ಹಾರರ್, ಸಸ್ಪೆನ್ಸ್ ಸಿನಿಮಾ ಮಾಡಿ ಫೇಮಸ್ ಆಗಿದ್ದ ನಿರ್ದೇಶಕ ಬೆಂಗಳೂರಲ್ಲಿ ನಿಧನ

ಹಾರರ್, ಸಸ್ಪೆನ್ಸ್ ಸಿನಿಮಾ ಮಾಡಿ ಫೇಮಸ್ ಆಗಿದ್ದ ನಿರ್ದೇಶಕ ಬೆಂಗಳೂರಲ್ಲಿ ನಿಧನ


ಹಾರರ್, ಸಸ್ಪೆನ್ಸ್ ಸಿನಿಮಾ ಮಾಡಿ ಫೇಮಸ್ ಆಗಿದ್ದ ನಿರ್ದೇಶಕ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ

ತಮಿಳಿನ ಹಿರಿಯ ನಿರ್ದೇಶಕ ಹಾಗೂ ಸಂಗೀತ ಸಂಯೋಜಕ ದಕ್ಕಳಿ ಶ್ರೀನಿವಾಸನ್ ಅವರು ನಿಧನರಾದರು. ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬೆಂಗಳೂರಿನಲ್ಲಿ ಅವರು ಕೊನೆಯುಸಿರು ಎಳೆದಿದ್ದು, ಅವರಿಗೆ 72 ವರ್ಷ ವಯಸ್ಸಾಗಿತ್ತು. ಸುಮಾರು ಎರಡೂವರೆ ಕಾಲ ಅವರು ಚಿತ್ರರಂಗದಲ್ಲಿ ಆಯಕ್ಟೀವ್ ಆಗಿದ್ದರು.

1987ರಲ್ಲಿ ರಿಲೀಸ್ ಆದ ‘ಇವರ್ಗಳ್ ವರುಂಗಳಾ ತೂಂಗಲ್’ ಸಿನಿಮಾದಲ್ಲಿ ಬರಹಗಾರನಾಗಿ ಕೆಲಸ ಮಾಡಿ ಚಿತ್ರರಂಗಕ್ಕೆ ಶ್ರೀನಿವಾಸ ಕಾಲಿಟ್ಟರು. ಈ ಚಿತ್ರವನ್ನು ಅವರು ನಿರ್ಮಾಣವನ್ನೂ ಮಾಡಿದ್ದರು. ಆ ಬಳಿಕ ಕಮಲ್ ಹಾಸನ್ ನಟನೆಯ ‘ನಲಯ ಮಣಿದನ್’ ಸಿನಿಮಾದಲ್ಲಿ ಶ್ರೀನಿವಾಸ್ ನಟಿಸಿದರು. ಈ ಚಿತ್ರಕ್ಕೆ ಅವರು ನಿರ್ಮಾಪಕರೂ ಆಗಿದ್ದರು. 1991ರಲ್ಲಿ ಬಂದ ‘ಜನ್ಮ ನಕ್ಷತ್ರಮ್’ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟರು. ಈ ಚಿತ್ರ ಸಸ್ಪೆನ್ಸ್ ಹಾರರ್ ಥೀಮ್ ಶೈಲಿಯಲ್ಲಿ ಮೂಡಿ ಬಂದಿತ್ತು. ಕಮಲ್ ಹಾಸನ್ ಅವರ ‘ಶೂರ ಸಂಹಾರ’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿ ಗಮನ ಸೆಳೆದರು.

ಶ್ರೀನಿವಾಸ್ ಅವರು ಥ್ರಿಲ್ಲರ್ ಮತ್ತು ಹಾರರ್ ಸಿನಿಮಾಗಳನ್ನು ಮಾಡುವ ಮೂಲಕ ಫೇಮಸ್ ಆಗಿದ್ದರು. ಶ್ರೀನಿವಾಸ್ 2011ರಲ್ಲಿ ‘ಆಡುದಾಡು’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದರು. ಆ ಬಳಿಕ ಅವರು ಚಿತ್ರರಂಗದ ಕಡೆ ಮುಖ ಮಾಡಿಲ್ಲ.

ಇದನ್ನೂ ಓದಿ: ಉತ್ತರದವರಾದರೂ ಮೊನಾಲಿಸಾ ಕೇರಳದಲ್ಲಿ ಮದುವೆ ಆಗಿದ್ದೇಕೆ? ಮೊಹಮ್ಮದ್ ಫರ್ಮಾನ್ ಹಿನ್ನೆಲೆ ಏನು?

ಶ್ರೀನಿವಾಸ್ ಅವರು ಸಿನಿಮಾ ಕೆಲಸ ಬಿಟ್ಟ ಬಳಿಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದರು. ಅವರು ಆದ ಆಶ್ರಮ ಆರಂಭಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಅವರಿಗೆ ತೀವ್ರ ಅನಾರೋಗ್ಯ ಕಾಡಿತ್ತು. ಅವರು ಬೆಂಗಳೂರಿನಲ್ಲಿ ವಾಸವಿದ್ದರು. ಪಡೆದ ದತ್ತು ಪಡೆದು ಅವರ ಜೊತೆ ವಾಸವಿದ್ದರು. ಅವರು ಇಲ್ಲಿಯೇ ನಿಧನ ಹೊಂದಿದ್ದು, ಅಂತಿಮ ಸಂಸ್ಕಾರ ಬೆಂಗಳೂರಿನಲ್ಲೇ ನಡೆದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *