ್ಚ್ 12) ಸಿಎಂ ರೇವಂತ್ ರೆಡ್ಡಿ ಉದ್ಘಾಟನೆ ಮಾಡಲಿದ್ದಾರೆ. ಅದರ ಬಳಿಕ ಕೆಲವು ಸಿನಿಮಾಗಳನ್ನು ಪರೀಕ್ಷಾರ್ಥವಾಗಿ ಪ್ರದರ್ಶಿಸಲಾಗುತ್ತದೆ. ಅದಾದ ಬಳಿಕ ಮಾರ್ಚ್ 19ಕ್ಕೆ ಯುಗಾದಿ ಹಬ್ಬದಂದು ಸಾರ್ವಜನಿಕರಿಗೆ ಲೋಕಾರ್ಪಣೆಗೊಳ್ಳಲಿದೆ. ಟಿಕೆಟ್ ಬೆಲೆ 295 ರಿಂದ 500 ರೂಪಾಯಿಗಳವರೆಗೆ ಇರಲಿದೆ.

ಅಲ್ಲು ಅರ್ಜುನ್ ಅವರು ಖುದ್ದು ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಅಲ್ಲು ಅರ್ಜುನ್ ಅವರ ಪಬ್ಬು, ಬಫೆಲೊ ವಿಂಗ್ಸ್ ಹೆಸರಿನ ಐಶಾರಾಮಿ ಸ್ಪೋರ್ಟ್ ರೆಸ್ಟೊರೆಂಟ್‌ಗಳು ಸಹ ಇವೆ. ಇವುಗಳ ಜೊತೆಗೆ ನಿರ್ಮಾಣ ಸಂಸ್ಥೆ, ಸ್ಟುಡಿಯೋ, ಒಟಿಟಿಯಲ್ಲಿಯೂ ಅವರ ಪಾಲಿದೆ. ರಿಯಲ್ ಎಸ್ಟೇಟ್ ಮೇಲೂ ಹೂಡಿಕೆ ಮಾಡಿದ್ದಾರೆ. ಇದೀಗ ಮಲ್ಟಿಪ್ಲೆಕ್ಸ್ ಸಹ ಪ್ರಾರಂಭಿಸಿದ್ದು, ಒಟ್ಟಾರೆ ತಮ್ಮ ಉದ್ಯಮವನ್ನು ವಿಸ್ತರಿಸುತ್ತಾ ಸಾಗುತ್ತಿದ್ದಾರೆ ಅಲ್ಲು ಅರ್ಜುನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *