Headlines

ಹೆಣ್ಣನ್ನು ಸರಸಕೆ ಕರೆವ ಮುನ್ನ ಮೂತ್ರ ಕುಡಿದು ಪರೀಕ್ಷಿಸುವ ಗಂಡು: ಜಿರಾಫೆಯ ರೋಚಕ ಪ್ರಪಂಚ | Why Male Giraffes Taste The Females Urine Interesting Fact About This Animal Suc

ಹೆಣ್ಣನ್ನು ಸರಸಕೆ ಕರೆವ ಮುನ್ನ ಮೂತ್ರ ಕುಡಿದು ಪರೀಕ್ಷಿಸುವ ಗಂಡು: ಜಿರಾಫೆಯ ರೋಚಕ ಪ್ರಪಂಚ | Why Male Giraffes Taste The Females Urine Interesting Fact About This Animal Suc



ಹೆಣ್ಣನ್ನು ಸರಸಕೆ ಕರೆವ ಮುನ್ನ ಮೂತ್ರ ಕುಡಿದು ಪರೀಕ್ಷಿಸುವ ಗಂಡು: ಜಿರಾಫೆಯ ರೋಚಕ ಪ್ರಪಂಚ | Why Male Giraffes Taste The Females Urine Interesting Fact About This Animal Suc

ಗಂಡು ಜಿರಾಫೆಗಳು ಹೆಣ್ಣಿನೊಂದಿಗೆ ಸರಸವಾಡಲು ವಿಶಿಷ್ಟ ವಿಧಾನವನ್ನು ಅನುಸರಿಸುತ್ತವೆ. ಸಂಭೋ*ಗಕ್ಕೆ ಮುನ್ನ, ಹೆಣ್ಣು ಗರ್ಭಧರಿಸಲು ಅರ್ಹಳೇ ಎಂಬುದನ್ನು ಅದರ ಮೂತ್ರವನ್ನು ಕುಡಿದು ಪರೀಕ್ಷಿಸುತ್ತವೆ ಮತ್ತು ಹೆಣ್ಣಿನ ಒಪ್ಪಿಗೆಯನ್ನು ಪಡೆದೇ ಮುಂದಿನ ಕಾರ್ಯಕ್ಕೆ ಮುಂದಾಗುತ್ತವೆ.

ಪ್ರಾಣಿ- ಪಕ್ಷಿ ಪ್ರಪಂಚವೇ ಕುತೂಹಲವಾದದ್ದು. ಇದರ ಜೀವನಕ್ರಮಗಳನ್ನು ಅರಿಯುತ್ತಾ ಹೋದರೆ, ಒಂದೊಂದು ಪ್ರಾಣಿ, ಒಂದೊಂದು ಪಕ್ಷಿಯ ವಿಚಿತ್ರ, ಕೌತುಕಗಳು ತೆರೆಯುತ್ತವೆ. ಅಂಥದ್ದೇ ಒಂದು ಸ್ಟೋರಿ ಜಿರಾಫೆಯದ್ದು. ಜಿರಾಫೆಗಳಲ್ಲಿ ಹಲವಾರು ಜಾತಿಗಳಿವೆ. ಅದರಲ್ಲಿಯೂ ಆಫ್ರಿಕನ್ ಸವನ್ನಾದಲ್ಲಿ, ಬುಲ್ಸ್ ಎಂದು ಕರೆಯಲ್ಪಡುವ ಜಿರಾಫೆಯ ಸ್ಟೋರಿ ರೋಚಕವಾಗಿದೆ.

ಮೂಡ್​ ಬಂದಾಗ…

ಗಂಡು ಜಿರಾಫೆಗೆ ಸರಸದ ಮೂಡ್​ ಬಂದಾಗ ಹೆಣ್ಣನ್ನು ಹುಡುಕಿ ಹೋಗುತ್ತದೆ. ಆದರೆ ಪ್ರಾಣಿಗಳು ಮನುಷ್ಯನ ಹಾಗೆ ವಿಕೃತ ಜೀವಿಗಳಲ್ಲವಲ್ಲ. ಅವುಗಳಿಗೆ ಯಾವುದು ಸರಿ, ಯಾವುದು ತಪ್ಪು ಎನ್ನುವುದು ತಿಳಿದಿದೆ. ಯಾರ ಜೊತೆ ಲೈಂ*ಗಿಕ ಕ್ರಿಯೆ ನಡೆಸಬೇಕು ಎನ್ನುವುದು ಚೆನ್ನಾಗಿ ಗೊತ್ತಿದೆ. ಮನುಷ್ಯನಾದರೆ, ಈಗ ತಾನೆ ಹುಟ್ಟಿದ ಹಸುಗೂಸಿನಿಂದ ಹಿಡಿದು ವಯೋವೃದ್ಧೆಯವರೆಗೂ ರಾಕ್ಷಸನಂತೆ ಎರಗುವುದು ಇದೆ. ಆದರೆ ಪ್ರಾಣಿಗಳು ಹಾಗಲ್ಲ.

