ಫೆಬ್ರುವರಿ 2026ರಲ್ಲಿ ರೀಟೇಲ್ ಹಣದುಬ್ಬರ ಶೇ. 3.21ಕ್ಕೆ ಏರಿಕೆ; ಆರ್​ಬಿಐ ಮಿತಿಯಲ್ಲಿ ಬೆಲೆ ಏರಿಕೆ

ಫೆಬ್ರುವರಿ 2026ರಲ್ಲಿ ರೀಟೇಲ್ ಹಣದುಬ್ಬರ ಶೇ. 3.21ಕ್ಕೆ ಏರಿಕೆ; ಆರ್​ಬಿಐ ಮಿತಿಯಲ್ಲಿ ಬೆಲೆ ಏರಿಕೆ


ಫೆಬ್ರುವರಿ 2026ರಲ್ಲಿ ರೀಟೇಲ್ ಹಣದುಬ್ಬರ ಶೇ. 3.21ಕ್ಕೆ ಏರಿಕೆ; ಆರ್ಬಿಐ ಮಿತಿಯಲ್ಲಿ ಬೆಲೆ ಏರಿಕೆ

ಜನವರಿ, ಮಾರ್ಚ್ 12: ಭಾರತದ ರೀಟೇಲ್ ಹಣದುಬ್ಬರ (ಚಿಲ್ಲರೆ ಹಣದುಬ್ಬರ) ಫೆಬ್ರುವರಿಯಲ್ಲಿ ಶೇ. 3.21ರಷ್ಟಿರುವುದು ದಾಖಲಾಗಿದೆ. ಜನವರಿಯಲ್ಲಿ ಹಣದುಬ್ಬರ ಶೇ. 2.74ರಷ್ಟಿತ್ತು. ಫೆಬ್ರುವರಿಯಲ್ಲಿ ಸ್ವಲ್ಪ ಮಟ್ಟಿಗೆ ಬೆಲೆ ಏರಿಕೆಯಾಗಿದೆ. ಶೇ. 3.2 ದರವು ಆರ್ ಬಿಐನ ಶೇ. 4ರ ಹಣದುಬ್ಬರ ಮಿತಿಯ ಗುರಿಯೊಳಗೆಯೇ ಇದೆ. ಗ್ರಾಮೀಣ ಭಾಗದಲ್ಲಿ ಫೆಬ್ರುವರಿಯಲ್ಲಿ ಹಣದುಬ್ಬರ ಶೇ. 3.37 ಇದ್ದರೆ, ನಗರ ಭಾಗದಲ್ಲಿ ಅದು ಶೇ. 3.02ರಷ್ಟಿದೆ.

ಗ್ರಾಹಕ ಆಹಾರ ಬೆಲೆ ಅನುಸೂಚಿ ಆಧಾರಿತವಾದ ಹಣದುಬ್ಬರವು ಜನವರಿಯಲ್ಲಿ ಶೇ. 2.13ರಷ್ಟಿತ್ತು. ಫೆಬ್ರುವರಿಯಲ್ಲಿ ಅದು ಶೇ. 3.47 ರಷ್ಟಾಗಿದೆ. ಆಹಾರ ಹಣದುಬ್ಬರದಲ್ಲಿ ಗ್ರಾಮ ಮತ್ತು ನಗರ ಭಾಗಗಳಲ್ಲಿ ಅಷ್ಟೇನೂ ವ್ಯತ್ಯಾಸವಿಲ್ಲ.

ಇದನ್ನೂ ಓದಿ: ಪೆಟ್ರೋಲ್, ಎಲ್ ಪಿಜಿ ಕೊರತೆ ಇಲ್ಲ: ಸಂಸತ್ ನಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ

ಫೆಬ್ರುವರಿಯಲ್ಲಿ ಅಧಿಕ ಹಣದುಬ್ಬರ ಕಂಡಿರುವ ಪ್ರಮುಖ ಸರಕುಗಳೆಂದರೆ ಚಿನ್ನ, ಬೆಳ್ಳಿ ಇತ್ಯಾದಿ ಅಮೂಲ್ಯ ವಸ್ತುಗಳು, ಹಾಗೂ ಕೆಲ ತರಕಾರಿಗಳು. ಬೆಳ್ಳಿ ಬೆಲೆ ಶೇ. 161ರಷ್ಟು ಹೆಚ್ಚಾಗಿದೆ. ಚಿನ್ನ, ಬೆಳ್ಳಿ, ಪ್ಲಾಟಿನಂ ಆಭರಣಗಳ ಬೆಲೆ ಶೇ. 48ರಷ್ಟು ಹೆಚ್ಚಿದೆ. ಕೊಬ್ಬರಿ ಬೆಲೆ ಶೇ. 46, ಟೊಮೆಟೋ ಶೇ. 45 ಮತ್ತು ಕೋಸು ಶೇ. 44ರಷ್ಟು ಬೆಲೆ ಇದೆ.

ಈ ಮೇಲಿನ ವಸ್ತುಗಳ ಬೆಲೆ ಏರಿಕೆಯು ವರ್ಷದ ಹಿಂದಿನ ಅವಧಿಯಲ್ಲಿ ಇದ್ದ ಬೆಲೆಗೆ ಹೋಲಿಸಲಾಗಿದೆ. ಜನವರಿಯ ಬೆಲೆಗೆ ಟಾಮೆಟೋ, ಬಣಿ, ಕೋಸು ತರಕಾರಿಗಳ ಬೆಲೆ ಶೇ. 10 ಹೆಚ್ಚು ತಗ್ಗಿದೆ. ಅತಿಹೆಚ್ಚು ಹಣದುಬ್ಬರ ಹೊಂದಿರುವ ಐದು ರಾಜ್ಯಗಳಲ್ಲಿ ತೆಲಂಗಾಣ, ರಾಜಸ್ಥಾನ, ಕೇರಳ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ಇವೆ.

ಇದನ್ನೂ ಓದಿ: ಯುದ್ಧವನ್ನು ನಿಲ್ಲಿಸಲು ಇರಾನ್ 3 ಷರತ್ತುಗಳು; ಭಾರತದ ಆರ್ಥಿಕತೆ ಏನು ಪರಿಣಾಮ? ಇಲ್ಲಿದೆ ಸಾಧ್ಯಾಸಾಧ್ಯತೆ

ಹಣದುಬ್ಬರ ಎಣಿಕೆ ಮಾಡುವ ಕೆಲ ಲೆಕ್ಕಾಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಅದರಲ್ಲಿ ಪ್ರಮುಖವಾದುದು ಬೇಸ್ ವರ್ಷವನ್ನು 2012 ರ ಬದಲಿಗೆ 2024 ಅನ್ನು ಮಾಡಿಕೊಳ್ಳಲಾಗಿದೆ. ಬೆಲೆ ಏರಿಕೆಗೆ ಪರಿಗಣಿಸಲಾಗುವ ಸರಕುಗಳ ಸಂಖ್ಯೆ 299 ರಿಂದ 358ಕ್ಕೆ ಏರಿದೆ. ಹೊಸ ಲೆಕ್ಕಾಚಾರದಲ್ಲಿ ಹಣದುಬ್ಬರವನ್ನು ಜನವರಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈಗ ಫೆಬ್ರುವರಿ ದತ್ತಾಂಶ ಬಿಡುಗಡೆ ಆಗಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *