ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 12ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 12ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9 ರ ಮಾರ್ಚ್ 12 ರ ದಿನಭವಿಷ್ಯ

ಈ ದಿನ ಸಂಜೆ ಹೊತ್ತಿಗೆ ಅಶ್ವತ್ಥ ಮರದ ಕೆಳಗೆ ಕಡಲೆ ಹಿಟ್ಟಿನಿಂದ ಮಾಡಿದ ದೀಪ ಹಚ್ಚುವುದು ವಿಶೇಷ ಫಲ. ನಿಮ್ಮನ್ನು ಕಾಡುತ್ತಿರುವ ಗೊಂದಲಗಳು ಹಾಗೂ ಅಡೆತಡೆಗಳು ನಿವಾರಣೆ ಆಗಲಿವೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಹಣಕಾಸು ವಿಚಾರದಲ್ಲಿ ಕಾಡುತ್ತಿರುವ ಗೊಂದಲಗಳು ಬಗೆಹರಿಯುವ ಎಲ್ಲ ಸಾಧ್ಯತೆಗಳಿವೆ. ನಿಮ್ಮೊಬ್ಬರಿಂದ ಏನಾದೀತು ಎಂಬಂತೆ ಆಡಿದ ಮಾತುಗಳಿಗೆ ಉತ್ತರ ಎಂಬಂತೆ ಕೆಲವು ಅಸಾಧ್ಯವಾದ ಕೆಲಸ- ಕಾರ್ಯಗಳನ್ನು ಮಾಡಿ, ಮುಗಿಸಲು ಸಫಲರಾಗುತ್ತೀರಿ. ವಿದೇಶಗಳಿಗೆ ಉದ್ಯೋಗ ನಿಮಿತ್ತ ತೆರಳಬೇಕು ಎಂದಿರುವವರಿಗೆ ಈ ತನಕ ಏನಾದರೂ ಅಡೆತಡೆಗಳು ಕಾಡುತ್ತಿದ್ದಲ್ಲಿ ಅವರನ್ನು ನಿವಾರಿಸಿಕೊಳ್ಳುವುದಕ್ಕೆ ಅವಕಾಶಗಳಿವೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಮನೆ ಅಥವಾ ಸೈಟು ಖರೀದಿ ಮಾಡಬೇಕು ಎಂದು ಹುಡುಕುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಅವಕಾಶಗಳು ಹೆಚ್ಚಿವೆ. ತರಕಾರಿ, ಹೂವು- ಹಣ್ಣಿನ ವ್ಯವಹಾರ, ಬ್ಯಾಂಗಲ್ ಸ್ಟೋರ್ಸ್ ನಡೆಸುತ್ತಿರುವವರಿಗೆ ಆದಾಯದಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡುಬರುತ್ತದೆ. ಇನ್ನು ದೀರ್ಘಾವಧಿಯ ಆರ್ಡರ್ ಗಳು ಸಹ ದೊರೆಯುವ ಅವಕಾಶಗಳು ಹೆಚ್ಚಿವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಕುಟುಂಬದ ವ್ಯವಹಾರದಲ್ಲಿ ತೊಡಗಿರುವವರಿಗೆ ಸ್ವತಂತ್ರವಾಗಿ ವ್ಯಾಪಾರ- ಆರಂಭಿಸುವ ಬಗ್ಗೆ ಆಲೋಚನೆ ಮೂಡಬಹುದು. ಖಾಸಗಿ ಕಂಪನಿಗಳಲ್ಲಿ ಉದ್ಯೋಗದಲ್ಲಿರುವವರಿಗೆ ನಿಮಗೆ ಇಷ್ಟವಿಲ್ಲದ ವರ್ಗಾವಣೆ ಮಾಡುವ ಸಾಧ್ಯತೆಗಳಿವೆ. ಅಥವಾ ನಿಮಗೆ ಯಾರ ಜೊತೆಗೆ ವೈಮನಸ್ಯ ಇರುತ್ತದೋ ಅಂಥ ವ್ಯಕ್ತಿಗಳ ಕೈಕೆಳಗೆ ಅಥವಾ ಜತೆಯಲ್ಲಿ ಕೆಲಸ ಮಾಡಲೇಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *