
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ‘ಆಸೆ’ ಧಾರಾವಾಹಿಗೆ (ಧಾರಾವಾಹಿ) ದೊಡ್ಡ ವೀಕ್ಷಕರ ಬಳಗವಿದೆ. ವೀಕ್ಷಕರಿಗೆ ತುಂಬಾ ಇಷ್ಟ ಆಗಿದ್ದು, ಈ ಸೀರಿಯಲ್ ನ ನಿನಾದ್ ಹರಿತ್ಸ ಮಾಡುತ್ತಿರುವ ಸೂರ್ಯ ಪಾತ್ರ. ಅವರ ಸ್ಮೈಲ್, ಸ್ಟೈಲ್, ಡೈಲಾಗ್ ಎಲ್ಲರಿಗೂ ಇಷ್ಟವಾಗಿದೆ. ಒಂದು ಸೀರಿಯಲ್ 800 ಪ್ರಸಾರ ಎಂದರೆ ಅದು ಸಣ್ಣ ವಿಷಯ ಅಲ್ಲವೇ ಅಲ್ಲ. ನಿನಾದ್ ಅವರು ಈ ಜರ್ನಿಯನ್ನು ನೆನೆದಿದ್ದಾರೆ.
‘ಆಸೆ’ ಧಾರಾವಾಹಿಯಲ್ಲಿ ಹಲವು ಭಾವನೆಗಳನ್ನು ಬೆರೆಸಲಾಗಿದೆ. ಇಲ್ಲಿ ಮಧ್ಯಮ ವರ್ಗದವರ ಒದ್ದಾಟ ಇದೆ, ಅಪ್ಪ-ಮಗನ ಬಾಂಧವ್ಯ, ಅರೇಂಜ್ ಮ್ಯಾರೇಜ್ ನಂತರ ಎದುರಾಗಬಹುದಾದ ತೊಂದರೆ, ಅಮ್ಮ-ಮಗನ ಮುನಿಸು, ಹೀಗೆ ಹಲವು ವಿಷಯಗಳನ್ನು ಹೇಳುವ ಪ್ರಯತ್ನ ಆಗುತ್ತಿದೆ. ಸೂರ್ಯ ಅವರು ತಮ್ಮ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಧಾರಾವಾಹಿ ಬಗ್ಗೆ ಮಾತನಾಡಿದ್ದಾರೆ.
‘ಆಸೆ ರಿಮೇಕ್ ಧಾರಾವಾಹಿ. ಇದು ಮರಾಠಿ, ಗುಜರಾತಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಆದರೆ, ಕನ್ನಡದಲ್ಲಿ ನನ್ನ ಪಾತ್ರವನ್ನು ವಿಶೇಷವಾಗಿ ಡಿಸೈನ್ ಮಾಡಲಾಗಿದೆ. ಇದಕ್ಕೆ ನಮ್ಮ ನಿರ್ದೇಶಕರು ಕಾರಣ. ಮೃಗಶಿರ ಶ್ರೀಕಾಂತ್ ಅವರ ಬರವಣಿಗೆ ಧಾರಾವಾಹಿಗೆ ಮತ್ತೊಂದು ಬಲ. ಅವರಿಲ್ಲ ಎಂದರೆ, ಸೂರ್ಯ ಇಲ್ಲ. ಅವರಿಂದ ಸೂರ್ಯ ಪಾತ್ರ ಉದಯಿಸಿದೆ’ ಅವರು ಅವರು.
‘ಮಂಡ್ಯ ರಮೇಶ್ ಜೊತೆ ನಟಿಸೋ ಅವಕಾಶ ನನಗೆ ಸಿಕ್ಕಿದೆ. ಅವರು ನಮ್ಮ ಜೊತೆ ಗೆಳೆಯರಂತೆ ವರ್ತಿಸುತ್ತಾರೆ. ಜೋಕ್ ಮಾಡಿಕೊಂಡು ಇರ್ತಾರೆ. ಅವರ ಜೊತೆ ಒಳ್ಳೆಯ ಬಾಂಡ್ ಇದೆ. ಅವರು ಅಂತ ಅಲ್ಲ, ಧಾರಾವಾಹಿಯ ಎಲ್ಲಾ ಕಲಾವಿದರ ಜೊತೆ ಒಳ್ಳೆಯ ಬಾಂಡ್ ಇದೆ. ನಾವು ಖುಷಿಯಿಂದ ಕೆಲಸ ಮಾಡುತ್ತಿದ್ದೇವೆ’ ಎಂದು ಸೂರ್ಯ ಹೇಳಿದ್ದಾರೆ.
‘ನನ್ನದು ಮಧ್ಯಮ ವರ್ಗ. ನನ್ನ ಜೀವನದಲ್ಲಿ ಏನೋ ನಡೆದಿದೆ. ನಂತರ ಅದೇ ದೃಶ್ಯವನ್ನು ಧಾರಾವಾಹಿಯಲ್ಲೂ ಇದೆ. ನನಗೆ ನಿಜಕ್ಕೂ ಅಚ್ಚರಿ ಎನಿಸಿ ಬಿಡುತ್ತದೆ. ಧಾರಾವಾಹಿ ಜನರಿಗೆ ಹತ್ತಿರವಾಗಲು ಇದೇ ಕಾರಣ. ಸ್ಟೋರಿ ರೈಟರ್ ಗೆ ಎಲ್ಲ ಕೊಡುಗೆ ಕೊಡುತ್ತೇನೆ’ ಎನ್ನುತ್ತಾರೆ ಅವರು.
ಕಲಾವಿದರ ಪಾತ್ರವನ್ನು ಮನಸ್ಸಿಗೆ ತೆಗೆದುಕೊಳ್ಳದೆ, ಕೇವಲ ನಟನೆಗೆ ಸೀಮಿತ ಮಾಡಿಕೊಳ್ಳಬೇಕು ಎಂಬುದು ನಿನಾದ್ ಅವರ ಟಿಪ್ಸ್. ಅದನ್ನು ಮನಸ್ಸಿಗೆ ತೆಗೆದುಕೊಂಡರೆ ಅದು ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ, ಇದರಿಂದ ವೈಯಕ್ತಿಕ ಜೀವನಕ್ಕೆ ತೊಂದರೆಯಾಗುತ್ತದೆ ಎಂದು ಅವರು ಬಲವಾಗಿ ನಂಬಿದ್ದಾರೆ.
ಧಾರಾವಾಹಿ ಹಾಗೂ ಸಿನಿಮಾ ಶೂಟ್ ನಲ್ಲಿ ಸಾಕಷ್ಟು ವ್ಯತ್ಯಾಸ ಇರುತ್ತದೆ. ಸಿನಿಮಾಗಳಲ್ಲಿ ಒಂದು ನಿಗದಿತ ಸಮಯದಲ್ಲಿ ಶೂಟ್ ಮಾಡಲಾಗುತ್ತದೆ. ಆದರೆ, ಧಾರಾವಾಹಿಯಲ್ಲಿ ಹಾಗಾಗೋದಿಲ್ಲ. ನಿನಾದ್ಗೂ ಅದೇ ರೀತಿಯ ತೊಂದರೆ ಎದುರಾಗುತ್ತಿದೆ. ವೈಯಕ್ತಿಕವಾಗಿ ಏನಾದರೂ ಪ್ಲ್ಯಾನ್ ಮಾಡಿಕೊಂಡಾಗಲೇ ಶೂಟಿಂಗ್ ಇರುತ್ತದೆ. ಆದರೂ ಕೆಲಸವನ್ನು ಇಷ್ಟಪಟ್ಟು ಮಾಡುತ್ತಿರುವುದರಿಂದ, ಅವರು ಕಷ್ಟಪಟ್ಟಾದರೂ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ.
ಇದನ್ನೂ ಓದಿ: ‘ಕರ್ಣ ಧಾರಾವಾಹಿಯಿಂದ ಹೊರ ನಡೆದ ನಾಗಾಭರಣ; ಅಭಿಜಿತ್ ಆಗಮನ
ಇತ್ತೀಚೆಗೆ ಬಂದ ‘ಮಾರಿಗಲ್ಲು ವೆಬ್’ ಸರಣಿಯಲ್ಲಿ ನಿನಾದ್ ನಟಿಸಿದ್ದಾರೆ. ಒಂದು ಬದಲಾವಣೆ ಇರಲಿ ಎಂಬ ಕಾರಣಕ್ಕೆ ಅವರ ಭಾಗವಾಗಿದ್ದರು. ಈಗ ಅವರು ಸಿನಿಮಾ ಮಾಡುವ ಆಸಕ್ತಿ ತೋರಿಸುತ್ತಿದ್ದಾರೆ. ವೃತ್ತಿ ಜೀವನಕ್ಕೆ ಬೆಂಬವಾಗಿ ನಿಂತ ಪತ್ನಿ ರಮ್ಯಾಗೂ ಅವರಿಗೆ ಧನ್ಯವಾದ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.