
ಟೀಮ್ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ವಿರುದ್ಧ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ದೂರು ದಾಖಲಾಗಿದೆ. ಮಾರ್ಚ್ 8 ರಂದು ನಡೆದ ಟಿ20 ಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಗೆಲುವು ದಾಖಲಿಸಿತ್ತು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ರಾಷ್ಟ್ರಧ್ವಜವನ್ನು ಬಳಸಿದ ರೀತಿ ವಿವಾದಕ್ಕೆ ಕಾರಣವಾಯಿತು.
ದೂರು ನೀಡಿದ್ದು ಯಾರು?
ಫೈನಲ್ ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದ್ದಾರೆ. ಈ ಹಿನ್ನಲೆಯಲ್ಲಿ ಪುಣೆಯ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದ ವಕೀಲ ವಾಜಿದ್ ಖಾನ್.
ಪಾಂಡ್ಯ ವಿರುದ್ಧದ ಆರೋಪವೇನು?
ಹಾರ್ದಿಕ್ ಪಾಂಡ್ಯ ರಾಷ್ಟ್ರಧ್ವಜವನ್ನು ಮೈಮೇಲೆ ಸುತ್ತಿಕೊಂಡು ಮೈದಾನದಲ್ಲಿ ಮಲಗಿದ್ದಾರೆ. ಜೊತೆಗೆ
ಸಂಭ್ರಮಾಚರಣೆಯ ವೇಳೆ ತಮ್ಮ ಗೆಳತಿ ಮಹಿಕಾ ಶರ್ಮಾ ಜೊತೆಗೆ ಪೋಡಿಯಂ ಮೇಲೆ ಮಲಗಿದ್ದಾಗಲೂ ರಾಷ್ಟ್ರಧ್ವಜವನ್ನು ಮೈಮೇಲೆ ಧರಿಸಿದ್ದರು. ಇದು ಧ್ವಜಕ್ಕೆ ಮಾಡಿದ ಅಗೌರವ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಾಷ್ಟ್ರ ಧ್ವಜ ಸುತ್ತಿ ಮಲಗಿದ್ದ ಹಾರ್ದಿಕ್ ಪಾಂಡ್ಯ
ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ (1971) ರ ಅಡಿಯಲ್ಲಿ, ರಾಷ್ಟ್ರಧ್ವಜವನ್ನು ವಸ್ತ್ರದಂತೆ ಬಳಸಬಾರದು ಮತ್ತು ಅದು ನೆಲಕ್ಕೆ ತಾಗಿಸಬಾರದು ಎಂಬ ನಿಯಮವಿದೆ. ಪಾಂಡ್ಯ ಈ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬುದು ದೂರುದಾರರ ವಕೀಲ ವಾಜಿದ್ ಖಾನ್.
ಸದ್ಯ ಪುಣೆ ದೂರನ್ನು ಸ್ವೀಕರಿಸಿದ್ದು, ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸುತ್ತಿದೆ. ದೂರಿನ ಆಧಾರದ ಮೇಲೆ ಎಫ್‌ಐಆರ್ (ಎಫ್‌ಐಆರ್) ದಾಖಲಿಸುವ ಬಗ್ಗೆ ಕಾನೂನು ಬಗ್ಗೆ ಸಲಹೆ ಪಡೆಯುತ್ತಿದ್ದಾರೆ.
ಈ ಆರೋಪ ಸಾಬೀತಾದರೆ, ರಾಷ್ಟ್ರೀಯ ಗೌರವಕ್ಕೆ ಅವಮಾನ ಕಾಯ್ದೆಯಡಿ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶವಿದೆ.
ಭಾರತದ ರಾಷ್ಟ್ರಧ್ವಜದ ನಿಯಮಗಳು:
- ನೆಲಕ್ಕೆ ತಾಗಬಾರದು: ಧ್ವಜವು ಎಂದಿಗೂ ನೆಲಕ್ಕೆ ಅಥವಾ ನೀರಿಗೆ ತಾಗಬಾರದು.
- ತಲೆಕೆಳಗಾಗಿ ಹಾರಿಸಬಾರದು: ಕೇಸರಿ ಬಣ್ಣ ಯಾವಾಗಲೂ ಮೇಲಿರಬೇಕು. ಧ್ವಜವನ್ನು ತಲೆಕೆಳಗಾಗಿ ಪ್ರದರ್ಶಿಸುವುದು ಅಪರಾಧ.
- ಹರಿದ ಧ್ವಜ: ಹರಿದ ಅಥವಾ ಬಣ್ಣಗೆಟ್ಟ ಧ್ವಜವನ್ನು ಹಾರಿಸಬಾರದು. ಅಂತಹ ಧ್ವಜವನ್ನು ಗೌರವಯುತವಾಗಿ (ಖಾಸಗಿಯಾಗಿ ಸುಡುವ ಮೂಲಕ) ವಿಲೇವಾರಿ ಮಾಡಬೇಕು.
- ಉಡುಪಾಗಿ ಬಳಸಬಾರದು: ರಾಷ್ಟ್ರಧ್ವಜವನ್ನು ಯಾವುದೇ ರೀತಿಯ ಸಮವಸ್ತ್ರ, ಉಡುಪು ಅಥವಾ ಮೈಮೇಲೆ ಸುತ್ತಿಕೊಳ್ಳುವ ವಸ್ತ್ರವಾಗಿ ಬಳಸಬಾರದು.
- ಕುಷನ್ ಅಥವಾ ಪರ್ದೆ: ಧ್ವಜವನ್ನು ದಿಂಬುಗಳು, ಕರವಸ್ತ್ರಗಳು ಅಥವಾ ಯಾವುದೇ ಚಿಹ್ನೆಗಳ ಮೇಲೆ ಮುದ್ರಿಸಬಾರದು ಅಥವಾ ಅಲಂಕಾರಕ್ಕೆ ಬಳಸಬಾರದು.
- ಸೊಂಟದ ಕೆಳಗೆ: ಧ್ವಜದ ಚಿತ್ರವಿರುವ ಯಾವುದೇ ವಸ್ತುವನ್ನು ಸೊಂಟದ ಕೆಳಗೆ ಧರಿಸಿರುವ ವಸ್ತು.
- ಬರವಣಿಗೆ: ಧ್ವಜದ ಮೇಲೆ ಯಾವುದೇ ರೀತಿಯ ಅಕ್ಷರಗಳನ್ನು ಬರೆಯಬಾರದು ಅಥವಾ ಚಿತ್ರ ಬಿಡಿಸಬಾರದು.
- ಜಾಹೀರಾತು: ಧ್ವಜವನ್ನು ಯಾವುದೇ ವಾಣಿಜ್ಯ ಉದ್ದೇಶದ ಜಾಹೀರಾತಿಗೆ ಬಳಸಲಾಗಿದೆ.
- ವಸ್ತುಗಳನ್ನು ಸುತ್ತುವುದು: ಧ್ವಜದ ಒಳಗೆ ಯಾವುದೇ ವಸ್ತುಗಳನ್ನು ಇಟ್ಟು ಕಟ್ಟಿ ಸಾಗಿಸಬಾರದು (ಹೂವಿನ ದಳಗಳು, ಧ್ವಜಾರೋಹಣದ ಸಮಯದಲ್ಲಿ ಮಾತ್ರ ಅನುಮತಿ).
ಶಿಕ್ಷೆಯ ಪ್ರಮಾಣ:
ರಾಷ್ಟ್ರಧ್ವಜಕ್ಕೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಿದರೆ ಅಥವಾ ನಿಯಮ ಉಲ್ಲಂಘಿಸಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ, ಅಥವಾ ಎರಡನ್ನೂ ವಿಧಿಸಲಾಗಿದೆ.
ಇದನ್ನೂ ಓದಿ: ಫೋನ್ ರಿಪೇರಿಯಿಂದ ಬಯಲಾಗಿತ್ತು ಪಾಕ್ ಆಟಗಾರರ ಕಳ್ಳಾಟ!
ಪುಣೆ ಪೊಲೀಸರಿಗೆ ಸಲ್ಲಿಕೆಯಾಗಿರುವ ದೂರಿನಲ್ಲಿ ಮುಖ್ಯವಾಗಿ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971’ ರ ಅಡಿಯಲ್ಲಿ ಕ್ರಮ ಜರುಗಿಸಲು ಕೋರಲಾಗಿದೆ. ಈ ಸೆಕ್ಷನ್ ಅಡಿಯಲ್ಲಿ ದೋಷ ಕಂಡುಬಂದರೆ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ, ಅಥವಾ ಎರಡನ್ನೂ ವಿಧಿಸಬಹುದು.