
ಮೇಷ ರಾಶಿ:
ಇಷ್ಟಪಟ್ಟವರನ್ನು ದೂರ ಮಾಡಿಕೊಳ್ಳುವಿರಿ. ಅನ್ಯರ ವಿಚಾರದಲ್ಲಿ ನಿಮಗೆ ಆಸಕ್ತಿ ಕಡಿಮೆ ಆಗುವುದು. ಸರ್ಕಾರದ ಕೆಲಸಕ್ಕಾಗಿ ಅಧಿಕ ಓಡಾಟವಾಗುವುದು. ಆರ್ಥಿಕ ನೆರವನ್ನು ಯಾರಿಂದಲಾದರೂ ನೀವು ಬಯಸುವಿರಿ. ಸಮಾಧಾನ ಚಿತ್ತದಿಂದ ಇರಬೇಕು ಎಂದೆನಿಸಿದರೂ ಅದನ್ನು ಕಾರ್ಯರೂಪಕ್ಕೆ ತರಲಾಗದು. ಅನಿರೀಕ್ಷಿತ ಘಟನೆಯಿಂದ ಸ್ತಬ್ಧವಾಗುವಿರಿ. ವ್ಯವಹಾರದ ವಿಷಯದಲ್ಲಿ ನಿಮಗೆ ಯಾವುದೇ ಔದಾರ್ಯ ಬೇಡ. ಸಹೋದರನ ಪ್ರೀತಿಯಿಂದ ಸಂತೋಷಪಡುವಿರಿ. ಬೇಕಾದವರ ಪ್ರೀತಿ ಸಿಗದೇ ಬೇಸರ.
ವೃಷಭ ರಾಶಿ:
ನಿಮ್ಮ ಪುಟ್ಟ ಪ್ರಪಂಚದಿಂದ ಹೊರಬರಲು ತಯಾರಾಗುವಿರಿ. ಸ್ವಾರ್ಥಕ್ಕಾಗಿ ಯಾರನ್ನೂ ಕಳೆದುಕೊಂಡಿರಿ. ವೈದ್ಯಕೀಯ ವೃತ್ತಿಯ ಬಗ್ಗೆ ಆಸಕ್ತಿ ಹೆಚ್ಚುವುದು. ವೃತ್ತಿಪರ ವ್ಯವಹಾರಗಳು ಲಾಭದಾಯಕ. ನಿಮ್ಮ ಗೌಪ್ಯ ವಿಚಾರವನ್ನು ಮುಚ್ಚಿಡಲು ಪ್ರಯತ್ನಿಸುವಿರಿ. ಹಳೆಯ ಹೂಡಿಕೆಯಿಂದ ಲಾಭವು ಸಿಗಲಿದೆ. ಯಾವುದೂ ಕರಗತ ಆಗದೇ ಪ್ರದರ್ಶನಕ್ಕೆ ಒಪ್ಪಿಗೆ ಕೊಡುವುದು ಬೇಡ. ಶುದ್ಧತೆಯ ಬಗ್ಗೆ ಕಾಳಜಿ ಅಧಿಕವಾಗಿರುವುದು.
ಮಿಥುನ ರಾಶಿ:
ಉದ್ಯೋಗದಲ್ಲಿ ಭಡ್ತಿಗಾಗಿ ಕಾಯುತ್ತಿದ್ದರೆ ಇಂದು ಸಿಗಬಹುದು. ಸ್ನೇಹಿತರಿಂದ ನಿಮಗೆ ಬಹುಮಾನ ಸಿಗಬಹುದು. ದೂರದವರಿಗೆ ಒಬ್ಬರೇ ವಾಹನ ಚಲಾಯಿಸುವಿರಿ. ಆಭರಣಗಳನ್ನು ಖರೀದಿಸಲು ಹಣವನ್ನು ಖರ್ಚು ಮಾಡುವ ಅವಕಾಶ ಸಿಗುತ್ತದೆ. ಕಲಾವಿದರು ಅವಕಾಶದ ನಿರೀಕ್ಷೆಯಲ್ಲಿ ಇದ್ದಾರೆ. ಹಳೆಯ ಪ್ರೇಮಿಯ ಭೇಟಿಯಾಗಿ ಮುಜುಗರಕ್ಕೆ ಸಿಕ್ಕಿಕೊಳ್ಳಬಹುದು.
ಕರ್ಕಾಟಕ ರಾಶಿ:
ಯಾರ ಬಳಿಯೂ ಸಹಾಯ ಹಸ್ತವನ್ನು ಚಾಚದೇ ಸ್ವಂತ ಬಲದ ಮೇಲೆ ಬರುವ ಆಸೆ ಇರಲಿದೆ. ಪರಿಚಿತರ ಜೊತೆ ಸಾಮಾಜಿಕ ಚಟುವಟಿಕೆಯಲ್ಲಿ ಭಾಗಿ. ನಿಮ್ಮ ನಿಷ್ಕಾಳಜಿಯಿಂದ ಅನಾಯಾಸವಾಗಿ ಬರುವ ಆದಾಯವು ಸಿಗದೇ ಹೋಗುವುದು. ವೃತ್ತಿಯಲ್ಲಿ ಬಂದ ಮಾತಿನಿಂದ ನೀವು ಉದ್ವೇಗಗೊಳ್ಳುವ ಅವಶ್ಯಕತೆ ಇರುವುದಿಲ್ಲ. ಕೆಲವರ ವಿಚಾರದಲ್ಲಿ ನಿಮ್ಮ ದೃಷ್ಟಿಯನ್ನು ಬದಲಿಸಿಕೊಳ್ಳುವುದೇ ಯೋಗ್ಯವಾದುದು. ನಿಮಗೆ ಮೇಲಧಿಕಾರಿಗಳ ಬಗ್ಗೆ ಸದ್ಭಾವವು ಇರದು.
ಸಿಂಹ ರಾಶಿ:
ಅಲ್ಪ ಕಾಲ ಮನೆಯಿಂದ ದೂರ ಉಳಿಯುವಿರಿ. ಸಂಗಾತಿಯ ಸಣ್ಣ ಮಾತು ನಿಮಗೆ ದೋಷವಾಗಿ ಕಾಣಿಸುತ್ತದೆ. ಸಣ್ಣ ಆರೋಗ್ಯದ ತೊಂದರೆಯೂ ನಿಮ್ಮ ಮನಸ್ಸಿಗೆ ಕಿರಿಕಿರಿಯನ್ನು ಉಂಟುಮಾಡುತ್ತದೆ. ಕಾರ್ಯದಲ್ಲಿ ವೇಗವು ಕುಂಠಿತವಾಗುವುದು. ನೀವು ನೋಡಿದ್ದೇ ಸತ್ಯ ಎಂದು ತಿಳಿದುಕೊಳ್ಳುವುದು ಬೇಡ. ಉತ್ತಮ ವಸ್ತುವಿನ ದಾನದಿಂದ ಯಶಸ್ಸು ಪ್ರಾಪ್ತವಾಗುವುದು. ಇಂದು ಯಾರಿಗೂ ನಿಮ್ಮ ಅವಶ್ಯಕತೆ ಇಲ್ಲದೇ ಹೋಗಬಹುದು.
ಕನ್ಯಾ ರಾಶಿ:
ಮನಸ್ಸಿಗೆ ಬೇಕಾದ ನೆಮ್ಮದಿಯಿಂದ ಹುಡುಕಾಟದಲ್ಲಿ ಇರುವಿರಿ. ಧಾರ್ಮಿಕ ಕ್ಷೇತ್ರದ ಭೇಟಿಕೊಡುವಿರಿ. ಅಕಾಲದಲ್ಲಿ ಸೇವಿಸಿದ ಆಹಾರದಿಂದ ನಿಮಗೆ ಆರೋಗ್ಯವು ಹಾಳಾಗುತ್ತದೆ. ನಿಮ್ಮ ಮಾತುಗಳು ಪಾಲನೆಯಾಗದೇ ಇರಬಹುದು. ಮನೆಯಲ್ಲಿ ನೌಕರರ ಕಾರಣಕ್ಕೆ ಸಿಟ್ಟಾಗುವಿರಿ. ವೈವಾಹಿಕ ಸಂಬಂಧವನ್ನು ಸರಿಯಾಗಿ ಇಟ್ಟುಕೊಳ್ಳಿ. ಉದ್ಯಮದಲ್ಲಿ ನಿರಂತರ ಸಂಪರ್ಕವಿರಲಿ. ಹಣಕಾಸಿನ ಉಳಿತಾಯದ ಬಗ್ಗೆ ಅಧಿಕ ಗಮನ ಕೊಡುವಿರಿ.
ತುಲಾ ರಾಶಿ:
ಆರ್ಥಿಕತೆಯ ಬಲಕ್ಕಾಗಿ ಗೊತ್ತಿಲ್ಲದ ಕಾರ್ಯವನ್ನೂ ಮಾಡುವಿರಿ. ವಿದೇಶದ ಮಿತ್ರರ ಸಹಾಯದಿಂದ ನೀವು ಉದ್ಯಮವು ವಿಸ್ತಾರವಾಗಿದೆ. ಆಗುತ್ತದೆ ಎಂದು ಏನನ್ನಾದರೂ ಮಾಡುವುದು ಉಚಿತವಾಗದು. ಅಧಿಕ ಓಡಾಟದಿಂದ ನೀವು ಆಯಾಸಗೊಳ್ಳುವಿರಿ. ಬೇಕಾದಷ್ಟು ಅವಕಾಶಗಳನ್ನು ಬಿಡುವುದು ನಿಮಗೆ ಅಭ್ಯಾಸವಾಗಬಹುದು. ಪ್ರೇಮಿಯ ಜೊತೆ ಹರಟೆ ಹೊಡೆಯುತ್ತ ದಿನವನ್ನು ಕಳೆಯುವಿರಿ. ಅತಿಥಿಗಳನ್ನು ಮನೆಗೆ ಆಹ್ವಾನಿಸಿ.
ವೃಶ್ಚಿಕ ರಾಶಿ:
ಬಂದ ಹಣವನ್ನು ಸಂಗ್ರಹಿಸಲು ಪ್ರಯತ್ನಿಸಿ. ಇಲ್ಲವಾದರೆ ಸಂಪತ್ತನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಅಸಾಧ್ಯವನ್ನು ಸಾಧಿಸುವ ಹಠವು ಬೇಡವಾದೀತು. ಭೂಮಿಯಿಂದ ಆದಾಯ ಸಿಗುವಂತೆ ಕಾರ್ಯ. ಒಡಹುಟ್ಟಿದವರ ಜೊತೆ ಅನಗತ್ಯ ಮಾತುಗಳು ಬರಬಹುದು. ಉದ್ಯೋಗದಲ್ಲಿ ಚಂಚಲತೆ ಇರುವುದು. ಅನಪೇಕ್ಷಿಯ ವಿಚಾರವನ್ನು ಪ್ರಸ್ತಾಪಿಸಿಕೊಂಡು ಕಾಲಹರಣ ಮಾಡುವಿರಿ. ಆಪ್ತರಿಂದ ನಿಮಗಾಗದವರ ಬಗ್ಗೆ ಮಾಹಿತಿ ಪಡೆಯಿರಿ.
ಧನು ರಾಶಿ:
ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಪ್ರೇಮವು ನಿಮಗೆ ಬೇಕಾದಂತೆ ತಿರುವು ಪಡೆಯಬಹುದು. ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುವ ಸಂಭವವಿದೆ. ಸಿಟ್ಟನ್ನು ವೃತ್ತಿಯಲ್ಲಿ ತೋರಿಸುವುದು ಬೇಡ. ನೀವು ಆಯ್ಕೆ ಆಗಿದ್ದು ಯಾವುದಕ್ಕೋ ಕೆಲಸವು ಮತ್ಯಾವುದೋ ಆಗಲಿದೆ. ಅಪಾಯಕ್ಕೆ ಸಿಕ್ಕಿಕೊಳ್ಳುವ ಸಂಭವವಿತ್ತು. ಧನವ್ಯಯವನ್ನು ನಿಮ್ಮ ಜಾಣ್ಮೆಯಿಂದ ತಪ್ಪಿಸಿಕೊಳ್ಳಿರಿ. ಸ್ತ್ರೀಯರಿಂದ ಕೆಲವು ಸಮಸ್ಯೆಯು ಬರಲಿದೆ. ಆಗಬೇಕೆಂದುಕೊಂಡ ಕಾರ್ಯವನ್ನು ಪೂರ್ಣ ಮಾಡಲಾಗದು.
