ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ, ರಿತ್ತಿ ಕುಟುಂಬಕ್ಕೆ ವಿಜಯನಗರ ಕಾಲದ ಚಿನ್ನದ ನಿಧಿ ಸಿಕ್ಕಿದ ನಂತರ ಆರಂಭವಾದ 47 ದಿನಗಳ ಉತ್ಖನನ ಕಾರ್ಯವು ಅಂತ್ಯಗೊಂಡಿದೆ. ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಕುಟುಂಬವನ್ನು ಗೌರವಿಸಲಾಗಿದೆ.

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿದ್ದ 47 ದಿನಗಳ ಉತ್ಖನನ ಕಾರ್ಯಕ್ಕೆ ತೆರೆ ಎಳೆಯಲಾಗಿದೆ. ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನ ಅಂಗಳದಲ್ಲಿ ಜನವರಿ 16ರಿಂದ ಉತ್ಖನನ ಕಾರ್ಯ ನಡೆಸಲಾಗುತ್ತಿತ್ತು. ಇದೀಗ ಉತ್ಖನನ ಕಾರ್ಯವನ್ನು ನಿಲ್ಲಿಸಲಾಗಿದೆ.

ಜನವರಿ 10ರಂದು ಲಕ್ಕುಂಡಿ ಗ್ರಾಮದ ರಿತ್ತಿ ಕುಟುಂಬ ತಮ್ಮ ಹಳೆಮನೆಯನ್ನು ಕೆಡವಲಾಗಿತ್ತು. ಈ ವೇಳೆ 470 ಗ್ರಾಂದಷ್ಟು ತೂಕದ ಚಿನ್ನ ಸಿಕ್ಕಿತ್ತು. ಈ ಎಲ್ಲಾ ಚಿನ್ನ ವಿಜಯನಗರ ಕಾಲದ ಆಭರಣ. ಈ ಚಿನ್ನದ ನಿಧಿ ಸುಮಾರು 500ರಿಂದ 600 ವರ್ಷಗಳ ಹಿಂದಿನ ವಿಜಯನಗರ ಕಾಲದ ಅರಸರ ಅವಧಿಯ ಆಭರಣಗಳು ಇರಬಹುದು ಎಂದು ತಜ್ಞ ಡಾ. ಎಂ.ಎಸ್. ಕೃಷ್ಣಮೂರ್ತಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಕೋಟೆ ವೀರಭದ್ರೇಶ್ವರ ದೇವಸ್ಥಾನ ಅಂಗಳದಲ್ಲಿ ಸುಮಾರು 13 ಅಡಿ ಆಳದವರೆಗೂ ಗುಂಡಿ ತೆಗೆದು ಉತ್ಖನನ ನಡೆಸಲಾಗಿತ್ತು. ಉತ್ಖನನ ಸಂದರ್ಭದಲ್ಲಿ ಶಿವಲಿಂಗ, ಪಾಣಿಪೀಠ, ನಾಗರ ಶಿಲೆಗಳು, ಬಿಲ್ಲೆ, ಮೂಳೆ ತುಣುಕುಗಳು, ಪಚ್ಚೆ ಕಲ್ಲು, ಹವಳ, ಕವಡೆ, ಮಡಿಕೆ ಚೂರು ಸೇರಿದಂತೆ ವಿಧ ರೀತಿಯ ವಿಗ್ರಹಗಳು ಸೇರಿದಂತೆ 50ಕ್ಕೂ ಅಧಿಕ ಪ್ರಾಚ್ಯಾವಶೇಷ ಪತ್ತೆಯಾಗಿದ್ದವು.

ಇಂದು ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP – Standard Operating Procedure) ಮೂಲಕ ಗುಂಡಿ ಮುಚ್ಚುವ ಕಾರ್ಯವನ್ನು ನಡೆಸಲಾಗುತ್ತಿದೆ. ಕೆಳಭಾಗದಲ್ಲಿ ತಾಡಪತ್ರೆ, ಮರಳು, ಇಟ್ಟಿಗೆ ಇಟ್ಟು ಅವುಗಳ ಮೇಲೆ ಮಣ್ಣು ಹಾಕಲಾಗುತ್ತದೆ. ನಂತರ ಜೆಸಿಬಿ ಮೂಲಕ ಗುಂಡಿಗಳನ್ನು ಮುಚ್ಚಲಾಗಿದೆ.

ಇದನ್ನೂ ಓದಿ: ಲಕ್ಕುಂಡಿ ಹಳೇ ಹಂಡೆಯಲ್ಲಿ ಗೋಲ್ಡನ್ ಕವರ್ ಚಾಕ್ಲೆಟ್ ಹಾಕಿ 22 ಲಕ್ಷ ದೋಚಿದ್ದ ಮೌಲ್ವಿ ಅರೆಸ್ಟ್

ತಮಗೆ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ ರಿತ್ತಿ ಕುಟುಂಬಕ್ಕೆ ಸರ್ಕಾರದಿಂದ ₹5 ಲಕ್ಷ ಬಹುಮಾನದೊಂದಿಗೆ ನಿವೇಶನ ನೀಡಲಾಗಿತ್ತು. ಇತ್ತೀಚೆಗಷ್ಟೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿವೇಶನ ಪತ್ರ ಹಸ್ತಾಂತರಿಸಿದ್ದರು. ಗಣರಾಜ್ಯೋತ್ಸವದಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ರಿತ್ತಿ ಕುಟುಂಬದ ಸದಸ್ಯರನ್ನು ಗೌರವಿಸಿದ್ದರು.

ಇದನ್ನೂ ಓದಿ: ಲಕ್ಕುಂಡಿಗೂ ಮೊದಲು ನಡೆದಿತ್ತು ಅಚ್ಚರಿ, 17000 ವರ್ಷ ಹಿಂದಿನ ಅಮೂಲ್ಯ ಸಂಪತ್ತು ಪತ್ತೆ ಹಚ್ಚಿದ್ದ ನಾಯಿ

Source link
ಇಡೀ ದೇಶದ ಗಮನ ಸೆಳೆದಿದ್ದ ಲಕ್ಕುಂಡಿಯ 47 ದಿನಗಳ ಉತ್ಖನನಕ್ಕೆ ತೆರೆ; ಇಷ್ಟು ದಿನ ಸಿಕ್ಕಿದ್ದೇನು?