Kitchen Hacks Kannada: ಹಿಂದಿನ ಕಾಲದಲ್ಲಿ ಒರಳಿನಲ್ಲಿ ರುಬ್ಬಿದ ಚಟ್ನಿ ಬಲು ರುಚಿ. ಆದರೆ ಇಂದಿನ ವೇಗದ ಬದುಕಿನಲ್ಲಿ ಅದೆಲ್ಲಾ ಕನಸಿನ ಮಾತು. ಆದರೆ ಅದೇ ಸಾಂಪ್ರದಾಯಿಕ ರುಚಿಯನ್ನು ಉಳಿಸಿಕೊಂಡು, ಆಧುನಿಕ ವೇಗಕ್ಕೆ ತಕ್ಕಂತೆ ಚಟ್ನಿ ಮಾಡುವುದು ಹೇಗೆ? ಇಲ್ಲಿದೆ ಸುಲಭ ಉಪಾಯ!

ಬೆಳಗ್ಗೆ ಅರ್ಜೆಂಟಿದ್ದಾಗ ದೋಸೆ ಅಥವಾ ಇಡ್ಲಿಗೆ ಚಟ್ನಿ ಮಾಡಲು ಮಿಕ್ಸಿಯಲ್ಲಿ ಹಾಕಿ ರುಬ್ಬೋದು ಅತಿ ದೊಡ್ಡ ಕೆಲಸ ಅನಿಸುತ್ತದೆಯೇ? ಅಥವಾ ಸಮಯದ ಕೊರತೆಯೇ? ಅಂತಹ ಸಮಯದಲ್ಲಿ ಈ ಹಸಿರು ಚಟ್ನಿ ಮಾಡಿಟ್ಟುಕೊಳ್ಳಿ. ಇದನ್ನು ಒಮ್ಮೆ ಮಾಡಿಟ್ಟುಕೊಂಡರೆ ಸಾಕು. ಅದ್ಹೇಗೆ ಸಾಧ್ಯ? ಅದು ಈ ಬೇಸಿಗೆಯಲ್ಲಿ ಅಂತೀರಾ? ಇಲ್ಲಿದೆ ನೋಡಿ ಮಾಹಿತಿ.

ತಾಜಾ ಕೊತ್ತಂಬರಿ ಮತ್ತು ಪುದೀನಾ ಎಲೆಗಳು.ಖಾರಕ್ಕೆ ಹಸಿಮೆಣಸಿನಕಾಯಿ ಮತ್ತು ಶುಂಠಿ.ಗಟ್ಟಿಯಾಗಲು ಹುರಿಗಡಲೆ (ಪುಟಾಣಿ)ರುಚಿಗೆ ಉಪ್ಪು ಮತ್ತು ಚಾಟ್ ಮಸಾಲ.

ಮೊದಲು ಸೊಪ್ಪನ್ನು ಚೆನ್ನಾಗಿ ತೊಳೆದು, ಕಾಟನ್ ಬಟ್ಟೆಯ ಮೇಲೆ ಹರಡಿ. ಅದರಲ್ಲಿರುವ ನೀರೆಲ್ಲವೂ ಪೂರ್ತಿಯಾಗಿ ಆರಬೇಕು.ಈ ಹಂತ ಬಹಳ ಮುಖ್ಯ. ಸೊಪ್ಪು, ಹಸಿಮೆಣಸಿನಕಾಯಿ ಮತ್ತು ಶುಂಠಿಯನ್ನು ನೆರಳಿನಲ್ಲಿಯೇ ಒಣಗಿಸಿ. ಬಿಸಿಲಿನಲ್ಲಿ ಒಣಗಿಸಿದರೆ ಚಟ್ನಿಯ ಬಣ್ಣ ಕಪ್ಪಾಗುವ ಸಾಧ್ಯತೆ ಇರುತ್ತದೆ.ಈ ಎಲ್ಲಾ ಒಣಗಿದ ಪದಾರ್ಥಗಳನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿ (ಜಾರ್‌ನಲ್ಲಿ ನೀರಿನ ಅಂಶವಿರಬಾರದು). ಜೊತೆಗೆ ಹುರಿಗಡಲೆ, ಉಪ್ಪು ಮತ್ತು ಚಾಟ್ ಮಸಾಲ ಸೇರಿಸಿ ನುಣ್ಣಗೆ ಪುಡಿ ಮಾಡಿ.

ಈಗ ಸಿದ್ಧವಾದ ಈ ಹಸಿರು ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ (Airtight Container) ಹಾಕಿ ಫ್ರಿಜ್‌ನಲ್ಲಿಟ್ಟರೆ ಎರಡು ತಿಂಗಳವರೆಗೆ ತಾಜಾವಾಗಿರುತ್ತದೆ.

ಯಾವಾಗ ನಿಮಗೆ ಚಟ್ನಿ ಬೇಕೋ ಆಗ ಒಂದು ಚಮಚ ಈ ಪುಡಿಯನ್ನು ಒಂದು ಕಪ್‌ಗೆ ಹಾಕಿ. ಅದಕ್ಕೆ ತಕ್ಕಷ್ಟು ನೀರು ಸೇರಿಸಿ ಮಿಕ್ಸ್ ಮಾಡಿ. ಕಡೆಗೆ ಎರಡು ಹನಿ ನಿಂಬೆ ರಸ ಸೇರಿಸಿದರೆ ಮಾರುಕಟ್ಟೆಯಲ್ಲಿ ಸಿಗುವ ತಾಜಾ ಹಸಿರು ಚಟ್ನಿಯ ರುಚಿ ನಿಮ್ಮ ಅಡುಗೆ ಮನೆಯಲ್ಲಿ ಇರುತ್ತದೆ!

ಬೆಳಗಿನ ಸಮಯ ಉಳಿತಾಯವಾಗುತ್ತದೆ.ಪ್ರಯಾಣ ಮಾಡುವಾಗ ಅಥವಾ ಹಾಸ್ಟೆಲ್‌ನಲ್ಲಿರುವವರಿಗೆ ವರದಾನ.ಯಾವುದೇ ಕೆಮಿಕಲ್ ಇಲ್ಲದೆ ಮನೆಯಲ್ಲೇ ತಯಾರಿಸಿಬಹುದಾದ ಆರೋಗ್ಯಕರ ವಿಧಾನವಿದು.

Source link