
ಪತ್ನಿ ಆರತಿ ಜೊತೆಗಿನ ವಿಚ್ಛೇದನದ ನಂತರ ನಟ ರವಿ ಮೋಹನ್ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ‘ಸಮಾಜದಲ್ಲಿ ಗಂಡಸರೇ ನಿಜವಾದ ಸಂತ್ರಸ್ತರು, ನನ್ನ ಮನಸ್ಸಿನ ಶುದ್ಧತೆ ಒಂದು ದಿನ ಎಲ್ಲರಿಗೂ ಅರ್ಥವಾಗುತ್ತೆ’ ಎಂದು ಅವರು ಹೇಳಿದ್ದಾರೆ.
ಪತ್ನಿ ಆರತಿ ಜೊತೆಗಿನ ವಿಚ್ಛೇದನದ ನಂತರ ನಟ ರವಿ ಮೋಹನ್ ಮತ್ತೆ ತಮ್ಮ ನೋವನ್ನು ಹೊರಹಾಕಿದ್ದಾರೆ. ಸಮಾಜದಲ್ಲಿ ಗಂಡಸರೇ ಅತಿದೊಡ್ಡ ಸಂತ್ರಸ್ತರು, ತಾನು ಪ್ರೀತಿಸಿದವರಿಗಾಗಿ ಏನು ಮಾಡಿದ್ದೇನೆ ಮತ್ತು ತನ್ನ ಮನಸ್ಸಿನ ಶುದ್ಧತೆ ಏನು ಎಂಬುದು ಒಂದು ದಿನ ಎಲ್ಲರಿಗೂ ತಿಳಿಯುತ್ತದೆ ಎಂದು ರವಿ ಮೋಹನ್ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ರವಿ ಮೋಹನ್ ಈ ಮಾತುಗಳನ್ನು ಹೇಳಿದ್ದಾರೆ. “ನಾನು ಶಾಂತವಾಗಿ ನನ್ನ ಜೀವನವನ್ನು ಮತ್ತೆ ಕಟ್ಟಿಕೊಳ್ಳುತ್ತಿದ್ದೇನೆ. ಈ ಮಾತನ್ನು ಮತ್ತೊಮ್ಮೆ ಹೇಳಬೇಕೆನಿಸಿತು. ನಿಮಗೆ ಏನು ಹೇಳಬೇಕೋ ಅದನ್ನೇ ಮತ್ತೆ ಮತ್ತೆ ಹೇಳಿ, ಯಾಕಂದ್ರೆ ಮಹಿಳೆಯರು ಹೇಳುವುದು ಮಾತ್ರ ಸರಿ ಎಂದು ನೀವು ಭಾವಿಸಿದ್ದೀರಿ.
ಇಲ್ಲಿ ಗಂಡಸರೇ ಅತಿದೊಡ್ಡ ಸಂತ್ರಸ್ತರು, ನಮ್ಮ ನ್ಯಾಯಾಂಗ ವ್ಯವಸ್ಥೆಗೂ ಇದು ಅರಿವಿದೆ. ನಾನು ಪ್ರೀತಿಸಿದವರಿಗಾಗಿ ಏನು ಮಾಡಿದ್ದೇನೆ, ನನ್ನ ಮನಸ್ಸಿನ ಶುದ್ಧತೆ ಏನು ಎಂಬುದು ಒಂದು ದಿನ ನಿಮ್ಮೆಲ್ಲರಿಗೂ ಅರ್ಥವಾಗುತ್ತದೆ. ದಯವಿಟ್ಟು ಒಬ್ಬ ಮನುಷ್ಯನನ್ನು ಬದುಕಲು ಬಿಡಿ. ನಿಮ್ಮ ಕೆಟ್ಟ ಆಲೋಚನೆಗಳನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ. ನಾನು ನನ್ನ ದಾರಿಯಲ್ಲಿ ಹೋಗುತ್ತಿದ್ದೇನೆ,” ಎಂದು ರವಿ ಮೋಹನ್ ಹೇಳಿದ್ದಾರೆ.
ಖಳನಾಯಕನ ಪಾತ್ರಕ್ಕೆ ಪ್ರಶಂಸೆ
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಸುಧಾ ಕೊಂಗರ ನಿರ್ದೇಶನದ, ಶಿವಕಾರ್ತಿಕೇಯನ್ ನಟನೆಯ ‘ಪರಾಶಕ್ತಿ’ ಚಿತ್ರದಲ್ಲಿ ರವಿ ಮೋಹನ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವರು ಮಾಡಿದ ಖಳನಾಯಕನ ಪಾತ್ರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಸದ್ಯ ಯೋಗಿ ಬಾಬು ನಾಯಕರಾಗಿರುವ ‘ಆನ್ ಆರ್ಡಿನರಿ ಮ್ಯಾನ್’ ಚಿತ್ರದ ಮೂಲಕ ರವಿ ಮೋಹನ್ ನಿರ್ದೇಶಕರಾಗಿಯೂ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಪ್ರಗತಿಯಲ್ಲಿದೆ.