ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 12ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 12ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3 ರ ಮಾರ್ಚ್ 12 ರ ದಿನಭವಿಷ್ಯ

ಸಾಯಿಬಾಬಾ ಅಥವಾ ರಾಘವೇಂದ್ರ ಸ್ವಾಮಿಗಳ ದರ್ಶನ ಮತ್ತು ಮನೆಯಲ್ಲಿ ಹಿರಿಯರ ಕಾಲಿಗೆ ನಮಸ್ಕರಿಸಿ ದಿನದ ಕೆಲಸವನ್ನು ಪ್ರಾರಂಭಿಸುವುದು ಸಕಲ ಕಾರ್ಯಸಿದ್ಧಿಗೆ ಕಾರಣವಾಗುತ್ತದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಮನೆಗೆ ಇಲಿಕ್ ಅಥವಾ ವಸ್ತುಗಳನ್ನು ತರುವಂಥ ಯೋಗ ಇದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವವರು, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥವರು, ಕಂಪನಿಗಳ ಸಿಐಒ, ಸಿಒಒ ಇಂಥ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಹಳ ಒಳ್ಳೆ ದಿನ. ನಿಮ್ಮಲ್ಲಿ ಯಾರಾದರೂ ಸ್ಟಾರ್ಟ್ ಅಪ್ ಮಾಡಲು ಸಿದ್ಧತೆ ನಡೆಸುತ್ತಿದ್ದೀರಿ ಅಂತಾ ಬೇಕಾದ ಹಣಕಾಸಿನ ಅನುಕೂಲಗಳು ಒದಗಿ ಬರಲಿವೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಕಾನೂನಿಗೆ ಸಂಬಂಧಿಸಿದ ವಿಚಾರಗಳಲ್ಲಿ ಸಣ್ಣ- ಪುಟ್ಟ ಅಡೆತಡೆಗಳು ಕಾಡುತ್ತಿದ್ದವು. ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ಅವುಗಳ ವಿಸ್ತರಣೆಗೆ ಬಹಳ ಉತ್ತಮವಾದ ದಿನ ಇದಾಗಿದೆ. ಇನ್ನು ಸರಿಯಾದ ಸಂಪನ್ಮೂಲ ವ್ಯಕ್ತಿಗಳು, ಕೆಲಸಗಾರರನ್ನು ಹುಡುಕುತ್ತಿದ್ದಾರೆ ಅಂತಾದಲ್ಲಿ ಅಂಥವರು ಸಹ ದೊರೆಯಲಿದ್ದಾರೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಸುಮ್ಮನೆ ಇದ್ದಿದ್ದರೆ ಆಗುತ್ತಿದೆ ಎಂದೆನಿಸುವಂಥ ಹಲವು ಘಟನೆಗಳು ಈ ದಿನ ನಡೆಯಲಿವೆ. ಅಂತರಂಗದ ವಿಚಾರವನ್ನು ಯಾರ ಬಳಿ ಹೇಳಿದರೂ ಅವರು ಅದನ್ನು ಹಲವರ ಬಳಿ ಹೇಳಿಕೊಂಡು ಬಂದಿದ್ದಾರೆ, ನಿಮಗೆ ಮುಜುಗರದ ಸನ್ನಿವೇಶವನ್ನು ತಂದೊಡ್ಡಲಿದ್ದಾರೆ. ಸಂಗಾತಿಯು ನಿಮ್ಮ ಧೋರಣೆ ಬಗ್ಗೆ ಬೇಸರ ವ್ಯಕ್ತಪಡಿಸಬಹುದು. ನೀವು ಬಳಸುವ ಭಾಷೆ, ಅದನ್ನು ಆಡಿದ ರೀತಿ ಹಾಗೂ ಇತರ ವಿಚಾರಗಳನ್ನು ಮುಂದಿಟ್ಟುಕೊಂಡು, ಹೀಯಾಳಿಸಬಹುದು.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *