ಮುಂಬೈ ತಂಡ ತೊರೆಯಲು ನಿರ್ಧರಿಸಿದ ಟೀಂ ಇಂಡಿಯಾ ಪ್ರತಿಭಾನ್ವಿತ ಕ್ರಿಕೆಟಿಗ!

ಮುಂಬೈ ತಂಡ ತೊರೆಯಲು ನಿರ್ಧರಿಸಿದ ಟೀಂ ಇಂಡಿಯಾ ಪ್ರತಿಭಾನ್ವಿತ ಕ್ರಿಕೆಟಿಗ!

ಮುಂಬೈ: ಟೀಂ ಇಂಡಿಯಾ ಪ್ರತಿಭಾನ್ವಿತ ಕ್ರಿಕೆಟಿಗ, ಮುಂಬೈ ಮೂಲದ ಅಗ್ರಕ್ರಮಾಂಕದ ಬ್ಯಾಟರ್ ಪೃಥ್ವಿ ಶಾ, ಮುಂಬೈ ತಂಡವನ್ನು ತೊರೆದಿದ್ದಾರೆ. ಈ ಕುರಿತಾದ ಮಹತ್ವದ ಅಪ್‌ಡೇಟ್ ಇಲ್ಲಿದೆ ನೋಡಿ

ಯುವ ಕ್ರಿಕೆಟಿಗ ಪೃಥ್ವಿ ಶಾ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಮುಂಬೈ ಕ್ರಿಕೆಟ್‌ನಿಂದ ಹೊರ ಬರುವುದಕ್ಕೆ ನಿರ್ಧರಿಸಿದ್ದಾರೆ.

ನಿರಾಕ್ಷೇಪಣಾ ಪತ್ರ (ಎನ್‌ಒಸಿ)ಕ್ಕೆ ಕೋರಿ ಮುಂಬೈ ಕ್ರಿಕೆಟ್‌ ಸಂಸ್ಥೆಗೆ ಮನವಿ ಮಾಡಿದ್ದಾರೆ. ಪೃಥ್ವಿ ಅವರ ಕೋರಿಕೆಯನ್ನು ಎಂಸಿಎ ಅನುಮೋದಿಸಿದೆ.

ಪೃಥ್ವಿ 2025-26ರ ದೇಶಿಯ ಋತುವಿನಲ್ಲಿ ಮಹಾರಾಷ್ಟ್ರ ಪರ ಆಡುವ ಸಾಧ್ಯತೆಯಿದೆ. ಹೀಗಾದಲ್ಲಿ ಋತುರಾಜ್ ಗಾಯಕ್ವಾಡ್ ನಾಯಕತ್ವದಡಿ ಪೃಥ್ವಿ ಶಾ ಕಣಕ್ಕಿಳಿಯುವ ಸಾಧ್ಯತೆಯಿದೆ.

ಮೈದಾನದಾಚೆಗಿನ ಅಶಿಸ್ತು ಹಾಗೂ ಫಿಟ್ನೆಸ್‌ ಸಮಸ್ಯೆಯಿಂದಾಗಿ ಪೃಥ್ವಿ ಎಂಸಿಎ ಕೆಂಗಣ್ಣಿಗೆ ಗುರಿಯಾಗಿದ್ದರು. 2025ರ ಐಪಿಎಲ್‌ ಹರಾಜಿನಲ್ಲೂ ಅವರು ಬಿಕರಿಯಾಗದೆ ಉಳಿದಿದ್ದರು.

2018ರಲ್ಲಿ ವೆಸ್ಟ್ ಇಂಡೀಸ್ ಎದುರು ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ಪೃಥ್ವಿ ಶಾ, ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ಸ್ಮರಣೀಯವಾಗಿಸಿಕೊಂಡಿದ್ದರು.
Shaw made his Test debut against West Indies in 2018 and in that same match, he scored his maiden century and became the youngest batsman to make a Test century on debut for India (18 years and 319 days). When India won the second Test by ten wickets, Shaw was adjudged as the Player of the Series. It was in January 2020, Shaw was named in India’s ODI squad for India’s series against New Zealand.

ಭಾರತ ಪರ ಪೃಥ್ವಿ ಶಾ, 5 ಟೆಸ್ಟ್, 6 ಏಕದಿನ ಹಾಗೂ ಒಂದು ಟಿ20 ಪಂದ್ಯಗಳನ್ನಾಡಿದ್ದಾರೆ. ಭಾರತಕ್ಕೆ ಅಂಡರ್ 19 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಪೃಥ್ವಿ, ಕಳೆದ ಎರಡು ವರ್ಷಗಳಿಂದಲೂ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದಾರೆ.

ಈ ಹಿಂದೆ ಕರುಣ್ ನಾಯರ್ ಕೂಡಾ ಕರ್ನಾಟಕ ತಂಡ ತೊರೆದು ವಿದರ್ಭ ತಂಡ ಕೂಡಿಕೊಂಡಿದ್ದರು. ವಿದರ್ಭ ತಂಡದ ಪರ ಅದ್ಭುತ ಪ್ರದರ್ಶನ ತೋರುವ ಮೂಲಕ ಕರುಣ್ ನಾಯರ್ ಇದೀಗ ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅದೇ ರೀತಿ ಇದೀಗ ಪೃಥ್ವಿ ಶಾ ಕೂಡಾ ಮುಂಬರುವ ದಿನಗಳಲ್ಲಿ ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ.

Source link

Leave a Reply

Your email address will not be published. Required fields are marked *