ವಿಜಯಲಕ್ಷ್ಮೀಗೆ ಅವಾಚ್ಯವಾಗಿ ಬೈದವರಲ್ಲಿದ್ದಾರೆ ಸುದೀಪ್ ಫ್ಯಾನ್ಸ್; ಚಾರ್ಜ್​​ಶೀಟ್​​ನಲ್ಲಿ ಶಾಕಿಂಗ್ ವಿಷಯ

ವಿಜಯಲಕ್ಷ್ಮೀಗೆ ಅವಾಚ್ಯವಾಗಿ ಬೈದವರಲ್ಲಿದ್ದಾರೆ ಸುದೀಪ್ ಫ್ಯಾನ್ಸ್; ಚಾರ್ಜ್​​ಶೀಟ್​​ನಲ್ಲಿ ಶಾಕಿಂಗ್ ವಿಷಯ


ವಿಜಯಲಕ್ಷ್ಮೀಗೆ ಅವಾಚ್ಯವಾಗಿ ಬೈದವರಲ್ಲಿದ್ದಾರೆ ಸುದೀಪ್ ಫ್ಯಾನ್ಸ್; ಚಾರ್ಜ್ ಶೀಟ್‌ನಲ್ಲಿ ಶಾಕಿಂಗ್ ವಿಷಯ

ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು (ವಿಜಯಲಕ್ಷ್ಮಿ) ತಮಗೆ ಸೋಶಿಯಲ್ ಮೀಡಿಯಾದಲ್ಲಿ ಬರುತ್ತಿದ್ದ ಅಶ್ಲೀಲಾ ಕಾಮೆಂಟ್ ವಿರುದ್ಧ ಸಮರ ಸಾರಿದ್ದಾರೆ. ಈ ಸಂಬಂಧ ಅವರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಅದಕ್ಕೆ ಬೇಕಾದ ಸಾಕ್ಷ್ಯ ಕೂಡ ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿ, ಹಲವರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈಗ ಚಾರ್ಜ್ ಸಲ್ಲಿಕೆ ಮಾಡಿದ್ದು, ಕೆಲವು ಶಾಕಿಂಗ್ ವಿಷಯಗಳು ಬೆಳಕಿಗೆ ಬಂದಿದೆ.

ಸಿಸಿಬಿ ಸೈಬರ್ ಕ್ರೈಂ ಪೊಲೀಸರು 45ನೇ ಇಸಿಎಂಎಂ ನ್ಯಾಯಾಲಯಕ್ಕೆ ಆರು ಆರೋಪಿಗಳ ವಿರುದ್ಧ ಸುಮಾರು 473 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್ ನಲ್ಲಿ ಆರು ಆರೋಪಿಗಳ ಹೇಳಿಕೆ ದಾಖಲು. ಆರೋಪಿಗಳಲ್ಲಿ ನಟ ಸುದೀಪ್ ಅಭಿಮಾನಿಗಳು ಎಂಬ ವಿಷಯ ಬಹಿರಂಗವಾಗಿದೆ.
ಎಲ್ಲರೂ ನಕಲಿ ಐಡಿಗಳನ್ನು ಕ್ರಿಯೇಟ್ ಮಾಡಿ ಕಾಮೆಂಟ್ ಮಾಡಿದ್ದಾರೆ. ಕಾಮೆಂಟ್ ಮಾಡೋ ಉದ್ದೇಶಕ್ಕೆ ನಕಲಿ ಅಕೌಂಟ್ ಓಪನ್ ಮಾಡೋ ವಿಷಯ ಗೊತ್ತಾಗಿದೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿಯನ್ನು ಟಾರ್ಗೆಟ್ ಮಾಡಿ ಬಂಧಿತರು ಕೆಟ್ಟ ರೀತಿಯಲ್ಲಿ ಫೋಟೋ ಹಾಕಿ ಕಾಮೆಂಟ್ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಪೋಸ್ಟ್ ಮಾಡುತ್ತಿರುವುದು ಅಶ್ಲೀಲ ಎಂಬುದು ಗೊತ್ತಿದ್ದೇ ಕಾಮೆಂಟ್ ಮಾಡಿರೋದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳು ವಶಪಡಿಸಿಕೊಂಡು ಎಫ್‌ಎಸ್‌ಎಲ್‌ಗೆ ರವಾನೆ ಮಾಡಿದ್ದು, ಡೇಟಾ ರಿಟ್ರೀವ್ ಮಾಡಿ ಮೊಬೈಲ್‌ನಲ್ಲಿ ವರದಿಗಾಗಿ ಕಾಯುತ್ತಿದ್ದಾರೆ.

ಕಾಮೆಂಟ್ ಮಾಡಿದ 12 ಐಡಿಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಈ ಸಂಬಂಧ ಕಂಪನಿಗಳಿಗೆ ಪತ್ರ ಬರೆಯಲು, ಇನ್ನಷ್ಟೇ ಅವರಿಂದ ಉತ್ತರ ಬರಬೇಕಿದೆ. ಸದ್ಯ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: 25 ವರ್ಷಗಳಿಂದ ದರ್ಶನ್ ಅಭಿಮಾನಿಗಳಿಗೆ ಎಂದಿಗೂ ಆ ಮಾತು ಹೇಳಿಲ್ಲ; ವಿಜಯಲಕ್ಷ್ಮೀ

ಇತ್ತ ಚಾರ್ಜ್ ಶೀಟ್ ಸಲ್ಲಿಕೆ ಆಗಿರುವ ಆರೋಪಿಗಳು ಜಾಮೀನು ಕೋರಿ ಹೈಕೋರ್ಟ್ ಗೆ ಜಾಮೀನು ಸಲ್ಲಿಕೆ ಮಾಡಿದ್ದಾರೆ. ಮಾರ್ಚ್ 24 ರಂದು ಅರ್ಜಿ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ. ಕಾಮೆಂಟ್ ಮಾಡಿದ ತಪ್ಪಿಗೆ 66 ದಿನಗಳಿಂದ ಆರು ಆರೋಪಿಗಳು ಜೈಲಿನಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.

 



Source link

Leave a Reply

Your email address will not be published. Required fields are marked *