‘ಧುರಂಧರ್ 2’ ಬಿಡುಗಡೆಗೆ ಮುಂಚೆ ಮರು ಬಿಡುಗಡೆ ಆಯ್ತು ‘ಧುರಂಧರ್’

‘ಧುರಂಧರ್ 2’ ಬಿಡುಗಡೆಗೆ ಮುಂಚೆ ಮರು ಬಿಡುಗಡೆ ಆಯ್ತು ‘ಧುರಂಧರ್’


'ಧುರಂಧರ 2' ಬಿಡುಗಡೆಗೆ ಮುಂಚೆ ಮರು ಬಿಡುಗಡೆ ಆಯ್ತು 'ಧುರಂಧರ'

ರಣ್ವೀರ್ ಸಿಂಗ್ (ರಣವೀರ್ ಸಿಂಗ್) ನಟನೆಯ ‘ಧುರಂಧರ 2’ ಸಿನಿಮಾ ಬಿಡುಗಡೆ ಆಗುತ್ತಿದೆ. ಮಾರ್ಚ್ 19 ರಂದು ಸಿನಿಮಾ ರಿಲೀಸ್ ಆಗಲಿದೆ, ಮಾರ್ಚ್ 18 ರಂದು ಸಿನಿಮಾದ ಪ್ರೀಮಿಯರ್ ಶೋ ಆಗಲಿದೆ. ಸಿನಿಮಾದ ಬಿಡುಗಡೆಗೆ ಇನ್ನೂ ಒಂದು ವಾರ ಇರುವಾಗಲೇ ಸಿನಿಮಾದ ಮೊದಲ ಭಾಗ ‘ಧುರಂಧರ’ ಮರು ಬಿಡುಗಡೆ ಆಗಿದೆ. 2025ರ ಡಿಸೆಂಬರ್ ನಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದ್ದ ‘ಧುರಂಧರ’ ಸಿನಿಮಾ ಇದೀಗ ಮಾರ್ಚ್ 12 ರಂದು ಮರು ಬಿಡುಗಡೆ ಆಗಿದ್ದು, ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

‘ಧುರಂಧರ 2’ ಸಿನಿಮಾವನ್ನು ಸಜ್ಜುಗೊಳಿಸುವ ಉದ್ದೇಶದಿಂದ ‘ಧುರಂಧರ’ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡಲಾಗಿದೆ. ಸುಮಾರು 250 ಪರದೆಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ವಿದೇಶಗಳಲ್ಲಿ ವಿಶೇಷ ಅಮೆರಿಕ, ಕೆನಡಾಗಳಲ್ಲಿ ಮಾರ್ಚ್ 13 ರಿಂದ ‘ಧುರಂಧರ’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಉತ್ತರ ಅಮೇರಿಕಾದ ಒಂದರಲ್ಲೇ 185 ತೆರೆಯಲ್ಲಿ ಸಿನಿಮಾ ಬಿಡುಗಡೆ ಆಗುತ್ತಿರುವುದು ವಿಶೇಷ. ವಿಶ್ವದಾದ್ಯಂತ ಒಟ್ಟು 500 ತೆರೆಯಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಮರು ಬಿಡುಗಡೆ ಆಗುತ್ತಿರುವ ಸಿನಿಮಾ ಒಂದು ಇಷ್ಟು ದೊಡ್ಡ ಪ್ರಮಾಣದಲ್ಲಿ ರಿಲೀಸ್ ಆಗುತ್ತಿರುವುದು ಅಪರೂಪ.

ಇದನ್ನೂ ಓದಿ:’ಧುರಂಧರ’ ಬಳಿಕ ಹಾರರ್ ಸಿನಿಮಾಕ್ಕೆ ಕೈ ಹಾಕಿದ ರಣವೀರ್ ಸಿಂಗ್

ಅಭಿಮಾನಿಗಳು ಮೊದಲ ಭಾಗದ ರೋಮಾಂಚನಕಾರಿ ಕ್ಷಣಗಳನ್ನು ಮತ್ತೊಮ್ಮೆ ಬೆಳ್ಳಿತೆರೆಯ ಮೇಲೆ ಸವಿದು, ಕೆಲವೇ ದಿನಗಳ ಅಂತರದಲ್ಲಿ (ಮಾರ್ಚ್ 19) ಅದರ ಮುಂದುವರಿದ ಭಾಗವಾದ ‘ದಿ ರಿವೆಂಜ್’ ನೋಡುವ ಅವಕಾಶವನ್ನು ಈ ಮೂಲಕ ಕಲ್ಪಿಸಲಾಗಿದೆ. ‘ಧುರಂಧರ’ ಸಿನಿಮಾದ ಮುಂದಿನ ಭಾಗ ‘ಧುರಂಧರ 2’ ಆಗಿರುವ ಕಾರಣ ಚಿತ್ರದ ಕಥೆಯನ್ನು ಸ್ಮರಿಸಿಕೊಳ್ಳಲು ಇದು ಸಹಾಯ ಮಾಡಲಿದೆ. ಹಾಗೂ ‘ಧುರಂಧರ 2’ ಸಿನಿಮಾಕ್ಕೆ ಸಜ್ಜುಗೊಳಿಸಲಿದೆ.

ಎರಡು ಪಾರ್ಟ್‌ನಲ್ಲಿ ಬಿಡುಗಡೆ ಆಗುವ ಹಲವು ಸಿನಿಮಾಗಳು, ಎರಡನೇ ಭಾಗದ ಬಿಡುಗಡೆಗೆ ಮುಂಚೆ ಹೀಗೆ ಮೊದಲ ಪಾರ್ಟ್ ಅನ್ನು ರಿ-ರಿಲೀಸ್ ಮಾಡುತ್ತಾರೆ. ‘ಬಾಹುಬಲಿ’, ‘ಕೆಜಿಎಫ್’, ‘ಪುಷ್ಪ’ ಸಿನಿಮಾಗಳು ಸಹ ರಿ-ರಿಲೀಸ್ ಆಗಿದ್ದವು. ಈಗ ‘ಧುರಂಧರ’ ಸಿನಿಮಾ ಸಹ ಮರು ಬಿಡುಗಡೆ ಆಗುತ್ತಿದೆ. ‘ಧುರಂಧರ 2’ ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗುತ್ತಿದೆ. ಸಿನಿಮಾದ ಪ್ರೀಮಿಯರ್ ಶೋ ಮಾರ್ಚ್ 18ರಿಂದ ಪ್ರದರ್ಶನ ಕಾರ್ಯಕ್ರಮ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *