Headlines

ರಾಮನಗರ: ಅತ್ತೆ ಸೊಸೆ ಜಗಳ: 19 ವರ್ಷದ ಗರ್ಭಿಣಿ ಸೊಸೆ ನಯನಾ ಸಾವಿಗೆ ಶರಣು

ರಾಮನಗರ: ಅತ್ತೆ ಸೊಸೆ ಜಗಳ: 19 ವರ್ಷದ ಗರ್ಭಿಣಿ ಸೊಸೆ ನಯನಾ ಸಾವಿಗೆ ಶರಣು

ರಾಮನಗರ: ಅತ್ತೆ ಸೊಸೆ ಜಗಳ: 19 ವರ್ಷದ ಗರ್ಭಿಣಿ ಸೊಸೆ ನಯನಾ ಸಾವಿಗೆ ಶರಣು

ರಾಮನಗರ ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದ ಮನನೊಂದು 19 ವರ್ಷದ ಗರ್ಭಿಣಿ ನಯನಾ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾರೆ.

ರಾಮನಗರ: ಕೌಟುಂಬಿಕ ಕಲಹದ ಹಿನ್ನೆಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಗರ್ಭಿಣಿ ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ರಾಮನಗರ ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ನಡೆದಿದೆ.

19 ವರ್ಷದ ನಯನ ಸಾವಿಗೆ ಶರಣಾದ ಗರ್ಭಿಣಿ. ಒಂದೂವರೆ ವರ್ಷದ ಹಿಂದೆ ನಾಗರಾಜು ಎಂಬುವವರ ಜೊತೆ ಈಕೆಯ ಮದುವೆ ಮಾಡಿಸಲಾಗಿತ್ತು..

ಮೃತ ನಯನಾ 5 ತಿಂಗಳ ಗರ್ಭಿಣಿಯಾಗಿದ್ದರು. ಇತ್ತೀಚೆಗೆ ಅತ್ತೆ, ಸೊಸೆ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಪದೇ ಪದೇ ಸಣ್ಣಪುಟ್ಟ ವಿಚಾರಗಳಿಗೆ ಅತ್ತೆ ಸೊಸೆ ಮಧ್ಯೆ ಗಲಾಟೆ ನಡೆಯುತ್ತಿತ್ತು.

ಇದೇ ವಿಚಾರವಾಗಿ ಮನನೊಂದು ಗರ್ಭಿಣಿ ನಯನಾ ರಾತ್ರಿ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ನಯನ ಸಾವಿನ ಹಿನ್ನೆಲೆ ಆಕೆಯ ಪತಿ ನಾಗರಾಜು ಹಾಗೂ ಮಾವ ಜಯರಾಮ್ ಎಂಬುವವರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Source link

Leave a Reply

Your email address will not be published. Required fields are marked *