Headlines

ಸಿಬಿಎಫ್​​ಸಿ ಹೊಸ ನಿಯಮ: ನಿರ್ಮಾಪಕರಿಗೆ ತಂದಿದೆ ತಲೆನೋವು

ಸಿಬಿಎಫ್​​ಸಿ ಹೊಸ ನಿಯಮ: ನಿರ್ಮಾಪಕರಿಗೆ ತಂದಿದೆ ತಲೆನೋವು


ಸಿಬಿಎಫ್ ಸಿ ಹೊಸ ನಿಯಮ: ನಿರ್ಮಾಪಕರಿಗೆ ತಲೆನೋವು

ಸಿಬಿಎಫ್ಸಿ (CBFC) ಯಿಂದ ಇತ್ತೀಚೆಗೆ ಕೆಲವು ನಿರ್ಮಾಪಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವು ನಿರ್ಮಾಪಕರು ಇತ್ತೀಚೆಗಿನ ದಿನಗಳಲ್ಲಿ ಸಿಬಿಎಫ್ ಸಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಕೇಸುಗಳನ್ನು ಸಹ ದಾಖಲಿಸಲಾಗಿದೆ. ಇದೀಗ ಸಿಬಿಎಸ್ಸಿ ಹೊರ ನಿಯಮ ಜಾರಿ ಮಾಡಿದ್ದು, ಈ ನಿಯಮ ನಿರ್ಮಾಪಕರಿಗೆ ಇನ್ನಷ್ಟು ತಲೆನೋವು ತರಲಿದೆ. ಆದರೆ ಇದು ಉಪಯುಕ್ತ ನಿಯಮವಾಗಿದೆ, ನಿರ್ಮಾಪಕರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ನೋಡಬೇಕಾಗಿದೆ.

ಸಿಬಿಎಫ್ ಸಿಯ ನಿಯಮದ ಪ್ರಕಾರ, ಈ ಭಾನುವಾರದ (ಮಾರ್ಚ್ 15) ಪ್ರಮಾಣ ಪತ್ರಕ್ಕೆ ಸಲ್ಲಿಕೆ ಆಗುವ ಎಲ್ಲ ಸಿನಿಮಾಗಳು ಕಡ್ಡಾಯವಾಗಿ ಕ್ಯಾಪ್ಷನ್ಸ್ (ಕ್ಲೋಸ್ಡ್ ಕ್ಯಾಪ್ಷನ್ಸ್ ಅಥವಾ ಓಪನ್ ಕ್ಯಾಪ್ಷನ್ಸ್) ಅಥವಾ ಸಬ್ ಟೈಟಲ್ಸ್ ಹಾಗೂ ಆಡಿಯೋ ಡಿಸ್ಕ್ರಿಪ್ಷನ್ ಹೊಂದಿರಬೇಕು. ಒಂದೊಮ್ಮೆ ಈ ಕ್ಯಾಪ್ಷನ್‌ಗಳು ಇಲ್ಲದೇ ಇದ್ದಲ್ಲಿ ಸಿನಿಮಾವನ್ನು ಪ್ರಮಾಣ ಪತ್ರಕ್ಕೆ ಪರಿಗಣಿಸಲಾಗುವುದಿಲ್ಲ.

ಸಿನಿಮಾಗಳಿಗೆ ಸಿಸಿ, ಓಸಿ (ಸಬ್‌ಟೈಟಲ್ಸ್) ಮತ್ತು ಆಡಿಯೋ ಡಿಸ್ಕ್ರಿಪ್ಷನ್‌ಗಳನ್ನು ಹಾಕುವುದು ನಿರ್ಮಾಪಕರಿಗೆ ಹೆಚ್ಚಿನ ಬಾಬತ್ತಾಗಲಿದೆ. ಭಾರಿ ದೊಡ್ಡ ಮೊತ್ತ ಇದಕ್ಕೆ ಖರ್ಚಾಗದಿದ್ದರೂ ಸಹ ಇದು ಹೆಚ್ಚುವರಿ ಖರ್ಚಾದರೂ ಖಂಡಿತ ಎನಿಸಿಕೊಳ್ಳಲಿದೆ. ಜೊತೆಗೆ, ಆಡಿಯೋ ಡಿಸ್ಕ್ರಿಪ್ಷನ್ ಸಹ ಸೇರಿಸಬೇಕಾಗಿರುವದರಿಂದ ಡಬ್ಬಿಂಗ್ ಅವಧಿ ಹೆಚ್ಚಾಗಲಿದೆ. ಪ್ರತ್ಯೇಕ ಧ್ವನಿ ಕಲಾವಿದರ ನೆರವು ಪಡೆಯಲಾಯಿತು. ಇದೆಲ್ಲವೂ ಖರ್ಚಿನ ವಿಷಯವೇ ಆಗಿದೆ.

ಇದನ್ನೂ ಓದಿ:’ಜನ ನಾಯಕ’ ವಿವಾದ: ಸಿಬಿಎಫ್ಸಿ ಮಾಡಿದ್ದೇನು? ವಿವರಿಸಿದ ನಿರ್ಮಾಪಕ

ಒಟಿಟಿ ಜಮಾನದಲ್ಲಿ ಈ ಕ್ಯಾಪ್ಷನ್‌ಗಳು ಎಲ್ಲಾ ಸಿನಿಮಾಗಳು ಕಡ್ಡಾಯವಾಗಿ ಅಳವಡಿಸಿಕೊಳ್ಳುತ್ತವೆ. ಕೆಲವು ಸಿನಿಮಾಗಳಿಗೆ ಒಟಿಟಿಗಳೇ ಕ್ಯಾಪ್ಷನ್ ನೀಡುತ್ತವೆ. ಆದರೆ ಭಾರತೀಯ ಸಿನಿಮಾಗಳು ಆಡಿಯೋ ಡಿಸ್ಕ್ರಿಪ್ಷನ್‌ಗಳನ್ನು ಸೇರಿಸುವುದು ಕಡಿಮೆ. ಆದರೆ ಇನ್ನು ಮುಂದೆ ಇದು ಸಹ ಕಡ್ಡಾಯ ಆಗಲಿದೆ. ಜೊತೆಗೆ, ಸಬ್‌ಟೈಟಲ್‌ಗಳ ಗಾತ್ರದ ಬಗ್ಗೆಯೂ ಸಿಬಿಎಫ್‌ಸಿ ನಿಯಮ ಮಾಡಿದ್ದು, ಇದು ಕೆಲವು ನಿರ್ದೇಶಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *