
ಬೆಂಗಳೂರು, ಮಾರ್ಚ್ 12: ಅಮೆರಿಕ, ಇರಾನ್ ಹಾಗೂ ಇಸ್ರೇಲ್ ಯುದ್ಧದ ಪರಿಣಾಮವಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕೊರತೆ (ಗ್ಯಾಸ್ ಸಿಲಿಂಡರ್ ಬಿಕ್ಕಟ್ಟು) ತೀವ್ರವಾಗಿ, ಹೋಟೆಲ್ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಲಿಂಡರ್ ಸಿಗದೆ ಅಡುಗೆ ಮಾಡುವುದು ಹೇಗೆ, ಹೋಟೆಲ್ ನಡೆಸುವುದು ಹೇಗೆ ಎಂಬ ಆತಂಕ ಎಲ್ಲೆಡೆ ವ್ಯಾಪಿಸಿದೆ. ಗ್ಯಾಸ್ ಸರಬರಾಜಿನಲ್ಲಿ ಉಂಟಾದ ವ್ಯಾಪಾರದಿಂದ ಹಲವು ಹೋಟೆಲ್‌ಗಳು ಮತ್ತು ಸಣ್ಣ ಉಪಹಾರ ಗೃಹಗಳು ಸಂಕಷ್ಟವನ್ನು ಅನುಭವಿಸುತ್ತಿವೆ. ಆದರೆ ಬೆಂಗಳೂರಿನ ಸಾಮಾಜಿಕ ಸಂಸ್ಥೆಗೆ ಮಾತ್ರ ಗ್ಯಾಸ್ ಕೊರತೆ ಬಿಸಿ ತಟ್ಟಿಲ್ಲ ಎಂಬುದು ವಿಶೇಷವಾಗಿದೆ.
20 ವರ್ಷಗಳ ಹಿಂದೆಯೇ ಎಲ್‌ಪಿಜಿ ಸಿಲಿಂಡರ್‌ಗೆ ಗುಡ್ ಬೈ!
ಈ ಗ್ಯಾಸ್ ಬಿಕ್ಕಟ್ಟಿನ ನಡುವೆಯೂ ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆ ಎಲ್ಪಿಜಿ ಗ್ಯಾಸ್ ಬಳಸದೆ, ಯಾವುದೇ ತೊಂದರೆಯಿಲ್ಲದೆ 70 ಸಾವಿರದಿಂದ ಒಂದು ಲಕ್ಷ ಮಕ್ಕಳಿಗೆ ಪ್ರತಿದಿನ ಬಿಸಿಯೂಟ ಸಿದ್ಧಪಡಿಸುತ್ತಿದೆ. ವಿಶೇಷವೆಂದರೆ ಈ ಅಡುಗೆಗೆ ಗ್ಯಾಸ್ ಸಿಲಿಂಡರ್ ಅಗತ್ಯವೇ ಇಲ್ಲ. ದೇಶದಾದ್ಯಂತ ಹರಡಿರುವ ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ತಲೆಕೆಡಿಸಿಕೊಳ್ಳುವ ಸಂಸ್ಥೆ ಸ್ಟೀಮ್ ಕುಕ್ಕಿಂಗ್ ಪದ್ಧತಿಯ ಮೂಲಕ ಮಕ್ಕಳಿಗೆ ಮಿಡ್ ಡೇ ಮೀಲ್ಸ್ ನೀಡುತ್ತಿದೆ. ಈಗಿರುವ ತುರ್ತು ಪರಿಸ್ಥಿತಿಯಿಂದಾಗಿ ದೇಶದ ಜನ ಕಕ್ಕಾಬಿಕ್ಕಿಯಾಗಿದೆ, ಈ ಸಂಸ್ಥೆ 2005ರಲ್ಲೇ ಎಲ್‌ಪಿಜಿ ಸಿಲಿಂಡರ್ ಬಳಕೆಗೆ ಗುಡ್‌ಬೈ ಹೇಳಿರುವ ಈ ದೇಶದ ಮೊದಲ ಕಮ್ಯುನಿಟಿ ಕ್ಲೌಡ್ ಕಿಚನ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಜನರ ಅಡುಗೆ ಹೇಗೆ ಸಾಧ್ಯ?
