ಜ್ಯೋತಿಷಿ ಆಶಿಮಾ ಅವರು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಜನ್ಮಸಂಖ್ಯೆಯ ಆಧಾರದ ಮೇಲೆ ಅವರ ದಾಂಪತ್ಯ ಜೀವನದ ಭವಿಷ್ಯ ನುಡಿದಿದ್ದಾರೆ. ಮಂಗಳ-ಬುಧರ ಈ ಜೋಡಿಯು ಆಕರ್ಷಕವಾಗಿದ್ದು ಅವರ ಜೀವನ ಹೇಗಿರಲಿದೆ ಎನ್ನುವುದು ಇಲ್ಲಿದೆ..

ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ (Rashmika Mandanna and Vijaya Devarakonda) ಅವರ ಮದುವೆಯಾಗಿ ಇದಾಗಲೇ ವಾರ ಕಳೆದಿದ್ದು, ಇನ್ನೂ ಅವರು ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸುತ್ತಲೇ ಇದ್ದಾರೆ.

ಇದಾಗಲೇ ರಶ್ಮಿಕಾ ಅವರ ಮದುವೆ ಮುಂಚೆ ಒಮ್ಮೆ ಮುರಿದು ಬಿದ್ದಿದೆ. ಅದು ರಕ್ಷಿತ್ ಶೆಟ್ಟಿ ಜೊತೆ. ಹಾಗಿದ್ದರೆ, ರಶ್ಮಿಕಾ ಮತ್ತು ವಿಜಯ್ ಅವರ ಸಾಂಸಾರಿಕ ಜೀವನ ಹೇಗೆ ಇರುತ್ತದೆ ಎನ್ನುವ ಬಗ್ಗೆ ಅವರ ಕುಂಡಲಿ ನೋಡಿದ ಜ್ಯೋತಿಷಿ ಆಶಿಮಾ ಅವರು ತಿಳಿಸಿದ್ದಾರೆ.

ವಿಜಯ ದೇವರಕೊಂಡ ಅವರು ಹುಟ್ಟಿದ್ದು ಮೇ 9 ರಂದು. 9 ಎನ್ನುವುದು ಮಂಗಳನಿಗೆ ಸಂಬಂಧಿಸಿದ್ದು, ಮಂಗಳನ ಶಕ್ತಿ ಇವರಲ್ಲಿ ಇದೆ. ಅವರು ತಮ್ಮ ಸಂಗಾತಿಗೆ ಸದಾ ನಿಷ್ಠಾವಂತರಾಗಿರುತ್ತಾರೆ. ಒಂದು ಸಲ ಹೃದಯ ಕೊಟ್ಟರೆ ಲೈಫ್ಟೈಮ್ ಹಾಗೆಯೇ ಇರುತ್ತಾರೆ. ಆದರೆ 9ನೇ ತಾರೀಖಿನಂದು ಹುಟ್ಟಿದವರು ಓವರ್ ಪಾಸಿಸಿವ್ ಆಗಿರುತ್ತಾರೆ.

ಅದೇ ರಶ್ಮಿಕಾ ಮಂದಣ್ಣ ಅವರು ಹುಟ್ಟಿದ್ದು 5ನೇ ಏಪ್ರಿಲ್. ಇದು ಬುಧ ಗ್ರಹದ ಸಂಕೇತ, ಬೆಂಕಿಯಾಗಿರುತ್ತಾರೆ. ಇವರು ಬೋಲ್ಡ್ ಆಗಿದ್ದು, ಸದಾ ಸ್ವತಂತ್ರವನ್ನು ಬಯಸುವವರು ಆಗಿರುತ್ತಾರೆ. ಯಾರೇ ಆದರೂ ತಮ್ಮನ್ನು ಕಂಟ್ರೋಲ್ ಮಾಡುವುದು ಅವರಿಗೆ ಇಷ್ಟ ಆಗುವುದಿಲ್ಲ.

ಆದ್ದರಿಂದ ರಶ್ಮಿಕಾ ಮತ್ತು ವಿಜಯ್ ಅವರ ಕಾಂಬಿನೇಷನ್ ಮಂಗಳ ಮತ್ತು ಬುಧ ಗ್ರಹವಾಗಿದೆ. ಇಂಥ ಕಾಂಬಿನೇಷನ್ ಇರುವುದು ಅತ್ಯಾಕರ್ಷಣೀಯ ಎನ್ನಲಾಗುತ್ತದೆ. ತುಂಬಾ ಒಳ್ಳೆಯದು ಆಗಿದ್ದರೂ ಇಬ್ಬರೂ ಪ್ರಾಬಲ್ಯ ಹೊಂದಬೇಕು ಎಂದು ಬಯಸುವ ವ್ಯಕ್ತಿಗಳಾಗಿರುತ್ತಾರೆ. ಇದೇ ಕಾರಣಕ್ಕೆ ಇಗೋ ಕ್ಲ್ಯಾಷ್ ಈ ಕಾಂಬಿನೇಷನ್ನಲ್ಲಿ ಆಗುವುದು ಸಹಜ.

ಒಂದು ವೇಳೆ ರಶ್ಮಿಕಾಗೆ ತುಂಬಾ ಸ್ವತಂತ್ರವನ್ನು ವಿಜಯ್ ಕೊಟ್ಟರೆ ಮತ್ತು ವಿಜಯ್ ಅವರಿಗೆ ರಶ್ಮಿಕಾ ಗೌರವ ಕೊಡುತ್ತಿದ್ದರೆ, ಇವರಿಗಿಂತ ಉತ್ತಮ ಜೋಡಿ ಇನ್ನೊಂದು ಇರಲು ಸಾಧ್ಯವಿಲ್ಲ ಎನ್ನುವ ರೀತಿಯಲ್ಲಿ ವೈವಾಹಿಕ ಜೀವನ ನಡೆಯುತ್ತದೆ. ಅದೇ ಒಂದು ವೇಳೆ ಮಿಸ್ಅಂಡರ್ಸ್ಟ್ಯಾಂಡ್ ಆಗಿಬಿಟ್ಟರೆ ಕೋಲ್ಡ್ವಾರ್ ಆಗುವುದು ಗ್ಯಾರೆಂಟಿ ಎಂದಿದ್ದಾರೆ ಆಶಿಮಾ.

Source link
9-5ರ ಮಿಲನ: ರಶ್ಮಿಕಾ- ವಿಜಯ್ ವೈವಾಹಿಕ ಜೀವನ ಹೇಗಿರುತ್ತೆ? ಇಂಟರೆಸ್ಟಿಂಗ್ ವಿಷ್ಯ ತಿಳಿಸಿದ ಜ್ಯೋತಿಷಿ