Headlines

ಹಾಲು ಉತ್ಪಾದಕರಿಗೆ ಯುಗಾದಿ ಗಿಫ್ಟ್​​: ಲೀಟರ್ ಹಾಲಿಗೆ ಪ್ರೋತ್ಸಾಹ ಧನ ಘೋಷಿಸಿದ ಬಮೂಲ್

ಹಾಲು ಉತ್ಪಾದಕರಿಗೆ ಯುಗಾದಿ ಗಿಫ್ಟ್​​: ಲೀಟರ್ ಹಾಲಿಗೆ ಪ್ರೋತ್ಸಾಹ ಧನ ಘೋಷಿಸಿದ ಬಮೂಲ್


ಹಾಲು ಉತ್ಪಾದಕರಿಗೆ ಯುಗಾದಿ ಗಿಫ್ಟ್: ಲೀಟರ್ ಹಾಲಿಗೆ ಪ್ರೋತ್ಸಾಹಧನ ಘೋಷಿಸಿದ ಬಮೂಲ್

ಬೆಂಗಳೂರು, ಮಾರ್ಚ್ 12: ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮುಲ್) ಲೀಟರ್ ಹಾಲಿಗೆ 1 ರೂ. ಪ್ರೋತ್ಸಾಹ ಧನ ಘೋಷಿಸಿದೆ. ಆ ಮೂಲಕ ಹಾಲು ಉತ್ಪಾದಕರಿಗೆ ಯುಗಾದಿ ಉಡುಗೊರೆ ನೀಡಲಾಗಿದೆ. ಸರ್ಕಾರದಿಂದಲೂ 5 ರೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಬಮೂಲ್ನಿಂದ ಯಾವುದೇ ತಾರತಮ್ಯ ಇಲ್ಲದೆ ಎಲ್ಲರಿಗೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗೆ ಹಾಲು ಹಾಕಿರುವವರಿಗೆ ಇದು ಲಭ್ಯವಿರುತ್ತದೆ.

ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದ್ದಾರೆ

ಇನ್ನು ಈ ಬಗ್ಗೆ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರು ಪ್ರತಿಕ್ರಿಯಿಸಿದ್ದಾರೆ, ಯಾವುದೇ ತಾರತಮ್ಯ ಇಲ್ಲದೆ ಬಮೂಲ್‌ನಿಂದ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ರಾಜ್ಯ ಸರ್ಕಾರವೂ 5 ರೂಪಾಯಿ ಪ್ರೋತ್ಸಾಹ ಧನ ಕೊಡುತ್ತಿದೆ. ರೈತರಿಂದ 59,39,78,492 ಲೀಟರ್ ಹಾಲು ಖರೀದಿಸಲಾಗಿದೆ. ಈ ಬಾರಿ 500 ಕೋಟಿ ಹೆಚ್ಚುವರಿ ಟರ್ನ್ ಮಾಡುವ ಗುರಿ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಮೂಲ್ ನೂತನ ಅಧ್ಯಕ್ಷರಾಗಿ ಡಿಕೆ ಸುರೇಶ್ ಆಯ್ಕೆ

ಕಾರ್ಮಿಕರಿಗೆ ಸುಮಾರು 6 ಕೋಟಿ ರೂಪಾಯಿ ಡಿಎ ಕೊಡಬೇಕು. ನಾವೂ ಸುಮಾರು 60 ಕೋಟಿ ರೂ ಲಾಭ ಗಳಿಸುವ ಮಟ್ಟಿಗೆ ಬಂದಿದ್ದೇವೆ. ಹೀಗಾಗಿ ಸಿಬ್ಬಂದಿಗೆ ಬಾಕಿ ಇದ್ದ ಹಣ ಕೊಡಲು ತೀರ್ಮಾನಿಸಲಾಗಿದೆ. ಗುತ್ತಿಗೆದಾರರಿಗೆ 5 ಸಾವಿರ ಬೋನಸ್ ಕೊಡುತ್ತೇವೆ. ಗುಣಮಟ್ಟದ ಹಾಲು ಕೊಡುವ ಗುರಿ ಇಟ್ಟುಕೊಂಡು ಕೆಲಸ ಮಾಡಿದ್ದೇನೆ ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.

ಮಾರುಕಟ್ಟೆ ಸೊರಿಕೆ ತಡೆದಿದ್ದೇವೆ. ತುಪ್ಪದ ಬೆಲೆ ಜಾಸ್ತಿ ಮಾಡಿದ್ದೇವೆ. ಪದಾರ್ಥ ಜಾಸ್ತಿ ಮಾರಾಟವಾಗುತ್ತಿದೆ. ಗುಣಮಟ್ಟ ಇದೆ. ಡೆಲ್ಲಿ ಮದರ್ ಡೈರಿಗೆ 2 ಲಕ್ಷ ಕೊಡ ಆಗಿತ್ತು. ದುಂದು ವೆಚ್ಚ ಕಡಿಮೆ ಮಾಡಿದ್ದೇವೆ. ಸಿಬ್ಬಂದಿ ಮತ್ತು ಮಾರುಕಟ್ಟೆ ಸುಧಾರಣೆ ಮಾಡದೆ, ಈ ಎಲ್ಲಾ ಕಾರಣಗಳಿಂದ ಲಾಭ ಇರುತ್ತದೆ.

ಸರ್ಕಾರಕ್ಕೆ ಮನವಿ

ಇನ್ನು ಕ್ಷೀರ ಭಾಗ್ಯಕ್ಕೆ 75 ಸಾವಿರ ಲೀಟರ್ ಪೌಡರ್ ಆಗಿ ಕನ್ವರ್ಟ್ ಮಾಡಿ ಕೊಡಲಾಗುತ್ತದೆ. ರಾಗಿ ಮಾಲ್ಟ್ ಜೊತೆ ಹಾಲು ಮಿಕ್ಸ್ ಮಾಡಿ ಕೂಡ ನಾವೂ ಕೊಡಲು ಸಿದ್ಧ. ಈ ಕುರಿತು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *