‘ಉರಿ’ ಸಿನಿಮಾನಲ್ಲೇ ಇದೆ ‘ಧುರಂಧರ್’ ಸಿನಿಮಾದ ಹಿಂಟ್

‘ಉರಿ’ ಸಿನಿಮಾನಲ್ಲೇ ಇದೆ ‘ಧುರಂಧರ್’ ಸಿನಿಮಾದ ಹಿಂಟ್


'ಉರಿ' ಸಿನಿಮಾದಲ್ಲೇ ಇದೆ 'ಧುರಂಧರ' ಸಿನಿಮಾದ ಹಿಂಟ್

‘ಧುರಂಧರ 2’ (ಧುರಂಧರ 2) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಧುರಂಧರ’ ಸಿನಿಮಾ ಭಾರಿ ಹಿಟ್ ಆದ ಕಾರಣ ‘ಧುರಂಧರ 2’ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳಿವೆ. ಸಿನಿಮಾದ ನಾಯಕ ‘ಹಂಝಾ’ ಮುಂದೇನು ಮಾಡುತ್ತಾನೆ ಎಂಬುದು ಕುತೂಹಲಕ್ಕೆ ಕಾರಣ. ಸಿನಿಮಾವನ್ನು ಆದಿತ್ಯ ಧರ್ರ್ ನಿರ್ದೇಶಿಸಿದ್ದು, ‘ಧುರಂಧರ’ಗೆ ಮುಂದೆ ಆದಿತ್ಯ ನಿರ್ದೇಶಿಸಿದ್ದು ಒಂದೇ ಫೀಚರ್ ಫಿಲಂ ಅದುವೇ ‘ಉರಿ; ದಿ ಸರ್ಜಿಕಲ್ ಸ್ಟ್ರೈಕ್’. 2019 ರಲ್ಲಿ ಬಿಡುಗಡೆ ಆಗಿದ್ದ ‘ಉರಿ’ ಸಿನಿಮಾ ದೊಡ್ಡ ಹಿಟ್ ಆಗುತ್ತಿದೆ. ಆದರೆ ಆ ಸಿನಿಮಾದಲ್ಲಿಯೇ ಅವರು ‘ಧುರಂಧರ’ ಸಿನಿಮಾದ ಸ್ಪಷ್ಟ ಸುಳಿವು ನೀಡಿದ್ದರು.

‘ಉರಿ’ ಸಿನಿಮಾ, ಭಾರತೀಯ ಸೇನೆಯು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಮಾಡಿದ್ದ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯ ಸಿನಿಮಾ ಆಗಿದೆ. ಸಿನಿಮಾದಲ್ಲಿ, ಭಯೋತ್ಪಾದಕರು ಉರಿಯಲ್ಲಿ ಭಾರತೀಯ ಸೈನಿಕರ ಮೇಲೆ ದಾಳಿ ಮಾಡಿದ ಬಳಿಕ ಮೇಜರ್ ವಿಹಾನ್ ಸಿಂಗ್ ಶೇರ್ಗಿಲ್ (ವಿಕ್ಕಿ ಕೌಶಲ್) ‘ಸರ್ಜಿಕಲ್ ಸ್ಟ್ರೈಕ್’ಗಾಗಿ ಸಿದ್ಧತೆ ನಡೆಸಲು ಪ್ರಾರಂಭಿಸುತ್ತಾರೆ. ಆಗ ಫ್ಲೈಟ್ ಲೆಫ್ಟಿನೆಂಟ್ ಸೀರತ್ ಕೌರ್ (ಕೃತಿ ಕುಲ್ಹಾರಿ ) ಜೊತೆಗೆ ಮಾತನಾಡುತ್ತಾ, ‘ನಿಮ್ಮ ಕುಟುಂಬದವರು ಯಾರಾದರೂ ಸೈನ್ಯದಲ್ಲಿದ್ದಾರಾ? ಎಂದು ಕೇಳುತ್ತಾರೆ. ಆಗ ಲೆಫ್ಟಿನೆಂಟ್ ಸೀರತ್ ಕೌರ್, ‘ನನ್ನ ಪತಿ ಜಸ್ಕೀರತ್ ಸಿಂಗ್ ರಂಗಿ ಸೈನ್ಯದಲ್ಲಿದ್ದರು, ನೌಶೇರಾ ಸೆಕ್ಟರ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದರು’ ಎನ್ನುತ್ತಾರೆ.

‘ಧುರಂಧರ’ ಸಿನಿಮಾದಲ್ಲಿ ನಾಯಕ ರಣ್ವೀರ್ ಸಿಂಗ್, ಪಾಕಿಸ್ತಾನದಲ್ಲಿ ತನ್ನ ಹೆಸರನ್ನು ‘ಹಂಝಾ ಅಲಿ’ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರ ನಿಜವಾದ ಹೆಸರು ಜಸ್ಕೀರತ್ ಸಿಂಗ್ ರಂಗಿ ಎಂದಿಲ್ಲ. ಅದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಈ ಲಿಂಕ್ ಅನ್ನು ಜೋಡಿಸಿ ನೋಡುವುದಾದರೆ ಉರಿ ಘಟನೆ ನಡೆದಿರುವುದು 2016 ರಲ್ಲಿ ಆದರೆ ಅದಕ್ಕೆ ಮುಂಚೆಯೇ ಜಸ್ಕರತ್ ಸಿಂಗ್ ರಂಗಿ ನಿಧನರಾದರು. ಅದೂ ಪಾಕಿಸ್ತಾನದಲ್ಲಿ ಅಲ್ಲ ಬದಲಿಗೆ ಭಾರತದಲ್ಲಿ. ಅಂದರೆ ರಣ್ವೀರ್ ಸಿಂಗ್ ಪಾತ್ರ ಪಾಕಿಸ್ತಾನದಲ್ಲಿ ತನ್ನ ಮಿಷನ್ ಮುಗಿಸಿ ಭಾರತಕ್ಕೆ ವಾಪಸ್ಸಾಗಿ ಇಲ್ಲಿ ಭಯೋತ್ಪಾದಕರೊಟ್ಟಿಗೆ ಹೋರಾಡಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ:’ಧುರಂಧರ 2′ ಅಬ್ಬರ: 3.50 ಲಕ್ಷ ಟಿಕೆಟ್ ಮಾರಾಟ, ಗಳಿಸಿದ ಮೊತ್ತ ಎಷ್ಟು?

ಹಂಝಾ ಪಾತ್ರದ ಬಗ್ಗೆ ಸಾಕಷ್ಟು ಕುತೂಹಲಕ್ಕೂ ಇದೆ. ಇದೀಗ ಬಿಡುಗಡೆ ಆಗಲಿರುವ ‘ಧುರಂಧರ 2’ ಸಿನಿಮಾದಲ್ಲಿ ಹಂಝಾ ಪಾತ್ರ ಪಾಕಿಸ್ತಾನಕ್ಕೆ ಹೋಗುವ ಮುಂಚಿನ ಕಥೆಯನ್ನು ತೋರಿಸಲಾಗುತ್ತಿದೆ. ‘ಧುರಂಧರ 2’ ಸಿನಿಮಾದಲ್ಲಿ ರಣವೀರ್ ಸಿಂಗ್ ಪಾತ್ರ ಭಾರತದಲ್ಲಿ ಇದ್ದಾಗಿನ ಸಾಹಸಗಳು, ಅವರ ಪಾತ್ರದ ಹಿನ್ನೆಲೆ, ಮದುವೆ ದೃಶ್ಯಗಳನ್ನು ತೋರಿಸುವ ಸಾಧ್ಯತೆ ಇದೆ. ಜೊತೆಗೆ, ಹಂಝಾನ ಮುಂದಿನ ಹೆಜ್ಜೆ ಏನಾಗಿರಲಿದೆ ಎಂಬುದನ್ನು ತೋರಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *