ಬೀದರ್ ಜಿಲ್ಲೆಯ ಭೆಮಳಖೇಡ ಗ್ರಾಮದಲ್ಲಿ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲಾ ಕಟ್ಟಡದಿಂದ ಜಿಗಿದು ಸಾವಿಗೆ ಶರಣಾಗಿದ್ದಾಳೆ. ಪ್ರಾರ್ಥನೆ ವೇಳೆ ತರಗತಿಯಲ್ಲೇ ಉಳಿದಿದ್ದ ಬಾಲಕಿಯ ಸಾವಿಗೆ ಶಾಲೆಯ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.

ಬೀದರ್: ಶಾಲಾ ಕಟ್ಟಡದಿಂದ ಜಿಗಿದು 16 ವರ್ಷದ ಬಾಲಕಿ ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಭೆಮಳಖೇಡ ಗ್ರಾಮದಲ್ಲಿ ನಡೆದಿದೆ. ಬಾಲಕಿ ಇಲ್ಲಿನ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು.

ಶಾಲೆಯ ಪ್ರಾರ್ಥನೆ ಮುಗಿದ ಬಳಿಕ ಬಾಲಕಿ ಶಾಲಾ ಕಟ್ಟಡದಿಂದ ಜಿಗಿದು ಸಾವಿಗೆ ಶರಣಾಗಿದ್ದಾಳೆ ಎಂದು ವರದಿಯಾಗಿದೆ. ಪ್ರಾರ್ಥನೆ ವೇಳೆ ಆಕೆ ಹೊರಗೆ ಬರದೇ ತರಗತಿಯಲ್ಲೇ ಕುಳಿತಿದ್ದು ಎಂದು ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಶಾಲೆಯ ವಿರುದ್ಧ ಬಾಲಕಿಯ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲೆಯ ಪ್ರಾರ್ಥನೆ ವೇಳೆ ಆಕೆ ಬರಲಿಲ್ಲ ಎಂದಾಗ ನೀವು ಏಕೆ ಆಕೆಯನ್ನು ಕರೆದು ಪ್ರಶ್ನಿಸಿಲ್ಲ ಎಂದು ಶಾಲೆಯ ಶಿಕ್ಷಕರಿಗೆ ಮೃತ ಬಾಲಕಿಯ ಕುಟುಂಬಸ್ಥರು ಪ್ರಶ್ನೆ ಮಾಡಿದ್ದು, ಶಾಲಾ ಶಿಕ್ಷಕರ ವಿರುದ್ಧ ಕುಟುಂಬಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ನನ್ನ ಮಗಳ ಸಾವಿಗೆ ಕಾರಣವೇನು ಎಂಬ ಬಗ್ಗೆ ತನಿಖೆ ಮಾಡುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಮೃತ ಬಾಲಕಿಯನ್ನು ಮದಿಯಾ ನಶೀರ್ ಪಾಷಾ ಎಂದು ಗುರುತಿಸಲಾಗಿದೆ. ಬಾಲಕಿ ಸಾವಿಗೆ ಶರಣಾಗುವ ಮುನ್ನ ತರಗತಿ ಕೋಣೆಯಲ್ಲಿ ಸ್ನೇಹಿತೆಯರ ಜೊತೆ ಕುಳಿತಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಬಾಲಕಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ, ಸ್ಥಳಕ್ಕೆ ಬೇಮಳಖೇಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಕೊಂಡಿದ್ದಾರೆ.

Source link
ಬೀದರ್: ಶಾಲಾ ಕಟ್ಟಡದಿಂದ ಜಿಗಿದು 10ನೇ ಕ್ಲಾಸ್ ಬಾಲಕಿ ಸಾವಿಗೆ ಶರಣು