ಮಕರ ರಾಶಿ:
ಇಂದು ನಿಮಗೆ ಪ್ರಯಾಣದ ಆಯಾಸವು ಇರಲಿದೆ. ಶತ್ರುಗಳನ್ನು ಕ್ಷಮಿಸಿ, ಅವರ ಮೇಲೆ ನಿಮ್ಮ ದೃಷ್ಟಿಯು ಬೇಕಾಗುವುದು. ಉದ್ಯೋಗವನ್ನು ಬಿಟ್ಟು ಬೇರೆಯದನ್ನು ಯೋಚಿಸಲಾಗದು. ಪಾಲುದಾರಿಕೆಯಲ್ಲಿ ನಿಮ್ಮದೇ ಅಧಿಕವಾಗಿರುವುದು. ಪ್ರೀತಿಯಲ್ಲಿ ನಿಮಗೆ ಮೋಸವಾಗುವುದು. ಉದ್ಯಮಕ್ಕೆ ಬೇಕಾದ ವಿವರಗಳನ್ನು ಅನುಭವಿಗಳಿಂದ ಪಡೆಯಿರಿ. ಸ್ನೇಹಿತನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವಿರಿ. ಹೊಸ ಸಂಶೋಧನೆಯ ಬಗ್ಗೆ ಆಸಕ್ತಿ ಇರುವುದು. ,
ಕುಂಭ ರಾಶಿ:
ನಿಮ್ಮ ಸಮ್ಮುಖದಲ್ಲಿ ಕುಟುಂಬದ ಸಮಸ್ಯೆಗಳು ಬಗೆಹರಿಯಬಹುದು. ಅನಿರೀಕ್ಷಿತವಾಗಿ ದೊರೆತವರು ನಿಮ್ಮ ಉದ್ಯಮದ ಭಾಗವಾಗಿದ್ದಾರೆ. ಆಸ್ತಿಯ ವಿಚಾರ ಬಂದಾಗ ಮೌನ ತಾಳುವಿರಿ. ಬಹಳ ದಿನಗಳ ಅನಂತರ ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರಿ. ಆಪತ್ತಿಗೆ ಪ್ರತಿಯಾಗಿ ಆಪತ್ತು ಕೊಡುವ ಸ್ಥಿತಿಯನ್ನು ತಂದುಕೊಳ್ಳುವಿರಿ. ಕಳೆದುಕೊಂಡ ಹಣವನ್ನು ಪಡೆಯಲು ಛಲ ಬರಬಹುದು. ನಿಮ್ಮ ಯೋಜನೆಗೆ ಬೆನ್ನೆಲುಬಾಗಿ ನಿಲ್ಲುವವರು ಬೇಕಾಗಿದ್ದಾರೆ.
ಮೀನ ರಾಶಿ:
ಬೋಧನ ಕಲೆಯು ಸಿದ್ಧಿಯಾಗುವುದು. ಮಕ್ಕಳ ಜೊತೆ ಸಾಮರಸ್ಯದ ಮಾತನಾಡಿದರು. ಸಾಲದ ಮರುಪಾವತಿಗೆ ಸೂಕ್ತ ಕ್ರಮದ ಅಗತ್ಯವಿರಲಿದೆ. ಯಾವ ಬದಲಾವಣೆಯನ್ನೂ ಸ್ವೀಕರಿಸುವ ಮನೋಭಾವ ಬರಬಹುದು. ಆಲಸ್ಯದಿಂದ ಕಛೇರಿಯ ಕೆಲಸಗಳು ವಿಳಂಬವಾಗುವುದು. ಸುಮ್ಮನೇ ಆಪ್ತರ ಮೇಲೆ ಸಂಶಯವನ್ನು ಇಟ್ಟುಕೊಳ್ಳುವುದು ಬೇಡ. ಹೂಡಿಕೆಯ ವಿಚಾರದಲ್ಲಿ ಇಂದು ಸಕಾರಾತ್ಮಕ ಆಲೋಚನೆಯು ಇರದು.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಕಾರ್ಯಕ್ರಮ : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ನವಮೀ, ನಿತ್ಯನಕ್ಷತ್ರ ಸೂರ್ಯ : ಮೂಲ ಯೋಗ : ಸಿದ್ಧಿ, ಕರಣ : ಗರಜ, ಸೂರ್ಯ –ೋದಯ – 3 pm, 06 – 3 pm ಶುಭಾಶುಭ ಕಾಲ : ರಾಹು ಕಾಲ 14:04 – 15:34, ಯಮಗಂಡ ಕಾಲ 09:35 – 08:05, ಗುಳಿಕ ಕಾಲ 09:35 – 11:04
-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)