ನಾಗ ಚೈತನ್ಯ ಸಿಕ್ಸ್ ಪ್ಯಾಕ್: ವೈರಲ್ ಆದ ಫೋಟೋ ನೋಡಿ ಅಭಿಮಾನಿಗಳಿಗೆ ಅಚ್ಚರಿ

ನಾಗ ಚೈತನ್ಯ ಸಿಕ್ಸ್ ಪ್ಯಾಕ್: ವೈರಲ್ ಆದ ಫೋಟೋ ನೋಡಿ ಅಭಿಮಾನಿಗಳಿಗೆ ಅಚ್ಚರಿ


ನಾಗ ಚೈತನ್ಯ ಸಿಕ್ಸ್ ಪ್ಯಾಕ್: ವೈರಲ್ ಆದ ಫೋಟೋ ನೋಡಿ ಅಭಿಮಾನಿಗಳಿಗೆ ಅಚ್ಚರಿ

ಅಕ್ಕಿನೇನಿ ನಾಗ ಚೈತನ್ಯ (ನಾಗ ಚೈತನ್ಯ) ಅಂದ್ರೆ ತಕ್ಷಣ ನೆನಪಾಗೋದು ಅವರ ಲವರ್ ಬಾಯ್ ಇಮೇಜ್. ಆದರೆ, ಅವರ ಮುಂದಿನ ಬಹುನಿರೀಕ್ಷಿತ ಪೌರಾಣಿಕ ಥ್ರಿಲ್ಲರ್ ‘ವೃಷಕರ್ಮ’ (ವೃಷಕರ್ಮ) ಸಿನಿಮಾಗಾಗಿ ಅವರು ಮಾಡಿಕೊಂಡಿರುವ ದೈಹಿಕ ಬದಲಾವಣೆ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ. ಇತ್ತೀಚೆಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೊಸ ಫೋಟೋಗಳು ಈಗ ವೈರಲ್ ಆಗಿವೆ. ಜನರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಸಿಕ್ಸ್ ಪ್ಯಾಕ್ (ಸಿಕ್ಸ್ ಪ್ಯಾಕ್) ಅವತಾರದಲ್ಲಿ ನಾಗ ಚೈತನ್ಯ ಮಿಂಚುತ್ತಿದ್ದಾರೆ. ಅಭಿಮಾನಿಗಳಿಗೆ ಈ ಲಕ್ ಇಷ್ಟ ಆಗಿದೆ.

ಸೌಮ್ಯ ಸ್ವಭಾವದ ಪಾತ್ರಗಳಲ್ಲಿ ಯಾವಾಗಲೂ ಕಾಣಿಸಿಕೊಳ್ಳುತ್ತಿದ್ದ ನಾಗ ಚೈತನ್ಯ, ಈ ಬಾರಿ ಮಸಲ್ ಬೆಳೆಸಿ, ದಪ್ಪ ಗಡ್ಡ ಮತ್ತು ಬೇರೆ ಹೇರ್ ಸ್ಟೈಲ್ ಮೂಲಕ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ತಮ್ಮ ವರ್ಕ್ಔಟ್ ಫೋಟೋ ಹಂಚಿಕೊಂಡಿದ್ದಾರೆ ಅವರು, ಕೈಯಲ್ಲಿ ಡಂಬ್ಬೆಲ್ಸ್ ಹಿಡಿದು ಸಿಕ್ಸ್ ಪ್ಯಾಕ್ ಪ್ರದರ್ಶಿಸಿದ್ದಾರೆ. ‘ವೃಷಕರ್ಮ’ ಚಿತ್ರದಲ್ಲಿ ಅವರು ನಿಧಿ ಶೋಧಕನ ಪಾತ್ರದಲ್ಲಿ ನಟಿಸಿದ್ದಾರೆ, ಈ ಲುಕ್ ಪಾತ್ರಕ್ಕೆ ಪೂರಕವಾಗಿದೆ.

ತಮ್ಮ ಬದಲಾವಣೆಯ ಬಗ್ಗೆ ಮಾತನಾಡಿರುವ ನಾಗ ಚೈತನ್ಯ, ‘ವೃಷಕರ್ಮ ಚಿತ್ರದಲ್ಲಿ ನಾನು ನಿಧಿ ಹುಡುಕುವ ಸಾಹಸದ ಪಾತ್ರ ಮಾಡುತ್ತಿದ್ದೇನೆ. ನಿರ್ದೇಶಕರು ಮತ್ತು ನಾನು ಚರ್ಚಿಸಿ, ಈ ಪಾತ್ರಕ್ಕೆ ಅಥ್ಲೆಟಿಕ್ ಬಾಡಿ ಇರಬೇಕು ಎಂದು ನಿರ್ಧರಿಸಿದೆ. ಇದಕ್ಕಾಗಿ ಸ್ಟ್ರೆಂಟ್ ಟ್ರೇನಿಂಗ್, ಈಜು ಮತ್ತು ಯೋಗ ಒಳಗೊಂಡಿರುವ ವಿಶೇಷ ವರ್ಕ್ಔಟ್ ಮಾಡಿದ್ದೇನೆ. ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಕಟ್ಟುನಿಟ್ಟಾದ ಆಹಾರ ಕ್ರಮವನ್ನು ಪಾಲಿಸುತ್ತೇನೆ’ ಫಿಟ್ನೆಸ್ ಟ್ರೇನರ್ ಅರುಣವ ಭಟ್ಟಾಚಾರ್ಯ ಕೂಡ ಚೈತನ್ಯ ಅವರ ಶ್ರಮವನ್ನು ಶ್ಲಾಘಿಸಿದ್ದಾರೆ.

‘ವಿರೂಪಾಕ್ಷ’ ಖ್ಯಾತಿಯ ಕಾರ್ತಿಕ್ ನಿರ್ದೇಶನ ಮಾಡಿರುವ ‘ವೃಷಕರ್ಮ’ ಚಿತ್ರವು ದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತಿದೆ. ಚಿತ್ರದಲ್ಲಿ ನಾಗ ಚೈತನ್ಯ ಅವರಿಗೆ ಜೋಡಿಯಾಗಿ ಮೀನಾಕ್ಷಿ ಚೌಧರಿ ನಟಿಸುತ್ತಿದ್ದಾರೆ. ಉಳಿದಂತೆ ಜಯರಾಮ್, ಸತ್ಯ ಅಕ್ಕಲ ಮತ್ತು ಸ್ಪರ್ಶ್ ಶ್ರೀವಾಸ್ತವ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಾರ್ಚ್ 20 ರಂದು ಈ ಸಿನಿಮಾ ಅದ್ದೂರಿಯಾಗಿ ತೆರೆಕಾಣಲಿದೆ.

ಇದನ್ನೂ ಓದಿ: ವೇದಿಕೆಯಲ್ಲಿ ಜಾರಿಬಿದ್ದ ನಾಗ ಚೈತನ್ಯ

ನಾಗ ಚೈತನ್ಯ ಅವರ ಈ ಹೊಸ ಫೋಟೋ ನೋಡಿದ ಅಭಿಮಾನಿಗಳು, ‘ಇದು ನಿಮ್ಮ ಎರಡನೇ ಇನಿಂಗ್ಸ್’ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸಿಕ್ಸ್ ಪ್ಯಾಕ್ ಅವತಾರದಿಂದಾಗಿ ‘ವೃಷಕರ್ಮ’ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *