
ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ‘ರಾಮಾಯಣ’ ಕೂಡ ಒಂದು. ಈ ಚಿತ್ರವನ್ನು ಯಾವ ರೀತಿ ಮಾಡಿರಬಹುದು ಎಂಬ ಕುತೂಹಲ ಮೂಡಿದೆ. ಈ ವರ್ಷದ ದೀಪಾವಳಿಗೆ ಸಿನಿಮಾ ರಿಲೀಸ್ ಆಗಲಿದೆ. ಈ ಡಬ್ಬಿಂಗ್ ಕೆಲಸಗಳನ್ನು ಯಶ್ ಇತ್ತೀಚೆಗೆ ಪೂರೈಸಿದ್ದರು. ಈಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಹೀಗಿರುವಾಗಲೇ ಚಿತ್ರದ ಸೀಕ್ವೆಲ್ ಶೂಟಿಂಗ್ ಶುರುವಾಗಿದೆ.
ನಿತೇಶ್ ತಿವಾರಿ ಅವರು ‘ರಾಮಾಯಣ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. 2026ರ ದೀಪಾವಳಿಗೆ ಒಂದು ಭಾಗ ಹಾಗೂ 2027ರ ದೀಪಾವಳಿಗೆ ಎರಡನೇ ಭಾಗವನ್ನು ರಿಲೀಸ್ ಮಾಡುವ ಆಲೋಚನೆ ಇದೆ. ಈಗ ಸಿನಿಮಾದ ಎರಡನೇ ಭಾಗಕ್ಕೆ ಶೂಟಿಂಗ್ ಆರಂಭವಾಗಿದೆ. ರಣಬೀರ್ ಕಪೂರ್ ಸದ್ಯ ಸೆಟ್ ನಲ್ಲಿ ಇದ್ದು, ಶೀಘ್ರವೇ ಯಶ್ ಅವರ ಭಾಗವಾಗಲಿದ್ದಾರೆ.
‘ರಾಮಾಯಣ’ ಚಿತ್ರದ ಮೊದಲ ಭಾಗದಲ್ಲಿ ಯಶ್ ಅವರ ಭಾಗ ಕಡಿಮೆ ಇರಲಿದೆ. ಯಶ್ ರಾವಣನ ಪಾತ್ರ ಮಾಡುತ್ತಿದ್ದಾರೆ. ರಾವಣನ ಎಂಟ್ರಿಯೇ ಲೇಟ್. ಜೊತೆಗೆ ಅರ್ಧ ರಾಮಾಯಣವನ್ನು ಮಾತ್ರ ಮೊದಲ ಭಾಗದಲ್ಲಿ ಹೇಳುತ್ತಿದ್ದರು, ಎರಡನೇ ಭಾಗದಲ್ಲಿ ಯಶ್ ಅವರ ಪಾತ್ರದ ಅವಧಿ ಹೆಚ್ಚಲಿದೆ. ಹೀಗಾಗಿ, ಅವರು ಹೆಚ್ಚು ಶೂಟ್ನ ಭಾಗವಾಗಲಿದ್ದಾರೆ.
ರಣಬೀರ್ ಶೂಟಿಂಗ್ ನಲ್ಲಿ ಭಾಗಿ ಆಗುತ್ತಿದೆ. ವೀಕೆಂಡ್ ವೇಳೆಗೆ ಯಶ್, ಸನ್ನಿ ಡಿಯೋಲ್ ಮೊದಲಾದವರು ಸೆಟ್ಗೆ ತೆರಳುವ ಸಾಧ್ಯತೆ ಇದೆ.ಯಶ್ ಅವರ ರಾವಣನ ಲುಕ್ನಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ.
ರಾಮನಾಗಿ ರಣಬೀರ್ ಕಪೂರ್, ಸೀತಾ ಮಾತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ. ಎರಡನೇ ಭಾಗದಲ್ಲಿ ಶ್ರೀಲಂಕಾದ ಕಥೆ ಇರಲಿದೆ. ಅದಕ್ಕಾಗಿ ದೊಡ್ಡ ದೊಡ್ಡ ಸೆಟ್ ನಿರ್ಮಾಣ ಮುಂಬೈ ಸ್ಟುಡಿಯೋದಲ್ಲಿ ಆಗಿದೆ.
ಇದನ್ನೂ ಓದಿ: ಬೆಂಗಳೂರಿಗೆ ಆಗ ಯಶ್ ಬಂದು ಹೋಗ್ತಿದ್ರು ಯಾರಿಗೂ ಕಾಣಿಸದೆ ಇದ್ದಿದ್ದು ಹೇಗೆ?
ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಜೂನ್ ನಲ್ಲಿ ರಿಲೀಸ್ ಆಗಲಿದೆ. ಇದಾದ ಕೆಲವು ತಿಂಗಳ ಬಳಿಕ ‘ರಾಮಾಯಣ’ ತೆರೆಗೆ ಬರಲಿದೆ. ಯಾವ ರೀತಿಯಲ್ಲಿ ಸಿನಿಮಾ ಇರಲಿದೆ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.