ಮತ್ತೆ ಬರ್ತಿದೆ ‘ಅಗ್ನಿ ಸಾಕ್ಷಿ’; ಧಾರಾವಾಹಿಗೆ ನಾಯಕ ಯಾರು?

ಮತ್ತೆ ಬರ್ತಿದೆ ‘ಅಗ್ನಿ ಸಾಕ್ಷಿ’; ಧಾರಾವಾಹಿಗೆ ನಾಯಕ ಯಾರು?


ಮತ್ತೆ ಬರ್ತಿದೆ 'ಅಗ್ನಿ ಸಾಕ್ಷಿ'; ಧಾರಾವಾಹಿಗೆ ನಾಯಕ ಯಾರು?

ಕಲರ್ಸ್ ಕನ್ನಡದಲ್ಲಿ ‘ಅಗ್ನಿಸಾಕ್ಷಿ’ ಧಾರಾವಾಹಿ ಈ ಮೊದಲು ಪ್ರಸಾರ ಕಂಡು ಭಾರೀ ವೀಕ್ಷಣೆ ಕಂಡಿತ್ತು. ಹಲವು ವರ್ಷಗಳ ಕಾಲ ಈ ಸೀರಿಯಲ್ ಪ್ರಸಾರ ಆಯಿತು. ಈಗ ಧಾರಾವಾಹಿಯು ಮತ್ತೆ ನೋಡಲು ಬರಲು ರೆಡಿ ಆಗಿದೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯು ಪ್ರೋಮೋ ಹಂಚಿಕೊಂಡಿದೆ. ಇದು ವೀಕ್ಷಕರಿಗೆ ಸಾಕಷ್ಟು ಗಮನ ಸೆಳೆದಿದೆ. ಹಳೆಯ ಮ್ಯೂಸಿಕ್ ಅನ್ನು ಬಳಸಲಾಗಿದೆ.

‘ಅಗ್ನಿಸಾಕ್ಷಿ’ ಧಾರಾವಾಹಿಯು 2013ರ ಡಿಸೆಂಬರ್ 2 ರಂದು ಪ್ರಸಾರ ಪ್ರಾರಂಭವಾಯಿತು. ಆ ಬಳಿಕ ಧಾರಾವಾಹಿ ಬರೋಬ್ಬರಿ 6 ವರ್ಷ ಪ್ರಸಾರ ಕಂಡಿತು. ಈ ಧಾರಾವಾಹಿ 2020 ರ ಜನವರಿ 3 ರಂದು ಈ ಧಾರಾವಾಹಿ ಕೊನೆಗೊಂಡಿತು. ಬರೋಬ್ಬರಿ 1588 ಎಪಿಸೋಡ್‌ಗಳನ್ನು ಈ ಸೀರಿಯಲ್ ಪ್ರಸಾರ ಮಾಡಿತು. ಈ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಹಾಗೂ ವಿಜಯ್ ಸೂರ್ಯ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.

ಈಗ ‘ಅಗ್ನಿಸಾಕ್ಷಿ’ ಧಾರಾವಾಹಿ ಮತ್ತೆ ಬರುತ್ತಿದೆ. ಈ ಧಾರಾವಾಹಿ ಪ್ರೋಮೋ ನೋಡಿ ವೀಕ್ಷಕರು ಖುಷಿಪಟ್ಟಿದ್ದಾರೆ. ಹಾಗಾದರೆ, ಈ ಧಾರಾವಾಹಿಗೆ ನಾಯಕ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ. ‘ಅಗ್ನಿಸಾಕ್ಷಿ’ ಧಾರಾವಾಹಿಗೆ ಶಮಂತ್ ಬ್ರೋ ಗೌಡ ನಾಯಕ ಎಂದು ಹೇಳುತ್ತಿದ್ದಾರೆ. ಈ ವಿಷಯ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಇದನ್ನೂ ಓದಿ: ‘ನನ್ನನ್ನೇಕೆ ಕುಳ್ಳಿ ಎಂದಿದೆ’; ‘ಅಗ್ನಿಸಾಕ್ಷಿ’ ರೀಯೂನಿಯನ್‌ನಲ್ಲಿ ಸುಕೃತಾ-ವೈಷ್ಣವಿ ಸಖತ್ ಫನ್

ಈ ಮೊದಲು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಬ್ರೋ ಗೌಡ ನಟಿಸಿದ್ದರು. ಈ ಧಾರಾವಾಹಿ ಗಮನ ಸೆಳೆಯಿತು. ಈ ಧಾರಾವಾಹಿ ಇತ್ತೀಚೆಗೆ ಮುಗಿದಿದೆ. ಆ ಬಳಿಕ ಅವರು ಹೊಸ ಜೀವನಕ್ಕೆ ಕಾಲಿಟ್ಟರು. ಅವರು ಮದುವೆ ಆಗಿ ಹಾಗಿ ಸಂಸಾರ ನಡೆಸುತ್ತಿದ್ದಾರೆ. ಈಗ ‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಮಿಂಚಲು ಅವರು ರೆಡಿ ಆಗಿದ್ದಾರೆ.

 

Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

 

ಕಲರ್ಸ್ ಕನ್ನಡ ಅಧಿಕೃತ (@colorskannadaofficial) ಹಂಚಿಕೊಂಡ ಪೋಸ್ಟ್

ಶಮಂತ್ ಅವರು ಈ ಮೊದಲು ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಇದ್ದರು. ಅಲ್ಲಿಂದ ಅವರಿಗೆ ಧಾರಾವಾಹಿ ಆಫರ್ ಬಂತು. ಈಗ ನಟನಾಗಿ ಅವರು ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *