ಸ್ಪೀಕರ್ ಬಿರ್ಲಾ ಪದಚ್ಯುತಿ ನಿರ್ಣಯಕ್ಕೆ ಸೋಲು- ವಿಪಕ್ಷಗಳ ಗದ್ದಲದ ನಡುವೆ ಧ್ವನಿಮತದಿಂದ ಸೋಲು | Move To Remove Om Birla As Speaker Defeated

ಸ್ಪೀಕರ್ ಬಿರ್ಲಾ ಪದಚ್ಯುತಿ ನಿರ್ಣಯಕ್ಕೆ ಸೋಲು- ವಿಪಕ್ಷಗಳ ಗದ್ದಲದ ನಡುವೆ ಧ್ವನಿಮತದಿಂದ ಸೋಲು | Move To Remove Om Birla As Speaker Defeated



ಸ್ಪೀಕರ್ ಬಿರ್ಲಾ ಪದಚ್ಯುತಿ ನಿರ್ಣಯಕ್ಕೆ ಸೋಲು- ವಿಪಕ್ಷಗಳ ಗದ್ದಲದ ನಡುವೆ ಧ್ವನಿಮತದಿಂದ ಸೋಲು | Move To Remove Om Birla As Speaker Defeated

ಲೋಕಸಭಾ ಸ್ಪೀಕರ್ ಹುದ್ದೆಯಿಂದ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸುವ ವಿಪಕ್ಷಗಳ ನಿರ್ಣಯಕ್ಕೆ ಬುಧವಾರ ಲೋಕಸಭೆಯಲ್ಲಿ ಧ್ವನಿ ಮತದಿಂದ ಸೋಲಾಗಿದೆ. ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರನ್ನು ಹಿಗ್ಗಾಮುಗ್ಗಾ ಟೀಕಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ನವದೆಹಲಿ : ಲೋಕಸಭಾ ಸ್ಪೀಕರ್ ಹುದ್ದೆಯಿಂದ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸುವ ವಿಪಕ್ಷಗಳ ನಿರ್ಣಯಕ್ಕೆ ಬುಧವಾರ ಲೋಕಸಭೆಯಲ್ಲಿ ಧ್ವನಿ ಮತದಿಂದ ಸೋಲಾಗಿದೆ.

ಹಿಗ್ಗಾಮುಗ್ಗಾ ಟೀಕಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರನ್ನು ಹಿಗ್ಗಾಮುಗ್ಗಾ ಟೀಕಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸದನದ ಕ್ಷಮೆಯಾಚಿಸಬೇಕೆಂದು ಪ್ರತಿಪಕ್ಷಗಳ ಪ್ರತಿಭಟನೆ ಮತ್ತು ಘೋಷಣೆಗಳ ನಡುವೆಯೇ, ಸಭಾಧ್ಯಕ್ಷ ಪೀಠದಲ್ಲಿದ್ದ ಜಗದಾಂಬಿಕಾ ಪಾಲ್, ಅವಿಶ್ವಾಸ ನಿರ್ಣಯವನ್ನು ಸೋಲಿಸಲಾಗಿದೆ ಎಂದು ಘೋಷಿಸಿದರು.

ನಿರ್ಣಯವನ್ನು ಮತಕ್ಕೆ ಹಾಕಲು ಪ್ರತಿಪಕ್ಷಗಳು ತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳಬೇಕೆಂದು ಪಾಲ್ ಒತ್ತಾಯಿಸಿದರು. ಆದರೆ ಪ್ರತಿಭಟನೆಗಳು ಮುಂದುವರಿದಂತೆ, ಅವರು ಸದನದ ಮತವನ್ನು ಕೋರಿದರು ಮತ್ತು ನಿರ್ಣಯವನ್ನು ಧ್ವನಿ ಮತದಿಂದ ತಿರಸ್ಕರಿಸಲಾಯಿತು.

ರಾಹುಲ್‌- ಶಾ ಜಟಾಪಟಿ:

ಇದಕ್ಕೂ ಮುನ್ನ ಚರ್ಚೆಯ ವೇಳೆ ಮಾತನಾಡಿದ ರಾಹುಲ್‌ ಗಾಂಧಿ, ‘ಸಂಸತ್‌ನಲ್ಲಿ ಮಾತನಾಡುವುದಕ್ಕೆ ಮುಂದಾದಾಗ ಸ್ಪೀಕರ್‌ ಓಂ ಬಿರ್ಲಾ ಅವರು ಹಲವು ಸಲ ಮಾತನಾಡದಂತೆ ತಡೆದರು’ ಎಂದು ಆರೋಪಿಸಿದರು. ಇತರ ವಿಪಕ್ಷ ಸದಸ್ಯರು, ‘ಬಿರ್ಲಾ ನಮಗೆ ಬರೀ ನೋ ನೋ ಎನ್ನುತ್ತಾರೆ’ ಎಂದು ಕಿಡಿಕಾರಿದರು.

ಬಳಿಕ ನಿರ್ಣಯಕ್ಕೆ ಉತ್ತರಿಸಿದ ಅಮಿತ್‌ ಶಾ, ‘16ನೇ ಲೋಕಸಭೆಯಲ್ಲಿ ಸರಾಸರಿ ಹಾಜರಾತಿ ಶೇ.80 ಇದ್ದರೆ, ರಾಹುಲ್‌ ಗಾಂಧಿಯವರ ಹಾಜರಾತಿ ಶೇ.52. ಇತ್ತು. 17ನೇ ಲೋಕಸಭೆಯಲ್ಲಿ ಸರಾಸರಿ ಶೇ.66 ಇದ್ದರೆ, ರಾಹುಲ್‌ರದ್ದು ಕೇವಲ ಶೇ.51. ತಮಗೆ ಮಾತಾಡಲು ಅವಕಾಶ ನೀಡುವುದಿಲ್ಲ ಎಂದು ಆರೋಪಿಸುತ್ತಾರೆ. ಅವಕಾಶ ಕೊಟ್ಟರೆ ಜರ್ಮನಿ, ಇಂಗ್ಲೆಂಡ್‌ ಪ್ರವಾಸದಲ್ಲಿರುತ್ತಾರೆ’ ಎಂದು ತಿರುಗೇಟು ನೀಡಿದರು.

ಸಚಿವ ಕಿರಣ್‌ ರಿಜಿಜು, ‘ರಾಹುಲ್‌ ಸದನದಲ್ಲೇ ಕಣ್ಣು ಹೊಡೆಯುತ್ತಾರೆ. ಫ್ಲೈಯಿಂಗ್‌ ಕಿಸ್‌ ಮಾಡುತ್ತಾರೆ. ಸ್ಪೀಕರ್ ಬಿರ್ಲಾಗೆ ಯಾರ್ ಎನ್ನುತ್ತಾರೆ’ ಎಂದು ಕಿಡಿಕಾರಿದರು.



Source link

Leave a Reply

Your email address will not be published. Required fields are marked *