
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್ 12, ಮಂಗಳವಾರದ ದ್ವಾದಶ ರಾಶಿಗಳ ಫಲಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸದಲ್ಲಿ, ಮೂಲ ನಕ್ಷತ್ರ, ಸಿದ್ಧಿ ಯೋಗ ಇರತಕ್ಕಂತಹ ಈ ದಿನದ ಗ್ರಹಗಳ ಸ್ಥಾನ ಮತ್ತು ಅವುಗಳ ಪ್ರಭಾವದ ಬಗ್ಗೆ ವಿವರಿಸಲಾಗಿದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಧನು ರಾಶಿಯಲ್ಲಿ ಸಂಚಾರ ಮಾಡಲಿದ್ದಾನೆ.
ಡಾ. ಬಸವರಾಜ ಗುರೂಜಿ ಅವರು ಪ್ರತಿ ರಾಶಿಯವರಿಗೂ ಆರ್ಥಿಕ ಸ್ಥಿತಿ, ಉದ್ಯೋಗ, ಕುಟುಂಬ, ಆರೋಗ್ಯ, ಪ್ರೇಮ ವ್ಯವಹಾರಗಳು, ವಿದ್ಯಾರ್ಥಿ ಜೀವನ, ಪ್ರಯಾಣ ಯೋಗ ಮತ್ತು ಶುಭ-ಅಶುಭ ಘಟನೆಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಜೊತೆಗೆ, ಪ್ರತಿ ರಾಶಿಯವರಿಗೆ ಅದೃಷ್ಟ ಸಂಖ್ಯೆ, ಶುಭ ಬಣ್ಣ ಮತ್ತು ಪಠಿಸಬೇಕಾದ ವಿಶೇಷ ಮಂತ್ರಗಳನ್ನು ಸಹ ಸೂಚಿಸಲಾಗಿದೆ.