ಹೆಣ್ಣನ್ನು ಅರಸಿ ಹೋಗಿ…

ಅದಕ್ಕಾಗಿಯೇ ಗಂಡು ಜಿರಾಫೆ, ಹೆಣ್ಣನ್ನು ಅರಸಿ ಹೋಗುತ್ತದೆ. ಅದು ಪ್ರಾಪ್ತ ವಯಸ್ಕ ಆಗಿದ್ಯಾ, ಅದು ಸಂ*ಭೋಗಕ್ಕೆ ಅರ್ಹ ಇದೆಯಾ ಎನ್ನುವುದನ್ನು ಮೊದಲು ಪರೀಕ್ಷೆ ಮಾಡುತ್ತದೆ. ಬರೀ ಸಂಭೋಗಕ್ಕೆ ಮಾತ್ರವಲ್ಲ, ಆ ಸಂಭೋಗದಿಂದ ಅದು ಗರ್ಭ ಧರಿಸಲು ಸಾಧ್ಯವೇ ಎನ್ನುವುದನ್ನು ಮೊದಲು ಪರೀಕ್ಷೆ ಮಾಡುತ್ತದೆ. ಹೀಗೆ ಪರೀಕ್ಷೆ ಮಾಡುವ ವಿಧಾನ ಮಾತ್ರ ರೋಚಕವಾಗಿದೆ. ಮೊದಲು ಗಂಡು ಬಂದು ಹೆಣ್ಣಿನ ಹಿಂಭಾಗವನ್ನು ಒತ್ತುತ್ತದೆ. ಅಲ್ಲಿಂದ ದ್ರವ ಸುರಿದಾಗ ಅದನ್ನು ಕುಡಿದು ಟೆಸ್ಟ್​ ಮಾಡುತ್ತದೆ ಗಂಡು ಜಿರಾಫೆ. ಅದರ ರುಚಿಯ ಆಧಾರದ ಮೇಲೆ ಅದು ವಯಸ್ಸಿಗೆ ಬಂದಿದ್ಯೋ ಇಲ್ವೋ ಗೊತ್ತಾಗುತ್ತದೆ.

ಸರಸಕ್ಕೆ ಆಹ್ವಾನ

ಹೆಣ್ಣು ಸಂಭೋ*ಗಕ್ಕೆ ರೆಡಿಯಾಗಿದ್ದು, ಗರ್ಭ ಧರಿಸಲು ಅರ್ಹ ಎನ್ನಿಸಿದರೆ ಮಾತ್ರ ಅದು ತನ್ನ ಕೆಲಸ ಮುಂದುವರೆಸುತ್ತದೆ. ಅಷ್ಟಕ್ಕೂ ಹೀಗೆ ಮಾಡುವ ಮುನ್ನ ಇನ್ನೂ ಒಂದು ವಿಚಿತ್ರ ಸಂಭವಿಸುತ್ತದೆ. ಒಂದು ವೇಳೆ ಹೆಣ್ಣು ಜಿರಾಫೆ ಗರ್ಭ ಧರಿಸಲು ರೆಡಿ ಇದೆ ಎಂದು ಗೊತ್ತಾದ ತಕ್ಷಣ ಗಂಡು ಹೋಗಿ ಮೈಮೇಲೆ ಎರಗುವುದಿಲ್ಲ. ಬದಲಿಗೆ ಹೆಣ್ಣನ್ನು ತಳ್ಳುತ್ತದೆ. ಇದು ಒಂದು ರೀತಿಯಲ್ಲಿ ಸರಸಕ್ಕೆ ಬಾರೆ ಎನ್ನುವ ಸೂಚನೆ. ಆಗ ಹೆಣ್ಣು ಹೇಗೆ ಪ್ರತಿಕ್ರಿಯೆ ತೋರುತ್ತದೆ ಎನ್ನುವುದನ್ನು ಗಂಡು ಗಮನಿಸುತ್ತದೆ. ಆ ಬಳಿಕ ಅದು ಒಲಿದರೆ ಮುಂದಿನ ಕಾರ್ಯ ಮಾಡುತ್ತದೆ ಎನ್ನುವುದನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.



Source link

Leave a Reply

Your email address will not be published. Required fields are marked *