ಚಡ್ಡಿ ಹಾಕ್ಕೊಂಡ್​ ಹೋಗೋಳು ಬೇಡ ಅಂದಿದ್ದ Amrthadhaare ಜೈ: ಡ್ರೀಮ್​ ಗರ್ಲ್​ ಜೊತೆ ಎಂಜಾಯ್​

ಚಡ್ಡಿ ಹಾಕ್ಕೊಂಡ್​ ಹೋಗೋಳು ಬೇಡ ಅಂದಿದ್ದ Amrthadhaare ಜೈ: ಡ್ರೀಮ್​ ಗರ್ಲ್​ ಜೊತೆ ಎಂಜಾಯ್​

ಚಡ್ಡಿ ಹಾಕ್ಕೊಂಡ್​ ಹೋಗೋಳು ಬೇಡ ಅಂದಿದ್ದ Amrthadhaare ಜೈ: ಡ್ರೀಮ್​ ಗರ್ಲ್​ ಜೊತೆ ಎಂಜಾಯ್​

’ಅಮೃತಧಾರೆ’ ಧಾರಾವಾಹಿಯ ಖಳನಾಯಕ ಜೆಡಿ ಅಲಿಯಾಸ್ ರಾಣವ್ ಗೌಡ,  ಹಿಂದೆ ಮಲ್ಲಿ ಪಾತ್ರ ನಿರ್ವಹಿಸಿದ್ದ ರಾಧಾ ಭಗವತಿ ಜೊತೆ ನಿಜ ಜೀವನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ, ತಮಗೆ ತನ್ನ ಅಮ್ಮನಂತೆ ಸಂಪ್ರದಾಯಸ್ಥ ಹುಡುಗಿ ಬೇಕು ಎಂದು ರಾಣವ್ ಹೇಳಿಕೊಂಡಿದ್ದರು.

ವಿಲನ್​ ಆದ್ರೂ ಹೆಣ್ಣುಮಕ್ಕಳ ಫೆವರೇಟ್​ ನಟನಲ್ಲಿ ಒಬ್ಬರು ಯಂಗ್​ ಆ್ಯಂಡ್​ ಹ್ಯಾಂಡಸಮ್​ ಆಗಿರೋ ನಟ ರಾಣವ್​ ಗೌಡ. ರಾಣವ್​ ಎಂದರೆ ಬಹುಶಃ ಬಹುತೇಕರಿಗೆ ಅರ್ಥವಾಗಲಿಕ್ಕಿಲ್ಲ. ಇವರೇ ಅಮೃತಧಾರೆ JD ಉರ್ಫ್​ ಜೈ ಉರ್ಫ್​ ಜೈದೇವ್​. ಜೈದೇವ್​ ಕ್ಯಾರೆಕ್ಟರ್​ ಅನ್ನು ಶಪಿಸುವವರೂ ಜೈದೇವ್​ ನಟನೆಗೆ ಜೈಜೈ ಎನ್ನುತ್ತಲೇ ಅವರ ಫೆವರೆಟ್​ ಆಗಿದ್ದಾರೆ. ಇನ್ನು ಯುವತಿಯರಿಗಂತೂ ಜೈದೇವ್​ ಅಂದ್ರೆ ರಾಣವ್​ ಅವ್ರು ಕ್ರಷ್​ ಆಗಿಬಿಟ್ಟಿದ್ದಾರೆ.

ಇನ್ನು, ಅಮೃತಧಾರೆ ಸೀರಿಯಲ್​ನಲ್ಲಿ (Amruthadhaare Serial) ಅಕ್ಕಾವ್ರೇ ಅಕ್ಕಾವ್ರೇ ಎನ್ನುತ್ತಲೇ ಎಲ್ಲರನ್ನೂ ಮೋಡಿ ಮಾಡಿದಾಗ ಮಲ್ಲಿ. ಕೊನೆಗೆ ಮನೆ ಮಾಲೀಕನ ಮಗ ಜೈದೇವ್​ನ ಮೋಸದ ಜಾಲಕ್ಕೆ ಬಿದ್ದು ಗರ್ಭಿಣಿಯಾಗಿದ್ದು ಸೀರಿಯಲ್​ ಪ್ರಿಯರಿಗೆ ತಿಳಿದದ್ದೇ. ಆಗ ಮಲ್ಲಿಯಾಗಿದ್ದವರು ರಾಧಾ ಭಗವತಿ. ಅವರೀಗ ರಿಯಲ್​ ಲೈಫ್​ನಲ್ಲಿ ಅದೇ ಜೈದೇವ್​ ಅರ್ಥಾತ್​ ನಟ ರಾಣವ್​ ಜೊತೆ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ.

ಮಲ್ಲಿಯ ರೋಲ್​ ಸೈಡ್​ ರೋಲ್​ ಆಗಿದ್ದ ಹಿನ್ನೆಲೆಯಲ್ಲಿ, ಮಲ್ಲಿ ರೋಲ್​ನ ಉಲ್ಟಾ ಕ್ಯಾರೆಕ್ಟರ್​, ಸ್ಟ್ರಾಂಗ್​ ಲೇಡಿ, ಲೇಡಿ ಡಾನ್​ ಆಗಿ ನಾಯಕಿಯ ಪಾತ್ರದಲ್ಲಿ ಭಾರ್ಗವಿಯಾಗಿ ರಾಧಾ ಭಗವತಿ ಮಿಂಚುತ್ತಿದ್ದಾರೆ. ಅಮೃತಧಾರೆ ಸೀರಿಯಲ್​ನಲ್ಲಿ ಈಗ ಮಲ್ಲಿ ಪಾತ್ರವನ್ನು ಅನ್ವಿತಾ ಸಾಗರ್​ ಮಾಡುತ್ತಿದ್ದಾರೆ.

ಎಂಗೇಜ್​ಮೆಂಟ್​ ಬೆನ್ನಲ್ಲೇ ಇದೀಗ ಮತ್ತೊಂದು ಫೋಟೋ ಶೇರ್​ ಮಾಡಿದ್ದಾರೆ ನಟಿ ರಾಧಾ ಭಗವತಿ. ಅಪ್ಪಟ ಭಾರತೀಯ ನಾರಿಯಾಗಿ ಇರುವ ರಾಧಾ ಅವರನ್ನೇ ರಾಣವ್​ ಹುಡುಕಿ ಕೊಂಡಿದ್ದು ವಿಶೇಷವೇ. ಏಕೆಂದರೆ ಈ ಹಿಂದೆ ರಾಣವ್​ ಅವರು ತಮ್ಮ ಕನಸಿನ ಕನ್ಯೆಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಅದೀಗ ಮತ್ತೆ ವೈರಲ್​ ಆಗ್ತಿದೆ.

ನಾವೆಲ್ಲಾ 90s ಮಕ್ಕಳಾಗಿರೋ ಕಾರಣ, ನಮಗೆ ನಮ್ಮ ಅಮ್ಮನ ರೀತಿಯ ಪತ್ನಿಯೇ ಬೇಕು ಎಂದುಕೊಳ್ಳುವುದು ಸಹಜ. ನಮ್ಮ ಅಮ್ಮ ತುಂಬಾ ಇನ್ನೋಸೆಂಟ್​. ಅವರಿಗೆ ಆಡಂಬರ, ಮೋಸ ಎಲ್ಲಾ ಗೊತ್ತಿಲ್ಲ. ಅದೇ ರೀತಿಯ ಹುಡುಗಿ ನನ್ನ ಲೈಫ್​ನಲ್ಲಿಯೂ ಬರಲಿ ಎನ್ನೋದು ನನ್ನ ಆಸೆ ಎಂದಿದ್ದರು ನಟ. ನಾವು ಹೇಗೆ ನೋಡಿಕೊಳ್ಳಬೇಕೋ ಹಾಗೆ ನೋಡಿಕೊಳ್ತೇನೆ ಎಂದಿದ್ದರು.

ಲಕ್ಷಣವಾಗಿ ಸೀರೆ ಉಟ್ಟುಕೊಂಡು ಬೊಟ್ಟು ಇಟ್ಟುಕೊಂಡಿರಬೇಕು. ಅದರಲ್ಲಿಯೂ ಮುಖ್ಯವಾಗಿ ಯಾವ ಜಾಗಕ್ಕೆ ಯಾವ ರೀತಿಯ ಡ್ರೆಸ್​ ಹಾಕಬೇಕು ಎನ್ನುವ ಸೆನ್ಸ್​ ಇರಬೇಕು ಎಂದಿದ್ದರು. ಈಗ ನೋಡಿ ಎಷ್ಟೋ ಮಂದಿ ಹುಡುಗಿಯರು ದೇವಸ್ಥಾನಕ್ಕೆ ಚಡ್ಡಿ ಹಾಕ್ಕೊಂಡು ಹೋಗ್ತಾರೆ. ಅವರಿಗೆ ಏನು ಹೇಳೋದು ಹೇಳಿ. ಅದಕ್ಕಾಗಿಯೇ ಒಂದು ಹುಡುಗಿಯ ಅದರಲ್ಲಿಯೂ ಕನ್ನಡದ ಹುಡುಗಿಯ ಸಂಸ್ಕೃತಿಯನ್ನು ಆಕೆ ತಿಳಿದುಕೊಂಡಿರಬೇಕು ಎಂದು ರಾಣವ್​ ಹೇಳಿದ್ದರು.

Source link

Leave a Reply

Your email address will not be published. Required fields are marked *