ಇಲ್ಲಿ ಕಸದ ವಸ್ತುಗಳಿಂದ ತಯಾರಿಸಲಾದ ಬ್ರಿಕೆಟ್ಸ್ ಬಳಸಿ ಅಡುಗೆ ಮಾಡಲಾಗುತ್ತಿದೆ. ಹಿಂದೆ 60 ಸಿಲಿಂಡರ್ ಹಾಗೂ ಸುಮಾರು 400 ಲೀಟರ್ ಲೀಟರ್ ಡಿಸೆಲ್ ಅಗತ್ಯ, ಈಗ ಪರಿಸರ ಸ್ನೇಹಿ ವಿಧಾನದಿಂದ ಅಡುಗೆ ನಡೆಯುತ್ತಿದೆ. ಇದೀಗ ಪ್ರತಿ ದಿನ 70 ಸಾವಿರ ಮಕ್ಕಳಿಗೆ ಮಿಡ್ಡೇ ಮೀಲ್ಸ್ ನೀಡುವುದರ ಜೊತೆಗೆ ನಗರದ 10 ಕಡೆಗಳಲ್ಲಿ ಅನ್ನದಾನವೂ ನಡೆಯುತ್ತಿದೆ. ಫಾಸಿಲ್ ಫ್ಯೂಯಲ್ ಉಚಿತ ಅಡುಗೆ ವ್ಯವಸ್ಥೆ ಮೂಲಕ ಅದಮ್ಯ ಚೇತನ ಸಂಸ್ಥೆ ಸದ್ಯದ ಗ್ಯಾಸ್ ಬಿಕ್ಕಟ್ಟಿನ ಸಮಯದಲ್ಲಿ ಎಲ್ಲರಿಗೂ ಮಾದರಿಯಾಗಿದೆ.
ಇದನ್ನೂ ಓದಿ ಬೆಂಗಳೂರಿನಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ: ತೇಜಸ್ವಿ ಸೂರ್ಯ ಮಧ್ಯ ಪ್ರವೇಶ!
ಏನಿದು ಬ್ರಿಕೆಟ್ಸ್?
ಬ್ರಿಕೆಟ್ಸ್ (ಬ್ರಿಕ್ವೆಟ್ಸ್) ಎಂಬುದು ಮರದ ಪುಡಿ, ಕೃಷಿ ತ್ಯಾಜ್ಯ (ನೆಲ್ಲಿಕಾಯಿ ಚಿಪ್ಪು, ಕಡಲೆಕಾಯಿ) ಸಿಪ್ಪೆ ಅಥವಾ ಕಲ್ಲಿದ್ದಲು ಪುಡಿಯಿಂದ ತಯಾರಿಸಿದ ಇಂಧನ ಇಟ್ಟಿಗೆ ವಸ್ತು. ಇವು ಪರಿಸರ ಸ್ನೇಹಿಯಾಗಿರುವುದರ ಜೊತೆಗೆ ಕಡಿಮೆ ಹೊಗೆ ಮತ್ತು ಹೆಚ್ಚಿನ ಶಾಖವನ್ನು ನೀಡುವ ಪರ್ಯಾಯ ಇಂಧನ ಮೂಲ ಸೌಲಭ್ಯ. ಇವುಗಳನ್ನು ಉದ್ಯಮಗಳಲ್ಲಿ, ಅಡುಗೆಗೆ ಹೆಚ್ಚಾಗಿ ಬಳಸಲಾಗುತ್ತದೆ. ಇದೇ ಕ್ರಮವನ್ನು ದೇಶದ ವಿವಿಧ ಹೋಟೆಲ್‌ಗಳು, ಪಿಜಿಗಳು ಅಳವಡಿಸಿಕೊಂಡರೆ ಸಧ್ಯದ ಪರಿಸ್ಥಿತಿ ಎದುರಿಸಲು ಸಹಾಯವಾಗುತ್ತದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.