Headlines

ವೈಯುಕ್ತಿಕ ದಾಖಲೆಗಾಗಿ ಆಡುವುದನ್ನು ನಿಲ್ಲಿಸಿ… ಗಂಭೀರ್ ಖಡಕ್ ಸೂಚನೆ

ವೈಯುಕ್ತಿಕ ದಾಖಲೆಗಾಗಿ ಆಡುವುದನ್ನು ನಿಲ್ಲಿಸಿ… ಗಂಭೀರ್ ಖಡಕ್ ಸೂಚನೆ


ವೈಯುಕ್ತಿಕ ದಾಖಲೆಗಾಗಿ ಆಡುವುದನ್ನು ನಿಲ್ಲಿಸಿ… ಗಂಭೀರ್ ಖಡಕ್ ಸೂಚನೆ

ಟೀಮ್ ಇಂಡಿಯಾ ಟಿ20 ಗೆಲುವಿನ ಅಲೆಯಲ್ಲಿ ತೇಲುತ್ತಿದೆ. ಈ ಗೆದ್ದ ಬೆನ್ನಲ್ಲೇ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ನೀಡಿದ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಟಿ20, ಭಾರತ ಗೆದ್ದ ಖುಷಿಯಲ್ಲಿರುವ ತಂಡದಲ್ಲಿರುವ ಆಟಗಾರರು ವೈಯುಕ್ತಿಕ ದಾಖಲೆಗಾಗಿ ಆಡುವುದನ್ನು ನಿಲ್ಲಿಸಲು ಖಡಕ್ ಸೂಚನೆ ನೀಡಿದ್ದಾರೆ.

ಭಾರತೀಯ ಕ್ರಿಕೆಟ್‌ನಲ್ಲಿ ವೈಯಕ್ತಿಕ ಮೈಲಿಗಲ್ಲುಗಳ ಯುಗ ಮುಗಿದಿದೆ. ತಮ್ಮ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಬೇಕು.
ಶತಕ ಅಥವಾ ಅರ್ಧಶತಕಕ್ಕಾಗಿ ಆಡಿ ಸಂಭ್ರಮಿಸುವುದನ್ನು ನಿಲ್ಲಿಸಿ, ಟ್ರೋಫಿಗಳನ್ನು ಗೆದ್ದು ಸಂಭ್ರಮಿಸುತ್ತಿದ್ದಾರೆ.

ತಂಡದ ಮುಖ್ಯ ಉದ್ದೇಶ ಟ್ರೋಫಿ ಗೆಲ್ಲುವುದೇ ಆಗಿರಬೇಕು. ಇದರ ಹೊರತಾಗಿ ವೈಯಕ್ತಿಕ ರನ್ ಗಳಿಸುವುದಲ್ಲ. ಆಟಗಾರರು ತಮ್ಮ ವೈಯಕ್ತಿಕ ಸ್ಕೋರ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ತಂಡದ ಮೊತ್ತವನ್ನು ಆಡಬೇಕು ಎಂದು ಗೌತಮ್ ಗಂಭೀರ ಒತ್ತಿ ಹೇಳಿದ್ದಾರೆ.

ಇದಕ್ಕೆ ಸಂಜು ಸ್ಯಾಮ್ಸನ್ ಅವರ ಉದಾಹರಣೆಯನ್ನು ಗಂಭೀರ್ ಮುಂದಿಟ್ಟಿದ್ದಾರೆ. T20 ನಲ್ಲಿ ಸಂಜು ಸ್ಯಾಮ್ಸನ್ ಕೊನೆಯ ಮೂರು ಪಂದ್ಯಗಳಲ್ಲಿ 97*, 89 ಮತ್ತು 89 ರನ್ ಗಳಿಸಿದ್ದರು.

ಸಂಜು ತಮ್ಮ ಶತಕಕ್ಕಾಗಿ ನಿಧಾನವಾಗಿ ಆಡಿದ್ದಾರೆ ತಂಡದ ಮೊತ್ತ 250 ದಾಟಿದೆ. ವೈಯಕ್ತಿಕ ದಾಖಲೆಗಿಂತ ವೇಗಕ್ಕೆ ಆದ್ಯತೆ ನೀಡಲೇ ಭಾರತ ಗೆಲ್ಲಲು ಸಾಧ್ಯವಾಯಿತು. ಎಲ್ಲರಲ್ಲೂ ಇಂತಹ ಪರಿಸ್ಥಿತಿ ಮೂಡಬೇಕು.

ಸ್ವಾರ್ಥಕ್ಕಾಗಿ ಆಡುವುದನ್ನು ನಿಲ್ಲಿಸಿ ತಂಡದ ಗೆಲುವಿಗಾಗಿ ಶ್ರಮಿಸಬೇಕು. ಜೊತೆಗೆ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಲೇಬೇಕು. ನನ್ನ ಕೆಲಸ ಬಲಿಷ್ಠ ತಂಡವನ್ನು ರೂಪಿಸಿದೆ. ಬದಲಾಗಿ ಸೂಪರ್ ಸ್ಟಾರ್ ಗಳನ್ನು ಹುಟ್ಟು ಹಾಕುವುದಲ್ಲ ಎಂದು ಗೌತಮ್ ಗಂಭೀರ್ ಪುನರುಚ್ಚರಿಸಿದ್ದಾರೆ.

ನನ್ನ ಉದ್ದೇಶ ಸೂಪರ್ ಟೀಮ್ ರೂಪಿಸುವುದು. ಬದಲಾಗಿ ಸೂಪರ್ ಸ್ಟಾರ್‌ಗಳನ್ನು ಹುಟ್ಟುಹಾಕುವುದಲ್ಲ. ಹೀಗಾಗಿ ವೈಯುಕ್ತಿಕ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಿ, ತಂಡದ ಹಿತಾಸಕ್ತಿಗಾಗಿ ಆಡಬೇಕು ಎಂದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಖಡಕ್ ಸೂಚನೆ ನೀಡಿದ್ದಾರೆ.

ಇಲ್ಲಿ ಗೌತಮ್ ಗಂಭೀರ ವೈಯುಕ್ತಿಕ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಲು ಒತ್ತಿ ಒತ್ತಿ ಹೇಳಿರುವ ಉದ್ದೇಶವೇನು? ಇದನ್ನು ಯಾರಿಗಾಗಿ ಹೇಳಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ. ಅದರಲ್ಲೂ ಮುಂಬರುವ ಏಕದಿನಗಳ ಬಗ್ಗೆ ಗಂಭೀರ ಇಂತಹದೊಂದು ಖಡ ಸೂಚನೆ ಯಾರಿಗೆ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.

ಇದನ್ನೂ ಓದಿ: ICC T20I ಶ್ರೇಯಾಂಕಗಳು: ಐಸಿಸಿ ಟಿ20 ಬ್ಯಾಟರ್‌ಗಳ ರ್ಯಾಂಕಿಂಗ್ ಪ್ರಕಟ

ಒಟ್ಟಿನಲ್ಲಿ ಟಿ20 ಗೆದ್ದ ಬಳಿಕ ಗೌತಮ್ ಗಂಭೀರ ಹೊಸ ಉತ್ಸಾಹದಲ್ಲಿದ್ದು, ಈ ಉತ್ಸಾಹದೊಂದಿಗೆ 2027 ರಲ್ಲಿ ನಡೆಯಲಿರುವ ಏಕದಿನದ ನಂತರದ ನಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದೆ.

 



Source link

Leave a Reply

Your email address will not be published. Required fields are marked *